Friday 26th, April 2024
canara news

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸೇವಾ ಟ್ರಸ್ಟ್ (ಮುಂಬಯಿ) ಸಂಭ್ರಮಿಸಿದ ದಶಮಾನೋತ್ಸವ

Published On : 07 Mar 2019   |  Reported By : Rons Bantwal


ಕೋಟಿ-ಚೆನ್ನಯರು ಪರಾಕ್ರಮಶಾಲಿಗಳಾಗಿ ವೀರರೆಣಿಸಿದವರು : ಹರೀಶ್ ಹೆಜ್ಮಾಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.03: ಕೋಟಿ ಚೆನ್ನಯ ತುಳುನಾಡಿನ ಯೋಧರಾಗಿದ್ದು ಅವರನ್ನು ಅನೇಕರು ಆರಾಧಿಸುತ್ತಾರೆ. ತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯಲ್ಲಿ ಕೋಟಿ-ಚೆನ್ನಯ ನಾಮಂಕಿತÀರು. ಈ ಅವಳಿ ಸೋದರರು ಸತ್ಯಕ್ಕಾಗಿ ಹೋರಾಡಿ ಮಡಿದ ಕಥೆಯೇ ಆರಾಧನೆಗೆ ಮೂಲವಾಗಿದೆ. ಬಿಲ್ಲವ ಜನಾಂಗಕ್ಕೆ ಸೇರಿದ ದೇಯಿ ಬೈದೆತಿ ಎಂಬ ಮಕ್ಕಳಾಗಿ ಜನಿಸಿದ ಇವರು ಜನೋಪಯೋಗಿ ಕಾರ್ಯಗಳನ್ನು ಮಾಡಿ, ಹಲವಾರು ಕಾಳಗಗಳಲ್ಲಿ ಪರಾಕ್ರಮಶಾಲಿಗಳಾಗಿ ಹೋರಾಡಿ ವೀರರೆಣಿಸಿದರು. ಆದುದರಿಂದಲೇ ತುಳುನಾಡಿನಲ್ಲಿ ಇವರನ್ನು ದೈವತ್ವಕ್ಕೇರಿಸಿದ ಪೂಜಿಸಲಾಗುತ್ತಿದೆ ಎಂದು ಅಕ್ಷಯ ಮಾಸಿಕದ ಸಂಪಾದಕ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಕಾರ್ಯದರ್ಶಿ ಹರೀಶ್ ಹೆಜ್ಮಾಡಿ ನುಡಿದರು.

ಇಂದಿಲ್ಲಿ ಭಾನುವಾರ ಸಂಜೆ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ದಶಸಂಭ್ರಮಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ್ದು, ಅವಳಿ ವೀರರಾದ ಕೋಟಿ ಚೆನ್ನಯ ಅವರ ಜೀವನ ಚಿತ್ರಣ ಮತ್ತು `ಕಂಚಿಲ್' ನಾಮದ ಮಹತ್ವವನ್ನು ಮನವರಿಸಿ ಪ್ರಧಾನ ಭಾಷಣಕಾರರಾಗಿದ್ದು ಹರೀಶ್ ಹೆಜ್ಮಾಡಿ ಮಾತನಾಡಿದರು.

ಗರೊಡಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ ಭವ್ಯ ಸಮಾರಂಭದಲ್ಲಿ ಸಮಾಜ ಸೇವಕರೂ, ಉದ್ಯಮಿಗಳಾದ ಅವೆನ್ಯೂ ಸಮೂಹದ ರಘುರಾಮ ಕೆ.ಶೆಟ್ಟಿ, ಡಾ| ಗಿಲ್ಬರ್ಟ್ ಡಿಸೋಜ, ಜಯಕೃಷ್ಣ ಎ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಗೌರವಾನ್ವಿತ ಅತಿಥಿüಗಳಾಗಿದ್ದು ಉದ್ಯಮಿ ಹೆಚ್.ಬಾಬು ಪೂಜಾರಿ ಸೇವಾ ಟ್ರಸ್ಟ್‍ನ ದಶ ಸಂಭ್ರಮದ `ಕಂಚಿಲ್' ಸ್ಮರಣಿಕೆ ಬಿಡುಗಡೆ ಗೊಳಿಸಿದರು.

