Monday 21st, October 2019
canara news

ವಿಘ್ನಾಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ-ಸಾರಸ್ವತ್ ಉತ್ಸವ್ ; 13ನೇ ಮಹಾಸಭೆ

Published On : 03 Jul 2019   |  Reported By : Rons Bantwal


ಸಮಾಜ ಸೇವೆಯಲ್ಲಿ ತಾಳ್ಮೆ-ಧರ್ಮನಿಷ್ಠೆ ಅವಶ್ಯ : ನಾಗೇಂದ್ರ ಕಾಮತ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.30: ಸೇವೆ ಅನ್ನುವುದು ಪಾವಿತ್ರ್ಯತೆವುಳ್ಳದ್ದು. ಆದುದರಿಂದ ಸೇವೆಯಲ್ಲಿ ತಾಳ್ಮೆ, ಧರ್ಮನಿಷ್ಠೆ ಇರುವುದು ಅವಶ್ಯ. ಸಂಸ್ಥೆಯ ಚಟುವಟಿಕೆಗಳನ್ನು ಮನಸಾರೆ ಮೆಚ್ಚಿದ್ದೇನೆ ಹಾಗೂ ನನ್ನ ಬಾಯೊ ಕೊಂಕಣಿ ಸಿನೆಮಾಕ್ಕೆ ನಿಮ್ಮೆಲ್ಲರ ಬೆಂಬಲ ಸಿಗಬೇಕು ಎಂದು `ಬಾಯೊ' ಕೊಂಕಣಿ ಚಿತ್ರ ನಿರ್ಮಾಪಕ ನಾಗೇಂದ್ರ ಕಾಮತ್ ನುಡಿದರು.

ವಿಘ್ನಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲ ದಹಿಸರ್ ಸಂಸ್ಥೆಯು ಮಂಡಲದ ಅಧ್ಯಕ್ಷ ವಸಂತ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದಿಲ್ಲಿ ಭಾನುವಾರ ಅಪರಾಹ್ನ ದಹಿಸರ್ ಪೂರ್ವದ ಶ್ರೀ ವಿಠಲ ರುಕ್ಮಯಿ ಮಂದಿರದ ಮಧವೇಂದ್ರ ಸಭಾಗೃಹದಲ್ಲಿ 2019ನೇ ವಾರ್ಷಿಕ ಸಾರಸ್ವತ್ ಉತ್ಸವವನ್ನು ಜರುಗಿತು., ವಿಠಲ ಪ್ರಭು, ವಾಸುದೇವ ಪ್ರಭು, ವೇದಮೂರ್ತಿ ರಮೇಶ ಭಟ್ ಹಾಗೂ ಭಜನಾ ಮಂಡಳಿಯ ಸದಸ್ಯರಿಂದ ದೀಪ ಬೆಳಗಿಸಿ ಉದ್ಟಾಟಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ನಾಗೇಂದ್ರ ಕಾಮತ್ ಮಾತನಾಡಿದರು.

ಗೌರವ ಅತಿಥಿsಯಾಗಿ ಮೋಹನ್‍ದಾಸ್ ಮಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿüಗಳು ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಇವರನ್ನು ಸನ್ಮಾನಿಸಿದರು ಮತ್ತು ಸಮಾಜ ಬಂಧು ಮಕ್ಕಳಿಗೆ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಅಂತೆಯೇ ಸಂಘದ ಮಹಾ ಪೆÇೀಷಕರು, ಉಪಸ್ಥಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು.

