Friday 26th, April 2024
canara news

ಡಾ| ಪಾಲ್ತಾಡಿಗೆ ಗದಗೀಮಠ ಜಾನಪದ ತಜ್ಞ ಪ್ರಶಸ್ತಿ ಪ್ರದಾನ

Published On : 12 Mar 2019   |  Reported By : Rons Bantwal


ಜಾನಪದ ಕ್ಷೇತ್ರಕ್ಕೆ ಪಾಲ್ತಾಡಿ ಕೊಡುಗೆ ಅಮೂಲ್ಯ -ಟಾಕಪ್ಪ ಕಣ್ಣೂರು

ಮುಂಬಯಿ (ಸುಳ್ಯ), ಮಾ.11: ಪಾಲ್ತಾಡಿ ಜಾನಪದ ಕ್ಷೇತ್ರದಲ್ಲಿ ಅವಿಸ್ಮರಣೀಯ ಕೃಷಿ ಗೈದ ಸಾಧಕರು. ಜಾನಪದ ಕ್ಷೇತ್ರದ ಬೆಳವಣಿಗೆಗೆ ಹಾಗೂ ಪ್ರಚಾರಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವರ ವಿಶೇಷÀ ಸೇವೆಯನ್ನು ಪರಿಗಣಿಸಿ ಇವರಿಗೆ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಹೇಳಿದರು.

ಪ್ರಸ್ತುತ ಪಾಲ್ತಾಡಿ ಅವರು ವಾಸವಾಗಿರುವ ಬೆಳ್ಳಾರೆ ಸಮೀಪದ ಪೆರುವಾಜೆಯ ಆಂಜನೇಯ ಕೃಪಾ ಮನೆಯಲ್ಲಿ ತುಳುನಾಡಿನ ಪ್ರಖ್ಯಾತಿ ಪಡೆದ ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡಿದ (ರೂ.50,000/-, ತಾಮ್ರದ ಫಲಕ, ಹಲ್ಮಿಡಿ ಶಾಸನ `ಕಲ್ಬರಹದಿಂದ ತಾಡೋಲೆಗೆ', ಡಿಜಿಟಲ್ ಪ್ರತಿ, ಶಾಲು, ಮಾಲೆ, ಫಲಪುಷ್ಪ ಇತ್ಯಾದಿ ಒಳಗೊಂಡಿದ್ದ) ಗೌರವ ಪ್ರಶಸ್ತಿ `ಡಾ| ಬಿ.ಎಸ್ ಗದಗೀಮಠ ಜಾನಪದ ತಜ್ಞ ಪ್ರಶಸ್ತಿ' ಪ್ರದಾನಿಸಿ ಅಭಿನಂದಿಸಿ ಮಾತನಾಡಿದರು.

ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ಡಿಸೆಂಬರ್‍ನಲ್ಲಿ ಬೀದರ್‍ನಲ್ಲಿ ನಡೆದಿತ್ತು. ಪಾಲ್ತಾಡಿ ಕಾರಣಾಂತರ ಆ ಸಮಾರಂಭದಲ್ಲಿ ಪಾಲ್ಗೊಳ್ಳದ ಕಾರಣ ಈ ಪ್ರಶಸ್ತಿಯನ್ನು ಬೆಳ್ಳಾರೆಯಲ್ಲಿ ನೀಡಲಾಗಿದೆ.

ಪುತ್ತೂರು ತುಳು ಕೂಟದ ಅಧ್ಯಕ್ಷ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಸಿದ್ರಾಮ ಶಿಂಧೆ ವಂದಿಸಿದರು. ಸಹಾಯಕ ಎಚ್.ಪ್ರಕಾಶ್‍ಕಾರ್ಯಕ್ರಮ ನಿರೂಪಿಸಿದರು. ಪಾಲ್ತಾಡಿ ಧರ್ಮಪತ್ನಿ ಸುಮಾ ಆರ್.ಆಚಾರ್, ಪುತ್ರಿ ಸಹ ಪ್ರಾಧ್ಯಾಪಕಿ ಡಾ| ಸುಪ್ರಿಯಾ ಪಿ.ಆರ್., ಸಹ ಪ್ರಾಧ್ಯಾಪಕ ಕಾಂತರಾಜು, ಮೊಮ್ಮಕ್ಕಳಾದ ನಿಶ್ವನ ಹಾಗೂ ಅವಲೋಕಿತ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದÀರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here