ಕೋಟಿ-ಚೆನ್ನಯರು ಶೋಷಿತರ ಪರ ನಿಂತು ಅಮರತ್ವ ಪಡೆದ ಕಾರಣ ಅವರ ಹೆಸರಿನಲ್ಲಿ ಹಲವಾರು ಗರೋಡಿ (ವ್ಯಾಯಮ ಶಾಲೆ) ಸ್ಥಾಪಿಸಲ್ಪಟ್ಟವು. ಆ ಪಯ್ಕಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಒಂದಾಗಿದೆ. ತುಳು ನಾಡಿನಾದ್ಯಂತ ಹರಡಿರುವ ಸುಮಾರು 225ಕ್ಕೂ ಅಧಿಕ ಗರೊಡಿಗಳೆಂಬ ದೈವಸ್ಥಾನಗಳಿದ್ದು ನಂಬಿದವರಿಗೆ ರಕ್ಷಣೆ ನೀಡಿ, ಸತ್ಯವನ್ನು ಜಯಿಸಿಕೊಡುತ್ತೇವೆ ಎನ್ನುವ ಇವರ ಅಭಯವಾಣಿ ನಾಡಿನ ಜನವರ್ಗದ ಮನಃಪಟಲದಲ್ಲಿ ಬಲವಾದ ಭರವಸೆ ನೀಡುವಂತಿದ್ದು ಅದಕ್ಕಾಗಿಯೇ ಜಾತಿ ವರ್ಗಭೇದ ಇಲ್ಲದೆ ಜನ ಆರಾಧಿಸುತ್ತಾರೆ. ತುಳುನಾಡಿನ ಜಾನಪದ ವೀರರೆನಿಸಿ, ಕಾರಣೀಕ ತೋರಿ, ಗರೊಡಿಗಳ ಮೂಲಕ ಆರಾಧನೆಗೆ ಒಳಪಟ್ಟು, ದೈವತ್ವಕ್ಕೇರಿದ ಕೋಟಿ-ಚೆನ್ನಯರು ಆಧುನಿಕ ಯುವಜನಾಂಗಕ್ಕೆ ಮಾದರಿ ಆಗಿದ್ದಾರೆ ಎಂದೂ ಹೆಜ್ಮಾಡಿ ಮನವರಿಸಿದರು.

ಊರ ಜನತೆಯಿಂದ ಈ ಗರೋಡಿ ಮತ್ತು ಊರಿನ ಉನ್ನತಿಯಾಗಿದೆ. ಈ ಗರೋಡಿ ಇಡೀ ಊರಿನ ಏಳಿಗೆಗೆ ಪ್ರೇರಕವಾಗಿದೆ. ಸದ್ಯ ವಿಭಜನೆಗೊಂಡ ಸಮಿತಿಗಳನ್ನು ಒಂದಾಗಿಸುವ ಪ್ರಯತ್ನ ಮಾಡುವೆ. ಆ ಮೂಲಕ ಊರಿನ ಏಳಿಗೆಗಾಗಿ ಶ್ರಮಿಸೋಣ. ಮುಂಬಯಿನಲ್ಲಿ ತೋನ್ಸೆಗೆ ಸೇರಿದವರು ಬಹಳಷ್ಟು ಮಂದಿಯಿದ್ದು ನಾವೆಲ್ಲರೂ ಜತಿಮತ ಮರೆತು ಐಕ್ಯತೆ ಮೂಲಕ ಒಗ್ಗೂಡಿ ತೋನ್ಸೆ ಫ್ರೆಂಡ್ಸ್ ಸಂಸ್ಥೆ ಹುಟ್ಟಾಕಿ ಒಂದಾಗೋಣ ಎಂದು ಜಯಕೃಷ್ಣ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.

ಚಂದ್ರಶೇಖರ ಪೂಜಾರಿ ಮಾತನಾಡಿ ಈ ಸಮಿತಿಯ ಎಲ್ಲಾ ಕೆಲಸಗಳು ನಿರ್ವಿಘ್ನಮಯವಾಗಿ ಮುಂದುವರಿಯಲಿ. ಸಂಘವು ಯಾವತ್ತೂ ಪ್ರವರ್ಧಮಾನವಾಗಿ ಮೂಡಿ ಬರಬೇಕು. ಒಳ್ಳೆಯ ಕೆಲಸಗಳಿಗೆ ಯಾವತ್ತೂ ಜಯವಿದೆ. ಗರಡಿಗೆ ಒಳ್ಳೆಯ ವ್ಯವಸ್ಥೆ ಮುಂಬಯಿಯಿಂದ ಆಗುವುದಾದರೆ ಊರಿನವರು ಸಹೃದಯಿಗಳಾಗಿ ಸಹಕರಿಸಲಿ ಎಂದರು.

