Friday 26th, April 2024
canara news

ವಯೋನಿವೃತ್ತಿಗೊಂಡ ಸಂಚಾರಿ ಠಾಣಾ ಎಸ್ಐ ನಾರಾಯಣ ರೈ ಬೀಳ್ಕೋಡುಗೆ

Published On : 03 Jun 2019   |  Reported By : Rons Bantwal


ಮುಂಬಯಿ (ಬಂಟ್ವಾಳ), ಜೂ.01: ಮೆಲ್ಕಾರ್ ಸಂಚಾರಿ ಠಾಣಾ ಎಸ್ಐ ನಾರಾಯಣ ರೈ ಅವರು ವಯೋನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಮೆಲ್ಕಾರ್ ಟ್ರಾಫಿಕ್ ಠಾಣಾ ವತಿಯಿಂದ ಪಾಣೆಮಂಗಳೂರು ಸುಮಂಗಲ ಕಲ್ಯಾಣ ಮಂಟಪ ದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.

34 ವರ್ಷ ಎರಡು ದಿನಗಳ ಕಾಲ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಎಸ್.ಐ.ಆಗಿ ಪದೋನ್ನತಿ ಹೊಂದಿ ನಿವೃತ್ತಿ ಹೊಂದಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಪೋಲೀಸ್ ಅದೀಕ್ಷರು ವಿಕ್ರಂ ಅಮ್ಟೆ ಮಾತನಾಡಿ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದಿರುವುದು ಇಲಾಖೆಗೆ ಗೌರವ ತಂದಿದೆ. ಇವರ ಕಾರ್ಯವೈಖರಿ ಯುವಕರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು. ‌

ಮುಖ್ಯ ಅತಿಥಿಯಾಗಿ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರು ಮಾತನಾಡಿ ಯುವಕರಿಗೆ ಇಂತಹ ಹಿರಿಯ ಅಧಿಕಾರಿಗಳು ಆದರ್ಶ ವಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಪ್ರೋ.ಡಿ.ವೈ..ಎಸ್.ಪಿ.ಗೋವಿಂದ ರಾಜು, ಸಂಚಾರಿ ಪೋಲೀಸ್ ಠಾಣಾ ಎಸ್.ಐ ಮಂಜುನಾಥ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ವಿಟ್ಲ ಎಸ್.ಐ.ಯಲ್ಲಪ್ಪ ಎಸ್. ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು. ‌
ಮೆಲ್ಕಾರ್ ಸಂಚಾರಿ ಪೋಲೀಸ್ ಠಾಣಾ ಎಸ್. ಐ.ಮಂಜುನಾಥ್ ಸ್ವಾಗತಿಸಿ , ಪೋಲೀಸ್ ಸಿಬ್ಬಂದಿ ವಿವೇಕ್ ವಂದಿಸಿದರು. ‌




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here