Tuesday 20th, August 2019
canara news

ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು

Published On : 18 Apr 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.16: ಜಾತ್ಯಾತೀಯ ನಿಲುವು ಹೊಂದಿದ ನಾರಾಯಾಣ ಗುರುಗಳು ಮನುಕುಲದ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಯುಗಪುರುಷರೆಣಿಸಿ ವಿಶ್ವಮಟ್ಟದಲ್ಲಿ ಮೆರೆದವರು. ಜಾತಿವಿಪರೀತ ಅಂದಿನ ಕಾಲದಲ್ಲಿ ಒಪೆÇ್ಪತ್ತಿನ ಗಂಜಿ ಊಟದ ಭಾಗ್ಯವಿಲ್ಲದ ಜನತೆಗೆ ಊಟ ಉಣ್ಣಿಸಿದ ದಯಾಳು. ಇಂತಹ ದೈವಿಕಸ್ವರೂಪಿ ನಾರಾಯಾಣ ಗುರುಗಳ ಆದರ್ಶ ತತ್ವಗಳನ್ನೇ ರೂಢಿಸಿ ಅವರನ್ನು ಆರಾಧಿಸುವ ಬಿಲ್ಲವರು ಸರ್ವರಲ್ಲೂ ಸಮಾನತೆ ಬಯಸುವ ಸಮಭಾವತೆವುಳ್ಳವರಾಗಿದ್ದಾರೆ. ಇಂತಹ ಭಾವನೆವುಳ್ಳವರಿಂದಲೇ ಅನ್ನದಾನದಂತಹ ಯೋಚನೆಗಳು ಸಾಧ್ಯವಾಗುವುದು ಎಂದು ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು ತಿಳಿಸಿದರು.

ಬೃಹನ್ಮುಂಬಯಿನಲ್ಲಿ ಸಮುದಾಯಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿದ್ದು ಸುಮಾರು 87 ಸಂವತ್ಸರಗಳನ್ನು ಪೂರೈಸಿ ಲಕ್ಷಾಂತರ ಜನರಿಗೆ ದಾರಿದೀಪವಾದ ಮೇರುಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಮಂಗಳವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಮೂರ್ತಿ ರಜತ ಪ್ರತಿಷ್ಠಾಪನಾ ದಿನಾಚರಣೆ ಸಂಭ್ರಮಿಸಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿದ್ದು ಯೋಗಿಶ್ ಶೆಟ್ಟಿ ಮಾತನಾಡಿದರು.

ಈ ಶುಭಾವಸರದಲ್ಲಿ ಗೌರವ ಅತಿಥಿüಗಳಾಗಿ ಮಹಾನಗರದ ಹಿರಿಯ ಉದ್ಯಮಿಗಳಾದ ಗಣೇಶ್ ಬೆರ್ಮು ಪೂಜಾರಿ, ವಾಮನ್ ಡಿ.ಪೂಜಾರಿ, ಶಿವರಾಮ್ ಸಿ.ಪೂಜಾರಿ (ಬಾಲಾಜಿ ಆಟೋ), ಭಾರತ್ ಬ್ಯಾಂಕ್‍ನ ನಿರ್ದೇಶಕ ದಾಮೋದರ್ ಸಿ.ಕುಂದರ್, ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋ ಟ್ಯಾನ್, ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ದಯಾನಂದ್ ಆರ್.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ ವೇದಿಕೆಯಲ್ಲಿದ್ದು ಕಲ್ಪವೃಕ್ಷದ ಹಿಂಗಾರವನ್ನರಳಿಸಿ ಕಳಸೆಯಲ್ಲಿಟ್ಟು ಬಳಿಕ ಅಕ್ಷಯ ಪಾತ್ರೆಗೆ ಅಕ್ಕಿ ಸುರಿದು ಅನ್ನದಾನಕ್ಕೆ ಚಾಲನೆಯನ್ನಿತ್ತು ಬಿಲ್ಲವ ಭವನದ ಗುರು ಮಂದಿರದಲ್ಲಿ ಪ್ರತೀ ಗುರುವಾರ ಸೇವೆಯಾಗಿಸಿ ಶ್ರೀ ಗುರು ಅನ್ನ ಪ್ರಸಾದ ರೂಪಿತ ಅನ್ನದಾನಕ್ಕೆ ಚಾಲನೆಯನ್ನೀಡಿದರು.

