Friday 26th, April 2024
canara news

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ಮಹಿಳೆಯರ ಹಳದಿ ಕುಂಕುಮ ಕಾರ್ಯಕ್ರಮ

Published On : 04 Mar 2019   |  Reported By : Rons Bantwal


ಮಹಿಳೆಯರು ಸಂಸ್ಕೃತಿಯ ಪರಿ ಪಾಲಕರಾಗಬೇಕು: ರಂಜನಿ ಸುಧಾಕರ್ ಹೆಗ್ಡೆ  

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಮಹಿಳೆಯರಲ್ಲಿ ಸರಳ ಸ್ವಭಾವ ಮೈಗೂಡಿಸಿದಾಗ ಅವರ ಘನತೇ ಸೌಮ್ಯತೆ ಹೆಚ್ಚುತ್ತದೆ. ಹಳದಿ ಕುಂಕುಮ ಸಾಂಪ್ರದಾಯಿಕ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಯಾಗಿದೆ. ಮಹಿಳೆಯರು ಒಂದಾದಗ ಪರಸ್ಪರ ಸ್ನೇಹತ್ವ ಮತ್ತು ಬಂಧುತ್ವ ಹೆಚ್ಚಾಗುತ್ತದೆ. ಕಷ್ಟ ಸುಖಗಳನ್ನು ಅರ್ಥೈಸಿ ಸಮನತ್ವ ಬಾಳನ್ನು ಮೈಗೂಡಿಸಬಹುದು. ಹಣೆಗೆ ಕುಂಕುಮ, ಹಸ್ತಗಳಿಗೆ ಮಣ್ಣಿನ ಬಳೆ ತೊಡಿಸುವ ಸಂಸ್ಕೃತಿಯೇ ವಿಶಿಷ್ಟವಾದುದು. ಇದು ಸಮಗ್ರ ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡುವ ಶುಭ ಸಂಕೇತವಾಗಿದೆ ಆದುದರಿಂದ ರಂಜನಿ ಸುಧಾಕರ್ ಹೆಗ್ಡೆ ಎಂದು ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಮಹಿಳೆಯರಿಗೆ ಕರೆಯಿತ್ತರು.

ಇಂದಿಲ್ಲಿ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ಮಹಿಳಾ ವಿಭಾಗವು ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ವಾರ್ಷಿಕ ಹಳದಿ ಕುಂಕುಮ ಕಾರ್ಯಕ್ರಮ ಜರುಗಿಸಿದ್ದು ಕಾರ್ಯಕ್ರಮ ಉದ್ಘಾಟಿಸಿ ರಂಜನಿ ಹೆಗ್ಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆ ಡ್‍ನ ನಿರ್ದೇಶಕಿ ಉಮಾ ಕೃಷ್ಣ ಶೆಟ್ಟಿ, ಎಸ್ಸಾರ್ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕಿ ಅನಿತಾ ಆರ್.ಕೆ ಶೆಟ್ಟಿ ಮತ್ತು ಸಮಾಜ ಸೇವಕಿ ಯಶೋಧ ಎನ್.ಟಿ ಪೂಜಾರಿ, ಸದಸ್ಯೆಯರಾದ ಸುಧಾ ಎಲ್ವೀ ಅವಿೂನ್ ವೇದಿಕೆಯಲ್ಲಿದ್ದು ಸಂಘವು ಕಾರ್ಯಕ್ರಮ ಪ್ರಯುಕ್ತ ಮಹಾನಗರದಲ್ಲಿನ ವಿವಿಧ ಕನ್ನಡ ಸಂಘ ಸಂಸ್ಥೆಗಳ ಮಹಿಳಾ ವಿಭಾಗದ ಸದಸ್ಯೆಯರಿಗಾಗಿ ಆಯೋಜಿಸಿದ್ದ ಭಾವಗೀತೆ ಸ್ಪರ್ಧಿಗಳಿಗೆ ಬಹುಮಾನಕ್ಕೆ ಪಾತ್ರರಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಹುಟ್ಟೂರ ಸಂಸ್ಕೃತಿಯ ಶ್ರದ್ಧೆಯನ್ನು ಕರ್ಮ ಭೂಮಿಯಲ್ಲಿ ಅಚಾರಿಸಿ ಧರ್ಮ ಶ್ರಧ್ಹೆಯನ್ನು ವ್ಯಾಪಿಸುವ ಮಹಿಳಾ ಪ್ರಧಾನ ಕಾರ್ಯಕ್ರಮ ಸ್ತುತ್ಯರ್ಹ. ಒಂದು ಧರ್ಮದಲ್ಲಿ ಅರಸಿನ ಅನ್ನುವುದಕ್ಕೆ ಬಹಳ ಮಹತ್ವವಿದೆ. ಇಂತಹ ಸಂಸ್ಕೃತಿಯನ್ನು ಹಬ್ಬವಾಗಿ ಆಚರಿಸಿ ಮಹಿಳೆಯರನ್ನು ಒಗ್ಗೂಡಿಸಿ ಪರಸ್ಪರ ಪರಿಚರಿಸಿ ಮುನ್ನಡೆಯುವ ಈ ಸಂಪ್ರದಾಯ ಪರಂಪರಗತವಾಗಿ ಮುನ್ನಡೆಯಲಿ ಎಂದು ಉಮಾ ಶೆಟ್ಟಿ ಹಾರೈಸಿದರು.

