Thursday 23rd, May 2019
canara news

ಎ.25: ಬಿಜೆಪಿ ಕರ್ನಾಟಕ ಸೆಲ್ ಮುಂಬಯಿನಿಂದ ತುಳು-ಕನ್ನಡಿಗರ ಸಭೆ

Published On : 25 Apr 2019   |  Reported By : Rons Bantwal


ಮುಂಬಯಿ, ಎ.24: ಲೋಕಸಭಾ ಚುನಾವಣೆ 2019ರಲ್ಲೂ ಫಿರ್ ಏಕ್ ಬರ್ ಮೋದಿ ಸರ್ಕಾರ್ ಧ್ಯೇಯವನ್ನಿರಿಸಿ ಇಂದು (ಎ.25) ಗುರುವಾರ ಸಂಜೆ 4.00 ಗಂಟೆಗೆ ಬಾಂದ್ರಾ ಹಿಂದು ಅಸೋಸಿಯೇಶನ್ ಸಭಾಗೃಹ, ನಿರೊನ್ ಆಸ್ಪತ್ರೆ ಸನಿಹ, ಕದಂವಾಡಿ (ವಕೋಲಾ), ಸಾಂತಕ್ರೂಜ್ ಪೂರ್ವ ಮುಂಬಯಿ ಇಲ್ಲಿ ಬಿಜೆಪಿ ಕರ್ನಾಟಕ ಸೆಲ್ ಮುಂಬಯಿ ವತಿಯಿಂದ ತುಳು-ಕನ್ನಡಿಗರ ಮುಂಬಯಿ ಸಭೆ ಆಯೋಜಿಸಿದೆ.

ಸಭೆಯಲ್ಲಿ ಮುಂಬಯಿ ಉತ್ತರ ಮಧ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ü ಪೂನಂ ಮಹಾಜನ್ (ಹಾಲಿ ಸಂಸದೆ), ಬೆಳ್ತÀಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಕಾರ್ಯಕಾರಿ ಸಮಿತಿ ಸದಸ್ಯ ಎಲ್.ವಿ ಅವಿೂನ್, ಮಹಾನಗರದ ಹೆಸರಾಂತ ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಆ ಪ್ರಯುಕ್ತ ಮುಂಬಯಿ ಮಹಾನಗರದಲ್ಲಿನ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಬಿಜೆಪಿಯ ಕರ್ನಾಟಕ ಸೆಲ್ ಮುಂಬಯಿ ಇದರ ಅಧ್ಯಕ್ಷ ಸುರೇಶ್ ಅಂಚನ್, ಬಿಜೆಪಿ ಮುಂದಾಳುಗಳಾದ ಸುಧೀರ್ ಶೆಟ್ಟಿ, ದಿನೇಶ್ ಅವಿೂನ್ ಈ ಮೂಲಕ ವಿನಂತಿಸಿದ್ದಾರೆ.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here