Friday 26th, April 2024
canara news

ಸಾಗುವಳಿಗಾಗಿ ಸ್ವತಃ ಉಳುಮೆಗಿಳಿದ ಮುಂಬಯಿ ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ

Published On : 05 Jul 2019   |  Reported By : Rons Bantwal


ಕೊಯ್ಲು ಮಾಡುತ್ತಾ ಕೃಷಿಭೂಮಿಯನ್ನು ಫಸಲು ಭರಿತಗೊಳಿಸುವ ಪ್ರಯತ್ನ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.04: ಊರಿನ ಬಹುತೇಕ ಯುವಕರು ಕಾಲಕಳೆಯುತ್ತಾ, ಹರಾಟೆ ಹೊಡೆದು ಪೇಟೆಸುತ್ತಾಡುವ ಈ ಕಾಲದಲ್ಲಿ ಕೈತುಂಬಾ ಕಾಸು ಇರುವ ಯುವೋದ್ಯಮಿವೊರ್ವರು ಮುಂಬಯಿ ಮಹಾನಗರದಿಂದ ಹುಟ್ಟೂರ ಹಳ್ಳಿಯತ್ತ ಮುಖಮಾಡಿ ಸಾಗುವಳಿಗಾಗಿ ಸ್ವತಃ ಉಳುಮೆಗಿಳಿದಿದ್ದಾರೆ. ಅವರೇ ಬೃಹನ್ಮುಂಬಯಿಯಲ್ಲಿನ ಸಂಘಟಕರು, ಸಮಾಜ ಸೇವಕ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ.

ಹೌದು ಮುಂಗಾರು ಆಗಮಿಸುತ್ತಿದ್ದಂತೆಯೇ ಕಳೆದ ಸೋಮವಾರ ಮುಂಬಯಿನಿಂದ ನೇರವಾಗಿ ಉಡುಪಿ ಜಿಲ್ಲೆಯ ತವರೂರು ಎರ್ಮಾಳ್ ನಿವಸಕ್ಕೆ ತೆರಳಿ ಅಲ್ಲಿನ ತನ್ನ ಹಿರಿಯರ ಸುಮಾರು 5 ಎಕರೆಗೂ ಮಿಕ್ಕಿದ ಕೃಷಿ ಜಮೀನಿನಲ್ಲಿ ಭತ್ತದ ಕೃಷಿ ಬೆಳೆಯಲು ತೊಡಗಿಸಿ ಕೊಂಡಿದ್ದಾರೆ. ಜೊತೆಗೆ ಆಸುಪಾಸಿನ ಕೃಷಿಭೂಮಿಯಲ್ಲೂ ಕೈಯಾಡಿಸಿ ಆಳುಗಳು, ಊರಮಂದಿಯನ್ನು ಒಗ್ಗೂಡಿಸಿ ಈ ಬಾರಿ ಸುಮರು15 ಎಕರೆ ಭೂಮಿಯಲ್ಲಿ ಅಂದಾಜು 56 ಗದ್ದೆಗಳನ್ನು ನಿರ್ಮಿಸಿ ಸ್ವತಂ ತಾವೂ ನೆಟ್ಟಿಯ ಭಟ್ಟಿಗಳನ್ನು ಹೊತ್ತು, ಟ್ರಾಕ್ಟರ್ ಮೂಲಕ ಉಳುಮೆಯಲ್ಲಿ ನಿರತರಾಗಿದ್ದಾರೆ. ಆದುದರಿಂದ ಅನೇಕ ದಶಕಗಳಿಂದ ಹಡೀಲು ಬಿಟ್ಟಿದ್ದ ಗದ್ದೆ ಕೃಷಿಭೂಮಿಲ್ಲಿ ಇದೀಗ ಮತ್ತೆ ಭತ್ತದ ಪೈರಿನ ನಾಟಿ ನಡೆಸುವ ಮೂಲಕ ಭೂಮಿತಾಯಿ ಹಚ್ಚನೆ ಹಸುರಾಗಿಸಿ ನಳನಳಿಸುವಂತೆ ಮಾಡುತ್ತಾ ಅಕ್ಕಿ, ಕುಚ್ಚಲಕ್ಕಿ, ಅವಲಕ್ಕಿ ಹೀಗೆ ವಿವಿಧತೆಯಲ್ಲಿ ಏಕತೆಯ ಭತ್ತಬೆಳೆ ಬೆಳೆಸುತ್ತಾ ಊರಿನವರಿಗೂ ತನ್ನ ಜೊತೆಯಲ್ಲಿ ಭತ್ತದ ಫಸಲಿನ ಅಕ್ಕಿಯುತ್ಸವಕ್ಕೆ ಸಿದ್ಧತೆ ನಡೆಸಿದ ಹಿರಿಮೆ ಎರ್ಮಾಳ್ ಹರೀಶ್ ಇವರದ್ದು.