ದಕ್ಷಿಣ ಭಾರತದಲ್ಲ್ಲಿ ಈ ಗರೋಡಿ ಪ್ರತಿಷ್ಠಿತ ಧಾರ್ಮಿಕ ಕೇಂದ್ರವಾಗಿ ಯಶಸ್ವಿ ಕಾಣಲಿ ಎಂದು ಬಾಬು ಪೂಜಾರಿ ನುಡಿದರು.

ಊರಿನ ವಾತಾವರಣವೇ ಬೇರೆ. ಆದರೆ ಮಹಾನಗರ ಮುಂಬಯಿನಲ್ಲಿ ಎಲ್ಲರೂ ಒಂದಾಗಿ, ಒಟ್ಟಾಗಿ ಸಾಮರಸ್ಯದ ಬದುಕು ಸಾಗಿಸುತ್ತಿರುವುದೇ ಗುರುವರ್ಯರ ಕೃಪೆಯಾಗಿದೆ. ಸದ್ಯ ನಮ್ಮ ಈ ಮುಂಬಯಿಟ್ರಸ್ಟ್ ಸರಕಾರದಡಿ ರಿಜಿಸ್ಟಾರ್‍ಗೊಂಡು ವ್ಯವಸ್ಥಿತವಾಗಿದ್ದು ಗರೋಡಿಯ ಉನ್ನತಿಗಾಗಿ ಕಾರ್ಯನಿರ್ವಾಹಿಸುತ್ತಿದೆ. ಮುಂದೆಯೂ ಮನ ಪೂರ್ವಕವಾಗಿ ನಿಸ್ವಾರ್ಥದಿಂದ ಕೆಲಸ ಮಾಡಬೇಕಾಗಿದೆ. ಭಿನ್ನಪ್ರಾಯ ಬಿಟ್ಟು ಕೆಲಸ ಮಾಡಿದರೆ ಸರ್ವರಿಗೂ ಯಶಸ್ಸು ಸುಲಭವಾಗುವುದು ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.