ಅರಸಿನ ಕುಂಕುಮ ಅಂದರೆ ಹಿಂದೂ ಸಂಸ್ಕೃತಿಯಲ್ಲಿ ಮುತ್ತೈದೆಯರಿಗೆ ಸದ್ಭಾವನೆ, ಸಮೃದ್ಧಿಯ ಸಂಕೇತ. ಅರಶಿನ ಅಂದರೆ ಶುದ್ಧ, ಕುಂಕುಮ ಅಂದರೆ ಶಕ್ತಿ ಎಂದಾರ್ಥ. ನಾರಿಯರ ಹಣೆಯಲ್ಲಿ ಕುಂಕುಮ ಇಲ್ಲವಾದರೆ ಸಂಸ್ಕೃತಿ ಶೃಂಗಾರ ಆಗದು. ಇಂತಹ ಆಚರಣೆ ನಮ್ಮೆಲ್ಲರಿಗೂ ಜೀವನ ಪೂರ್ತಿಯಾಗಿಸುವಲ್ಲಿ ಆರಿಸೋಣ ಎಂದು ಅನಿತಾ ಆರ್.ಕೆ ತಿಳಿಸಿದರು.

ಒಂದು ಕಾಲದಲ್ಲಿ ಮನೆಯಲ್ಲೇ ಗೃಹಿಣಿಯರಾಗಿ ಸೇವೆಯಲ್ಲಿದ್ದ ಮಹಿಳೆಯರು ಇಂದು ಇಂತಹ ಕಾರ್ಯಕ್ರಮಗಳಿಂದ ವೇದಿಕೆಗಳನ್ನು ಅಲಂಕರಿಸಿ ಮಾತೃ ಸಂಸ್ಕೃತಿಯನ್ನು ಭಾವೀ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿವೆ. ಮಹಿಳೆಯರು ಸಮಾಜಕ್ಕೆ ಮಾರ್ಗದರ್ಶನರಾಗಲು ಸಶಕ್ತರಾಗಿರುವುದು ಅಭಿನಂದನೀಯ. ಶಿಸ್ತು ಬದ್ಧ ಕಾರ್ಯ ಚಟುವಟಿಕೆಗಳಿಗೆ ಮಹಿಳೆಯರು ಪ್ರಧಾನರಾಗಿದ್ದು ಮಹಿಳಾ ಪ್ರಧಾನ್ಯತೆಗೆ ಪೂರಕವಾದ ಈ ಸಂಘ ಸಾಕ್ಷಿಯಾಗಿದೆ ಎಂದು ಅಧ್ಯಕ್ಷೀಯ ಬಾಷಣದಲ್ಲಿ ಎಲ್ವೀ ಅಮೀನ್ ತಿಳಿಸಿದರು.

