Friday 26th, April 2024
canara news

ಬಿಎಸ್‍ಕೆಬಿ ಎಸೋಸಿಯೇಶನ್ ಗೋಕುಲ ವತಿಯಿಂದ ಗಣರಾಜ್ಯೋತ್ಸವ ಆಚರಣೆ

Published On : 29 Jan 2019   |  Reported By : Ronida Mumbai


ಹಿರಿಯ ಸಾಹಿತಿ ಡಾ| ವ್ಯಾಸರಾವ್ ನಿಂಜೂರ್‍ರಿಗೆ `ಗೋಕುಲ ರತ್ನ' ಪ್ರಶಸ್ತಿ ಪ್ರದಾನ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.29: ನಾನು ಎಂದೂ ಪ್ರಶಸ್ತಿಗಳನ್ನು ಬಯಸಿದವನಲ್ಲ. ಗೋಕುಲ ನನ್ನ ಮನೆಯಂತೆ ಹಾಗಾಗಿ ಸುರೇಶ್ ರಾಯರು ಈ ಬಾರಿಯ ಪ್ರಶಸ್ತಿಗೆ ನನ್ನ ಆಯ್ಕೆ ಬಗ್ಗೆ ಸೂಚಿಸಿದಾಗ ಅಧ್ಯಕ್ಷರ ಹಾಗೂ ಕಾರ್ಯಕಾರಿ ಸಮಿತಿಯ ಅಭಿಮಾನಕ್ಕೆ ತಲೆಬಾಗಿ ಮನೆಯ ಪ್ರಶಸ್ತಿ ನಿರಾಕರಿಸಲಾಗದೆ ಗೋಕುಲ ರತ್ನ ಸ್ವೀಕರಿಸಿದೆ ಎಂದು ಬಿಎಸ್‍ಕೆಬಿಎ ಮುಖವಾಣಿ `ಗೋಕುಲವಾಣಿ' ಇದರ ಗೌರವ ಸಂಪಾದಕ, ಹಿರಿಯ ಸಾಹಿತಿ, ನಾಡಿನ ಹೆಸರಾಂತ ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರ್ ತಿಳಿಸಿದರು.


ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಾಯನ್ ಮುಂಬಯಿ ಇಂದಿಲ್ಲಿ ಶನಿವಾರ ನವಿಮುಂಬಯಿ ನೆರೂಲ್ ಅಲ್ಲಿನ ತನ್ನ ಆಶ್ರಯ ಸಭಾಗೃಹದಲ್ಲಿ ಭಾರತ ರಾಷ್ಟ್ರದ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದು ಇದೇ ಶುಭಾವಸರದಲ್ಲಿ `ಸಂಜೀವನಿ ಟ್ರಸ್ಟ್ ಮುಂಬಯಿ' ಸ್ಥಾಪಿಸಿ ವಾರ್ಷಿಕವಾಗಿ ಪ್ರದಾನಿಸಲ್ಪಡುವ 2019ನೇ ಸಾಲಿನ ವಾರ್ಷಿಕ ಪ್ರತಿಷ್ಠಿತ `ಗೋಕುಲ ರತ್ನ' ಪ್ರಶಸ್ತಿಯನ್ನು `ಗೋಕುಲವಾಣಿ'ಯ ಗೌರವ ಸಂಪಾದಕರಾಗಿ ಮೂರು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಾಸರಾವ್ ನಿಂಜೂರ್ ಅವರಿಗೆ ಪ್ರದಾನಿಸಲಗಿದ್ದು ಪುರಸ್ಕಾರ ಸ್ವೀಕರಿಸಿ ಡಾ| ನಿಂಜೂರ್ ಮಾತನಾಡಿದರು.

ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅತಿಥಿü ಗಣ್ಯರಾಗಿ ಉಪಸ್ಥಿತ ಹಿರಿಯ ಸಾಹಿತಿಗಳಾದ ಡಾ| ಸುನಿತಾ ಎಂ.ಶೆಟ್ಟಿ, ಮಿತ್ರಾ ವೆಂಕಟ್ರಾಜ್, ಹೆಚ್.ಬಿ.ಎಲ್ ರಾವ್, ಅಹಲ್ಯಾ ಬಲ್ಲಾಳ್, ಪತ್ರಕರ್ತ ಶ್ರೀನಿವಾಸ್ ಜೋಕಟ್ಟೆ ಉಪಸ್ಥಿತರಿದ್ದು, ಪುರಸ್ಕೃತರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನಪತ್ರ ಪ್ರದಾನಿಸಿ ಶುಭ ಕೋರಿದರು.

ಸುನಿತಾ ಶೆಟ್ಟಿ ಅವರು ಡಾ| ನಿಂಜೂರ್ ಅವರ ಸಾಹಿತ್ಯ ಸಾಧನೆಯ ಬಗ್ಗೆ ಸ್ವರಚಿತ ಕವನವನ್ನು ವಾಚಿಸಿ ಅರ್ಪಿಸಿ ಅಭಿನಂದಿಸಿದರು.

ಮಿತ್ರಾ ವೆಂಕಟ್ರಾಜ್, ಶ್ರೀನಿವಾಸ್ ಜೋಕಟ್ಟೆ, ಹೆಚ್.ಬಿ.ಎಲ್.ರಾವ್ ಸಂದರ್ಭೋಚಿತವಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸತ್ತಾ, ಪ್ರಸಿದ್ಧ ವಿಜ್ಞಾನಿಯಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ನಿಂಜೂರ್ ಅವರಿಂದ ಇನ್ನಷ್ಟು ಹೊಸ ಕಾದಂಬರಿಗಳು ಶೀಘ್ರವಾಗಿ ಹೊರ ಬರುವಂತಾಗಲಿ ಎಂದು ಹಾರೈಸಿದರು.

ಅಹಲ್ಯಾ ಬಲ್ಲಾಳ್ ಅವರು ನಿಂಜೂರ್ ಅವರ `ತೆಂಕ ನಿಡಿಯೂರಿನ ಕುಳವಾರಿಗಳು' ಪ್ರಸಿದ್ಧ ಕಾದಂಬರಿಯಿಂದ ಆಯ್ದ ಹಾಸ್ಯ ಭಾಗವನ್ನು ವಾಚಿಸಿದರು.

ಡಾ| ವ್ಯಾಸರಾವ್ ಅವರು ಅತ್ಯಂತ ಸರಳ ಸಜ್ಜನ ವ್ಯಕ್ತಿ. ಅತ್ಯುನ್ನತ ವಿದ್ಯಾಭ್ಯಾಸವನ್ನು ಪಡೆದು ವಿಜ್ಞಾನಿಯಾಗಿ, ಶ್ರೇಷ್ಠ ಸಾಹಿತಿಯಾಗಿ ಕಳೆದ 32 ವರ್ಷಗಳಿಂದ ಗೋಕುಲವಾಣಿಯನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಾ, ಉನ್ನತ ಗುಣಮಟ್ಟಕ್ಕೆ ಏರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಗೋಕುಲದ ಅಮೂಲ್ಯ ರತ್ನ. ಅವರಿಂದ ಇನ್ನು ಹೆಚ್ಚಿನ ಸಾಹಿತ್ಯ ಸೇವೆ ನಡೆಯಲಿ ಎಂದು ಡಾ| ಸುರೇಶ್ ರಾವ್ ಅಧ್ಯಕ್ಷೀಯ ಭಾಷಣಗೈದು ನಿಂಜೂರ್‍ಗೆ ಶುಭಾರೈಸಿದರು.