ಬಿಲ್ಲವರಲ್ಲಿನ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಧುರೀಣ ಜಯ ಸಿ.ಸುವರ್ಣ ಇವರ ಸಾಮಾಜಿಕ ಸೇವೆ ಪ್ರತೀಯೊಬ್ಬರಿಗೂ ಮಾದರಿಯಾಗಿದೆ. ಆಧುನಿಕ ಯುಗಕ್ಕೆ ಈ ಯುಗಪುರುಷರ ಜೀವನಶೈಲಿ ಅನುಕರಣೀಯವಾದುದು. ಬಿಲ್ಲವರು ಹಿರಿಯರನ್ನು ಗೌರವಿಸುವ ಸಂಸ್ಕಾರವುಳ್ಳವರು. ಯುವಪೀಳಿಗೆಯು ಇಂತಹ ಮೇರುವ್ಯಕ್ತಿಗಳನ್ನೇ ಆದರ್ಶರನ್ನಾಗಿಸಿ ಕನಿಷ್ಠ ತನ್ನ ಪರಿಸರ ಅಥವಾ ಸ್ವಸಮುದಾಯದಲ್ಲಾರೂ ತಮ್ಮತನ ತೋರ್ಪಡಿಸಬೇಕು. ತೌಳವ ಸಂಸ್ಕೃತಿಗೆ ಬಿಲ್ಲವರ ಕೊಡುಗೆ ಅನುಪಮವಾದುದು. ತುಳು ಆಚರಣೆಗಳ ಮೂಲಕ ಜನತಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಬಿಲ್ಲವರು ಯುವ ಪೀಳಿಗೆಗೆ ತುಳು ಸಂಸ್ಕೃತಿಯನ್ನು ಪರಿಚಯಿಸಿದ ಸಮಾಜವಾಗಿದೆ. ಪ್ರಸಕ್ತ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರೂ ಯುವ ಜನತೆಯಲ್ಲಿ ಉಲ್ಲಾಸ, ಉತ್ಸಾಹ ತುಂಬುತ್ತಾ ಸಮಾಜವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದು ಯೋಗಿಶ್ ಶೆಟ್ಟಿ ಅಭಿಪ್ರಾಯಪಟ್ಟರು.

ನಿತ್ಯಾನಂದ ಕೋಟ್ಯಾನ್ ಮಾತನಾಡಿ ಹಿರಿಯ ಮತ್ತು ಕಿರಿಯ ಇವರಿಬ್ಬರ ಜೊತೆಗೂಡಿ ಹಳೆತನದಲ್ಲಿ ಹೊಸತನವನ್ನು ಬೆಸೆದು ಬಿಲ್ಲವ ಸಮಾಜದ ಸೇವೆಸಲ್ಲಿಸುವ ಅವಕಾಶ ನನಗೆ ಒದಗಿದೆ. ಅದರಲ್ಲೂ ಸಧೃಡ ಸಮಾಜಕ್ಕೆ ಜಯ ಸುವರ್ಣರ ಕೊಡುಗೆಯಲ್ಲಿ ನಾನು ದುಡಿಸಿಕೊಳ್ಳುವ ಅವಕಾಶ ಇದೆಲ್ಲವೂ ನನ್ನ ಪಾಲಿನ ಭಾಗ್ಯ ಎಂದೆಣಿಸಿದ್ದೇನೆ ಅನ್ನುತ್ತಾ ಬಿಲ್ಲವರ ಅಸೋಸಿಯೇಶನ್‍ನಲ್ಲಿನ ತನ್ನ ಸೇವೆಯನ್ನು ಮೆಲುಕು ಹಾಕಿದÀರು.

ಬಿಲ್ಲವ ಭವನ ಮತ್ತು ಇಲ್ಲಿ ಪ್ರತಿಷ್ಠಾಪಿಸಿದ ಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಮೂರ್ತಿ ಪ್ರತಿಷ್ಠಾಪನಾ ಇಪ್ಪತ್ತದನೇ ವರ್ಷಗಳ ನಡೆಯ ರಜತಮಹೋತ್ಸವ ನಮ್ಮೆಲ್ಲರ ಪಾಲಿಗೆ ಹೆಗ್ಗುರುತುವಾಗಿದೆ. ಸಂಸ್ಥೆಯ ಸಂಸ್ಥಾಪಕರು, ಅವರ ದೂರದೃಷ್ಠಿತ್ವ ಇಂತಹ ಶುಭಾವಸರಕ್ಕೆ ಮೂಲವಾಗಿದೆ. ಅದರಲ್ಲೂ ಜಯ ಸುವರ್ಣ ದಕ್ಷ ಸಾರಥ್ಯದಲ್ಲೇ ನಮ್ಮಂತಹವರಿಗೆ ಸೇವೆಯ ಯೋಗ ಒದಗಿದ್ದು ಮುಂದೆಯೂ ನಾವೆಲ್ಲರೂ ಸಾಂಘಿಕರಾಗಿ ಸಮಾಜಸೇವೆಯಲ್ಲಿ ತೊಡಗಿಸುವೆವು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವನುಸಾರವೇ ಸರ್ವ ಧರ್ಮ ಸಮಭಾವ ಕಲ್ಪನೆ ಹೊಂದಿ ಸಮಾಜದ ಹಿತಕ್ಕಾಗಿ ಶ್ರಮಿಸುವೆವು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಚಂದ್ರಶೇಖರ ಪೂಜಾರಿ ತಿಳಿಸಿದರು.