ತಾನು ಸುಮಾರು ವರ್ಷದಿಂದ ಈ ಸಂಸ್ಥೆಯ ಪ್ರದಾನ ಸೇವಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನಿಮ್ಮೆಲ್ಲಾ ಸಹಕಾರ, ಮಾರ್ಗದರ್ಶನ ಸಮಯಚಿತವಾಗಿ ಸಿಕ್ಕಿದೆ. ಮುಂದೆ ಕೂಡ ಸಂಸ್ಥೆಯ ಏಳಿಗೆಗಾಗಿ ಕಾರ್ಯಕಾರಿ ಸಮಿತಿಗೆ ನಿಮ್ಮ ಬೆಂಬಲ ಕೊಡಬೇಕಾಗಿ ವಿನಂತಿ. ಸಂಸ್ಥೆಗೆ ಸ್ವಂತ ಕಟ್ಟಡ ಆಗುವ ಹಾಗೆ ನಾವೆಲ್ಲರೂ ದುಡಿಯಬೇಕು ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ವಸಂತ ನಾಯಕ್ ತಿಳಿಸಿದರು.

ಮೋಹನ್‍ದಾಸ್ ಮಲ್ಯ ಮಾತನಾಡಿ ವಿಘ್ನಹರ್ಥ ಮಂಡಳಿಯು ಸರ್ವೊತೋಮುಖ ಏಳಿಗೆಗಾಗಿ ತುಂಬ ಶ್ರಮ ವಹಿಸುತ್ತಿದೆ. ಆದರದೆ ಸ್ವಂತ ವಾಸ್ತು ಅದಷ್ಟು ಬೇಗ ಆಗಲೆಂದು ತನು ಮನ ಧನದಿಂದ ಹಾರೈಸುತ್ತೇನೆ ಎಂದು ನುಡಿದರು.

ಸುಜಾತಾ, ಜಯಲಕ್ಷ್ಮೀ ಮತ್ತು ವಾರಿಜ ಅವರು ಪ್ರಾರ್ಥನೆಯನ್ನಾಡಿದರು. ಕಾರ್ಯದರ್ಶಿ ಎನ್.ಶ್ರೀನಿವಾಸ ನಾಯಕ್ ಸ್ವಾಗತಿಸಿದರು. ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್ ವಂದಿಸಿದರು.

ಪೂರ್ವಾಹ್ನ ವಸಂತ ನಾಯಕ್ ಅಧ್ಯಕ್ಷತೆಯಲ್ಲಿ ಸೇವಾ ಮಂಡಲದ 13ನೇ ಮಹಾಸಭೆ ನಡೆಸಲಾಗಿದ್ದು, ವೇದಿಕೆಯಲ್ಲಿ ಮಂಡಲದ ಗೌರವಾಧ್ಯಕ್ಷ ಗೋಪಾಲ ಆರ್.ನವಳ್ಕರ್, ಉಪಾಧ್ಯಕ್ಷ ರಮೇಶ್ ಎಸ್.ನಾಯಕ್, ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್, ಜೊತೆ ಕಾರ್ಯದರ್ಶಿ ಗೋಪಾಲ ಎ.ನಾಯಕ್, ಜೊತೆ ಕೋಶಾಧಿಕಾರಿ ಆನಂದ್ ಕೆ.ಪ್ರಭು ವೇದಿಕೆಯಲ್ಲಿ ಆಸೀನರಾಗಿದ್ದರು.

ವರದಿ ವರ್ಷದÀಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿ, ಕಲಾವಿದರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಎನ್.ಶ್ರೀನಿವಾಸ್ ನಾಯಕ್ ಗತ ವಾರ್ಷಿಕ ಮಹಾಸಭೆ ವರದಿ ಮತ್ತು ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಗೌ| ಕೋಶಾಧಿಕಾರಿ ಭರತ್ ವಿ.ಕಾಮತ್ ಗತ ಸಾಲಿನ ಲೆಕ್ಕಪತ್ರ ವಿವರ ಮಂಡಿಸಿದರು.

ಮಕ್ಕಳಿಗೆ ಛದ್ಮವೇಶ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ಮನೋರಂಜನೆ, ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ವಸಂತ ಆರ್.ನಾಯಕ್ ವಿರಚಿತ `ಬಾಬ' ಕೊಂಕಣಿ ನಾಟಕ ಪ್ರದರ್ಶಿಸಲ್ಪಟ್ಟಿತು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಸಮಾಪನ ಗೊಂಡಿತು.

 
More News

ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು
ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು
ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ
ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ
ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ
ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ

Comment Here