ಸೋಲೋ (ಏಕಾಂಗಿ) ಸ್ಪರ್ಧೆಯಲ್ಲಿ ವಿನಯ ಅನಂತಕೃಷ್ಣ ಗೋರೆಗಾಂ (ಪ್ರಥಮ), ವಿಮಲಾ ದೇವಾಡಿಗ ಪೆÇವಾಯಿ (ದ್ವಿತೀಯ), ತನುಜಾ ಭಟ್ ಬೋರಿವಿಲಿ (ತೃತೀಯ) ಮತ್ತು ಸಮೂಹ (ಗ್ರೂಪ್) ಸ್ಪರ್ಧೆಯಲ್ಲಿ ಕನ್ನಡ ಸಂಘ ಧಾಣುರ್ಕರ್‍ವಾಡಿ (ಪ್ರಥಮ), ಪೆÇವಾಯಿ ಕನ್ನಡ ಸಂಘ (ದ್ವಿತೀಯ), ಪನ್ವೇಲ್ ಕನ್ನಡ ಸಂಘ (ತೃತೀಯ) ಬಹುಮಾನಕ್ಕೆ ಪಾತ್ರರಾಗಿದ್ದು ಅತಿಥಿüಗಳು ವಿಜೇತರಿಗೆ ಶುಭಾರೈಸಿದರು.


ಸದಸ್ಯೆಯರಾದ ಯಶೋಧ ಆರ್.ಪೂಂಜಾ, ಪ್ರಮೋದಾ ಎಸ್.ಶೆಟ್ಟಿ, ಲತಾ ಪ್ರಭಾಕರ್ ಶೆಟ್ಟಿ, ಸುಜತಾ ಗುಣಪಾಲ್ ಶೆಟ್ಟಿ, ಹರಿಣಾಕ್ಷಿ ಜೆ.ಶೆಟ್ಟಿ, ರತ್ನಾ ಪಿ.ಶೆಟ್ಟಿ ಮತ್ತಿತರ ಗಣ್ಯರು, ಸಂಘದ ಸಲಹಾಗಾರರಾದÀ ಎನ್.ಎಂ ಸನಿಲ್, ಬಿ.ಆರ್ ಪೂಂಜ, ಸದಸ್ಯರಾದ ಶಿವರಾಮ ಕೋಟ್ಯಾನ್, ಜಿ.ಆರ್ ಬಂಗೇರ, ವಿಜಯಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಉಪಸ್ಥಿತರಿದ್ದು, ಆದಿಯಲ್ಲಿ ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ವೀರ ಯೋಧರಿಗೆ ಸಂತಾಪ ಮೌನ ಪ್ರಾರ್ಥನೆ ಮೂಲಕ ಸೂಚಿಸಲಾಯಿತು. ಹಾಗೂ ಪೆÇವಾಯಿ ಕನ್ನಡ ಸಂಘದ ಮಹಿಳಾ ವಿಭಾಗವು ಅಗಲಿದ ಧೀರಾಧಿದೀರ ಸೈನಿಕರಿಗೆ ದೇಶಭಕ್ತಿ ಗೀತೆಯನ್ನಾಡಿ ಅಶ್ರುತಾರ್ಪಣೆ ಸಲ್ಲಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ವೈ.ನೋಂದಾ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜಾತ ಆರ್.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆಯರಾದ ಶಾಲಿನಿ ಜಿ.ಶೆಟ್ಟಿ, ಉಷಾ ವಿ.ಶೆಟ್ಟಿ, ಸುಜಾತ ಸುಧಾಕರ್ ಉಚ್ಚಿಲ್ ಅತಿಥಿüಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷಿ ್ಮೀ ಎನ್.ಕೋಟ್ಯಾ ನ್ ಪ್ರಾರ್ಥನೆಯನ್ನಾಡಿ ಸ್ಪರ್ಧೆಗಳನ್ನು ನಡೆಸಿ ಕೃತಜ್ಞತೆ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here