ಬೆಳಿಗ್ಗೆ ಅಸೋಸಿಯೇಶನ್‍ನ ಉಪಾಧ್ಯಕ್ಷ ವಾಮನ್ ಹೊಳ್ಳ ಧ್ವಜಾರೋಹಣಗೈದು ಗಣರಾಜ್ಯದ ಮಹತ್ವದ ಬಗ್ಗೆ ತಿಳಿಸಿ ನೆರೆದವರಿಗೆ ಗಣರಾಜ್ಯೋತ್ಸವದ ಶುಭಾಶಯ ಹಾರೈಸಿದರು. ಡಾ| ಸುರೇಶ್ ರಾವ್ ಗೋಕುಲ ಕಟ್ಟಡ ನಿರ್ಮಾಣದ ಸದ್ಯದ ಪ್ರಗತಿಯನ್ನು ಸದಸ್ಯರಿಗೆ ಮನವರಿಸಿ ಉಪಸ್ಥಿತ ಕೊಡುಗೈ ದಾನಿಗಳ ಉದಾರತೆ ಕೊಂಡಾಡಿದರು. ಹಾಗೂ ಗತ ಶೆಕ್ಷಣಿಕ ವರ್ಷದಲ್ಲಿ ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾಥಿರ್üಗಳನ್ನು ಸ್ಮರಣಿಕೆಗಳನ್ನಿತ್ತು ಪುರಸ್ಕರಿಸಿದರು.

ಸಂಜೀವನಿ ಟ್ರಸ್ಟ್‍ನ ಜಗದೀಶ್ ಆಚಾರ್ಯ ಗೋಕುಲರತ್ನ ಪ್ರಶಸ್ತಿ ಬಗ್ಗೆ ತಿಳಿಸಿದರು. ಮಹಿಳಾ ವಿಭಾಗಧ್ಯಕ್ಷೆ ಪ್ರೇಮಾ ಬಿ.ರಾವ್ ಸನ್ಮಾನ ಪತ್ರ ವಾಚಿಸಿದರು. ಜತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಫಲಾನುಭವಿ ವಿದ್ಯಾಥಿರ್üಗಳ ಯಾದಿ ವಾಚಿಸಿದರು. ಶೈಲಿನಿ ರಾವ್ ಸಭಾ ಕಾರ್ಯಕ್ರಮ ನಿರೂಪಿಸಿದ್ದು, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿ ಧನ್ಯವದಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷೆ ಶೈಲಿನಿ ರಾವ್ ಉಪಸ್ಥಿತರಿದ್ದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಸೋಸಿಯೇಶನ್‍ನ ವಿವಿಧ ವಲಯಗಳ ಸದಸ್ಯರು ಹಾಗೂ ಬಾಲ ಕಲಾವೃಂದದವರು ಕರೌಕೆ ಹಿನ್ನೆಲೆಯೊಂದಿಗೆ ದೇಶಭಕ್ತಿಗೀತೆ, ಜಾನಪದ ನೃತ್ಯಗಳು, `ಅರ್ಥದಲ್ಲಿ ಅನರ್ಥ' ಹಾಸ್ಯ ಪ್ರಹಸನ, ಮಕ್ಕಳಿಂದ `ಅಂಬೆ ಶಾಪ' ಪೌರಾಣಿಕ ಪ್ರಹಸನ, `ಅಡುಗೆ ಸ್ಪರ್ಧೆ' ಹಾಸ್ಯ ಪ್ರಹಸನ ಗೋಕುಲ ಬಾಲ ಕಲಾವೃಂದದ ಚಿಣ್ಣರು `ನಾಮದ ಬಲ' ಪೌರಾಣಿಕ ನಾಟಕ ಇತ್ಯಾದಿಗಳೊಂದಿಗೆ ಮನೋರಂಜನೆ ನೀಡಿದದರು. ಚಂದ್ರಶೇಖರ್ ಭಟ್, ಅನುರಾಧಾ ರಾವ್ ಮತ್ತು ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಹಿತ ನೂರಾರು ಜನರು ಉಪಸ್ಥಿತರಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here