ತೋನ್ಸೆ ಪುಣ್ಯಭೂಮಿಯ ಸಾಧಕರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಸಿಎ| ಅಶ್ವಿನ್ ಎಸ್.ಸುವರ್ಣ, ಜಗನ್ನಾಥ ಎಂ.ಗಾಣಿಗ, ನವೀನ್ ಎಸ್.ಶೆಟ್ಟಿ ತೋನ್ಸೆ, ಪ್ರಶಾಂತ ಸಿ.ಪೂಜಾರಿ, ಲಕ್ಷ ್ಮಣ ಕಾಂಚನ್, ದಿನೇಶ್ ವಿ.ಕೋ ಟ್ಯಾನ್, ಸದಾನಂದ ಎನ್. ಆಚಾರ್ಯ, ಕಿರಣ್ ವಿ.ಪೂಜಾರಿ, ಡಾ| ಚಿರಾಗ್ ಪೂಜಾರಿ ತೋನ್ಸೆ (ಪರವಾಗಿ ನ್ಯಾಯವಾದಿ ನಾರಾಯಣ ಪೂಜಾರಿ), ರವಿ.ಎಸ್ ಪೂಜಾರಿ (ಪರವಾಗಿ ಸಂಧ್ಯಾ ರವಿ), ರಮೇಶ್ ಸುವರ್ಣ (ಪರವಾಗಿ ಶಾಂಭವಿ ಸುವರ್ಣ) ರಮೇಶ್ ಸುವರ್ಣ (ಪರವಾಗಿ ವಿಜಯಕುಮಾರ್ ಶೆಟ್ಟಿ ತೋನ್ಸೆ) ಇವರಿಗೆ ಅತಿಥಿüಗಳು ತೋನ್ಸೆ ಅಚೀವ್ಸ್ (ತೋನ್ಸೆ ಸಾಧಕ) ಬಿರುದು ಪ್ರದಾನಿಸಿ ಸನ್ಮಾನಿಸಿದರು ಹಾಗೂ ಚೆನ್ನೈನ ಉದ್ಯಮಿ ಧರ್ಮಪ್ರಕಾಶ್ ಜೆ.ಕಿದಿಯೂರು (ಪರವಾಗಿ ವಿಶ್ವನಾಥ್ ಪೂಜಾರಿ), ದೇಯಿ ಬೈಯಿದಿ ಚಲನಚಿತ್ರದ ನಟ,ನಿರ್ದೇಶಕ ಸುರ್ಯೋದಯ ಪೆರಂಪಳ್ಳಿ, ನಟಿ ಕಾಜಲ್ ಕುಂದರ್ ಹಾಗೂ ಗರೊಡಿ ಸೇವಾ ಸಮಿತಿ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತರಾದ ಕೆ.ಪಿ ಸುವರ್ಣ, ಸಲಹಾಗಾರ ಶಂಕರ್ ಎಸ್.ಸುವರ್ಣ, ಲಜ್ಹಾರ್ ಟಿ.ಮುತ್ತಪ್ಪ ಕೋಟ್ಯಾನ್, ಸೋಮ ಸುವರ್ಣ ಇವರನ್ನು ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ, ತೋನ್ಸೆ ರಾಮ ಪೂಜಾರಿ, ಜೇಸಿ ಶೇಖರ್ ಗುಜ್ಜರಬೆಟ್ಟು, ತೋನ್ಸೆ ಗರಡಿ ಮನೆ ಲಕ್ಷ ್ಮಣ ಅವಿೂನ್, ಗರೊಡಿ ಸೇವಾ ಸಮಿತಿ ಮುಂಬಯಿ ಉಪಾಧ್ಯಕ್ಷ ಸಿ.ಕೆ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌರವ ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ್ ಎಂ.ಕೋಟ್ಯಾನ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ಕೃಷ್ಣ ಪಾಲನ್, ಸಲಹಾಗಾರರಾದ ವಿ.ಸಿ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಆನಂದ ಜತ್ತನ್ ಮತ್ತು ಕೆ.ಗೋಪಾಲ್ ಪಾಲನ್ ಕಲ್ಯಾಣ್ಫುರ್ ಮತ್ತಿತರರು ಉಪಸ್ಥಿತರಿದ್ದು ಅತಿಥಿüಗಳು ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಮನೋರಂಜನೆಯಯಾಗಿಸಿ ಮುಂಬಯಿಯ ಪ್ರಸಿದ್ಧ ಸ್ಯಾಕ್ಸೋಫೆÇೀನ್ ವಾದಕ ದಿನೇಶ್ ವಿ.ಕೋಟ್ಯಾನ್ ಬಳಗವು ಸಂಗೀತ ಕಛೇರಿಯನ್ನು ಹಾಗೂ ಕಾಜುಪಾಡದ ಪ್ರತಿಭಾನ್ವಿತ ಮಕ್ಕಳು `ಅಂಭಾ ಪ್ರತಿಜ್ಞೆ' ಪ್ರಹಸನವನ್ನು ಮತ್ತು ಕಲಾಜಗತ್ತು ತಂಡವು ತೋನ್ಸೆ ವಿಜಯಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿತ `ಈ ಬಾಲೆ ನಮ್ಮವು' ತುಳು ನಾಟಕ ಪ್ರದರ್ಶಿಸಿದರು.

ಕು| ಸಾಯಿಮಯಿ ಅರುಣ್ ಕೋಟ್ಯಾನ್ ಅವರ ಗಣೇಶ ವಂದನೆಯೊಂದಿಗೆ ಸಮಾರಂಭ ಆದಿಗೊಂಡಿತು. ಲೇಖಾ ಆರ್.ಕಲ್ಯಾಣ್ಫುರ್ ಪ್ರಾರ್ಥನೆಯನ್ನಾಡಿದರು. ನಿತ್ಯಾನಂದ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಗರೊಡಿ ಸೇವಾ ಸಮಿತಿ ಮುಂಬಯಿ ಉಪಾಧ್ಯಕ್ಷ ಡಿ.ಬಿ ಅಮೀನ್, ಆಚರಣಾ ಸಮಿತಿ ಗೌರವ ಕಾರ್ಯದರ್ಶಿ ವಿಠಲ್ ಎಸ್. ಪೂಜಾರಿ, ತಾರನಾಥ್ ಕಲ್ಯಾಣ್ಫುರ್ ಅತಿಥಿüಗಳನ್ನು ಪರಿಚಯಿಸಿದ್ದು ಪದಾಧಿಕಾರಿಗಳು ಅತಿಥಿüಗಳಿಗೆ ಸ್ಮರಣಿಕೆ, ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಚಿನ್ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ದಶಮನೋತ್ಸವ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ತೋನ್ಸೆ ಸಭಾ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here