Friday 26th, April 2024
canara news

70ನೇ ಗಣರಾಜ್ಯೋತ್ಸ ಸಂಭ್ರಮಿಸಿದ ಕನ್ನಡ ಸಂಘ ಸಾಂತಾಕ್ರೂಜ್

Published On : 01 Feb 2019


ಸಮಗ್ರ ಜನತೆಯ ಉನ್ನತಿಯೇ ರಾಷ್ಟ್ರದ ಪ್ರಗತಿ: ಎಲ್ವೀ ಅವಿೂನ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.31: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ಸಂಭ್ರಮಿಸುವಂತೆ ಈ ಬಾರಿ 70ನೇ ಗಣರಾಜ್ಯೋತ್ಸವನ್ನು ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಆಚರಿಸಿದ್ದು, ಕಲೀನಾ ಅಲ್ಲಿನ ಸಂಘದ ಸ್ವಕಛೇರಿ ಮುಂಭಾಗದಲ್ಲಿ ಅವಿೂನ್ ಧ್ವಜಾರೋಹನ ನೆರವೇರಿಸಿ ರಾಷ್ಟ್ರ ಗೌರವಗೈದು ಹುತಾತ್ಮ ರಾಷ್ಟ್ರದ ಯೋಧರು ಮತ್ತು ನಾಯಕರನ್ನು ಮತ್ತು ದೇಶಭಕ್ತರನ್ನು ಸ್ಮರಿಸಿದರು.

ಭಾರತ ದೇಶ ವಿಶ್ವದ ಬಲಿಷ್ಠ ರಾಷ್ಟ್ರದಲ್ಲೊಂದಾಗಿದ್ದು ಸಾಂಸ್ಕೃತಿಕವಾಗಿ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಇಲ್ಲಿನ ನೀತಿ, ಮೌಲ್ಯ, ಅಭಿವೃದ್ಧಿವೇಗ, ತಾಂತ್ರಿಕ ನೈಪುಣ್ಯತೆಗಳು ಇತರೇ ದೇಶಗಳಿಗೆ ಮೀರಿ ನಿಂತಿದೆ. ಇವೆಲ್ಲವೂ ಸ್ವತಂತ್ರ್ಯಪೂರ್ವದ ದೇಶಭಕ್ತರು, ಧುರೀಣರು ಮತ್ತು ನಮ್ಮ ಯೋಧರ ತ್ಯಾಗದ ಫಲವಾಗಿದೆ. ಅನೇಕ ಮಹನೀಯರು ಸ್ವತಂತ್ರ್ಯ ಭಾರತಕ್ಕಾಗಿ ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಅವರ ಶ್ರಮ, ತ್ಯಾಗ, ಸಾಧನೆಗಳನ್ನು ಸ್ಮರಿಸುವ ಪುಣ್ಯವಸರ ಈ ಗಣರಾಜ್ಯೋತ್ಸವ ಆಚರಣೆಯಾಗಿದೆ ಎಂದು ಎಲ್ವೀ ಅವಿೂನ್ ತಿಳಿಸಿದರು.

ಸಂವಿಧಾನಾಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರಚಿತ ಸಂವಿಧಾನ ರಚನಾ ಸಮಿತಿ ಹೊಸ ಸಂವಿಧಾನದ ಸಂಕ್ರಮಣ ನಿಬಂಧನೆಗಳ ಅಡಿಯಲ್ಲಿ ರಚಿಸಿದ ಸಂವಿಧಾನ ಸಭೆ ಭಾರತದ ಸಂಸತ್ತು ಆಯಿತು. ಈ ದಿನವೇ ಭಾರತೀಯರ ರಿಪಬ್ಲಿಕ್ ಡೇ ಅರ್ಥತ್ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಇದರ ಮಹತ್ವ ಅರಿತು ಬಾಳುವ ಅಗತ್ಯ ಪ್ರತೀಯೋರ್ವ ಭಾರತೀಯರ ಪರಮ ಕರ್ತವ್ಯವಾಗಬೇಕು. ಅವಾಗಲೇ ಬಾಪುಜಿ ಮಹಾತ್ಮಾ ಗಾಂಧಿಜೀ ಕಂಡ ರಾಮರಾಜ್ಯ ಸಾಧ್ಯವಾಗುವುದು. ಜೊತೆಗೆ ಸಮಗ್ರ ಜನತೆಯ ಉನ್ನತಿಯೊಂದಿಗೆ ರಾಷ್ಟ್ರದ ಪ್ರಗತಿ ಸುಲಭವಾಗುವುದು ಎಂದೂ ಎಲ್ವೀ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ವಜ್ರಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಎಂ ಸನಿಲ್, ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್, ಜಿ ಆರ್.ಬಂಗೇರ, ಸುಮಾ ಪೂಜಾರಿ, ರಾಜಶೇಖರ್ ಅಂಚನ್, ಚಂದಯ್ಯ ಪೂಜಾರಿ, ಯಾದವ ಶೆಟ್ಟಿ, ಶೋಭಾ ಜಿ.ಶೆಟ್ಟಿ, ಬಾನು ಅನ್ಸಾರಿ, ದಿವ್ಯಾ ಶೆಟ್ಟಿ, ಜೋತ್ಸಾ ್ನ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here