1991 ರಿಂದ ಸುವರ್ಣ ಯುಗ ಕಂಡ ಅಸೋಸಿಯೇಶನ್‍ಗೆ ಅನುಪಮ ಸೇವೆಯನ್ನಿತ್ತು ಸ್ವರ್ಗೀಯರಾದ ದಿ| ವೈ.ನಾಗೇಶ್, ದಿ| ಈಶ್ವರ್ ಕೆ.ಹೆಜ್ಮಾಡಿ ದಿ| ಜಿ.ಸಿ ಪೂಜಾರಿ ಅಲ್ಲದೆ ಸಹೃದಯಿ ಕಾರ್ಯಕರ್ತರಾಗಿ ಸಂಸ್ಥೆಯನ್ನು ಪೆÇೀಷಿಸಿ ಬೆಳೆಸಿದ ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ರಂಗ ಕೆ.ಪಾಲನ್, ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ಎಂ.ಬಿ ಕುಕ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ ಸೇರಿದಂತೆ ಅನೇಕರ ಶ್ರಮವನ್ನು ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಸ್ಮರಿಸಿ ಉಪಸ್ಥಿತರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‍ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, ಪುರುಷೋತ್ತಮ ಎಸ್.ಕೋಟ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಜಿ.ಪೂಜಾರಿ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಹರೀಶ್ ಶಾಂತಿ ಅಂಧೇರಿ, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಸದಸ್ಯರನೇಕರು ಹಾಜರಿದ್ದರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಸ್ವಾಗತಿಸಿ ಪ್ರಸ್ತಾವನೆಗೈದು 1991ರ ಇಸವಿ ಅಸೋಸಿಯೇಶನ್ ಪರಿವರ್ತನಾ ಯುಗ ಕಂಡಿದ್ದು, ಸಮರ್ಥ ಸಂಘಟಕ ಶತಮಾನದ ಶ್ರೇಷ್ಠ ಸಮಾಜ ಸೇವಕ ಸನ್ಮಾನ್ಯ ಜಯ ಸಿ.ಸುವರ್ಣ ಅವರ ದಕ್ಷ ಸಾರಥ್ಯದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಸಹಕಾರದಿಂದ (06 ಡಿ.1992ರಂದು) ಶಿವಗಿರಿ ಮಠಾಧೀಶ ಶ್ರೀ ಶಾಶ್ವತಿಕಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಉಪಸ್ಥಿತಿ ಬಿ.ಜನಾರ್ಧನ ಪೂಜಾರಿ ಅಧ್ಯಕ್ಷತೆಯಲ್ಲಿ ಹಾಗೂ ಹಲವಾರು ರಾಜಕೀಯ ಮತ್ತು ಸಾಮಾಜಿಕ ಧುರೀಣರ ಸಮ್ಮುಖದಲ್ಲಿ ಶಿಲಾನ್ಯಾಸ ಗೈಯಲಾಯಿತು. ಅಂತೆಯೇ (16.ಡಿ.1995ರಂದು) ಬಿಲ್ಲವ ಭವನದಲ್ಲಿ ಪುರೋಹಿತ ಜನಾರ್ದನ ಶಾಂತಿ ಕಾರ್ಕಳ ತನ್ನ ಪೌರೋಹಿತ್ಯದಲ್ಲಿ ಶೋಷಿತ ವರ್ಗಕ್ಕೆ ಕಾಮಧೇನುವಾಗಿ ಶತಮಾನಗಳ ಹಿಂದೆ ಬಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ್ದನ್ನು ತಿಳಿಸಿದರು ಹಾಗೂ ತನ್ನ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗೆ ಪೂಜೆ ನೆರವೇರಿಸಿದರು.

ಶ್ರೀ ಶೇಖರ ಶಾಂತಿ ಉಳ್ಳೂರು, ಗಂಗಾಧರ್ ಕಲ್ಲಾಡಿ ಶ್ರೀ ನಾರಾಯಣ ಗುರು ಸಹಸ್ರ ನಾಮಪಠಿಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಮಹಿಳೆಯರು ಪುಷ್ಪಾರ್ಚನೆಗೈದರು. ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ರವೀಂದ್ರ ಎ. ಶಾಂತಿ ವಂದಿಸಿದರು.
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here