ಭಾರತ ಭತ್ತ ತಳಿಗಳ ಕಣಜ ಅನ್ನುವಂತೆ ಕೃಷಿ ಮತ್ತು ಸಂಸ್ಕೃತಿಯನ್ನು ಜೊತೆಜೊತೆಗೆ ಪೆÇೀಷಿಸಿ ಬೆಳೆಸಿದ ಭಾರತೀಯ ಸಾಗುವಳಿ ಕ್ಷೇತ್ರಕ್ಕೆ ಸುಮಾರು 200 ದಶಕಗಳ ಇತಿಹಾಸವಿದ್ದು, ಅಂದಾಜು 17-19 ತಲೆಮಾರುಗಳಿಂದಲೂ ಆನುವಂಶಿಕವಾಗಿ ಮುಂದುವರಿದ ರೈತಾಪಿ ಕಸುಬು ಅನ್ನುವುದಿದೆ. ಕರ್ನಾಟಕ ಕರಾವಳಿಯ ತುಳುನಾಡು ಪ್ರಸಿದ್ಧಿಯ ಭೂಮಿ ಕೃಷಿಪ್ರಧಾನ ನಾಡು ಆಗಿದ್ದು, ಅನೇಕ ತರದ ಭತ್ತದ ತಳಿಗಳ ಬೆಳೆ ಬೆಳೆಸುತ್ತಿದ್ದ ಕಾಲವೊಂದಿತ್ತು. ಆದರೆ ಇಲ್ಲಿನ ಜನರು ಸಾಕ್ಷರತೆಗೆ ಸಾಕ್ಷಿಯಾಗುತ್ತಾ ಕ್ರಮೇಣ ನೌಕರಿ, ಉದ್ಯಮದ ಜಾಡೂ ಹಿಡಿದು ಸ್ಥಾನಪಲ್ಲಟಕ್ಕೊಳಪಟ್ಟು ಆಸ್ತಿಪಾಸ್ತಿ, ಕೃಷಿಭೂಮಿ ಗೋಚರಕ್ಕೋಗದೆ ಇಲ್ಲಿನ ಭೂಮಿ ಬಂಜಾರವಾಗಿ ಉಳಿಯುವಂತಾಯಿತು ಅನ್ನುತ್ತಾರೆ ಹರೀಶ್.

ಕರಾವಳಿ ಭಾಗ ಭತ್ತದ ಬೆಳೆಗೆ ಹೆಚ್ಚು ಪ್ರಮುಖವಾದ ಮತ್ತು ಕೃಷಿ ಚಟುವಟಿಕೆಯ ತಾಣವೂ ಹೌದು. ರೈತರನೇಕರು ಇಲ್ಲಿನ ಮಣ್ಣಿನ ಮತ್ತು ನೀರಿನ ಫಲವತ್ತತೆಯ ಅಂಶದಿಂದ ಪರಂಪರಾಗತವಾಗಿ ಜಾಗವನ್ನು ಕೃಷಿಭೂಮಿಯನ್ನಾಗಿಸಿ ಮಾಡಿ ಕೊಂಡು ಬಂದಿರುವರು. ಎಂದೂ ಬಿಸಿಲು, ಸಿಡಿಲು, ಗಾಳಿ, ಮಳೆ, ಚಳಿ ಲೆಕ್ಕಿಸದೆ ಗದ್ದೆಯಲ್ಲೇ ಇದ್ದು ಸಾಗುವಳಿ ಮಾಡುವ ಜನತೆ ಸಂತಸ ಪಡುವ ಹಳೆಕಾಲವನ್ನು ಮನವರಿದ ನಾನು ಮತ್ತೆ ಭತ್ತಕೃಷಿ ಕಾಲ ಮರುಕಳಿಸುವಂತೆ ತಲ್ಲೀನನಾಗಿದ್ದೇನೆ.

ಈ ಹಿಂದೆ ನಮ್ಮ ಪೂರ್ವಜರು ವಾರ್ಷಿಕ ನಾಲ್ಕೈದು ಬೆಳೆಗಳನ್ನು ಬೆಳೆಸುತ್ತಿದ್ದ ಕಾಲವೊಂದಿತ್ತಿದ್ದರೂ ಸದ್ಯ ನೀರಾವರಿ, ಆಳುಕೂಲಿಗÀಳ ಕೊರತೆಯಿಂದಾಗಿ ಅದು ಪುನಾರ್ವತಿಸಲು ಸಾಧ್ಯವಾಗದು. ಸರಕಾರದ ನೀತಿಗಳೂ ಭತ್ತಕೃಷಿಗೆ ಮಾರಕವಾಗಿದ್ದರೂ ಇನ್ನು ಹಾಗಾಗದು. ಈಗ ಸರಕಾರದ ಸೌಲತ್ತು, ಸಹಯೋಗ ಬಹಳಷ್ಟಿದೆ. ಇದನ್ನೆಲ್ಲಾ ಅಕ್ಕಪಕ್ಕದವರಿಗೆ ಮನವರಿಸಿ ನೆಡುವ ಮತ್ತು ಕೊಯ್ಲು ಮಾಡುವ ಕಾಯಕಕ್ಕೆ ಜನರನ್ನು ಮತ್ತೆ ಪರಿವರ್ತಿಸುತ್ತಿದ್ದೇನೆ. ಜೊತೆಗೆ ಅರನ್ನೆಲ್ಲ ಒಗ್ಗೂಡಿಸಿ ಬತ್ತ ಬೆಳೆಸುವ ಪದ್ಧತಿಗೆ ಮೊರೆ ಹೋಗಿದ್ದೇನೆÉ. ಸಮಸ್ಯೆ ಏನೇಯಿದ್ದರು ರೈತರ ಕಾಯಕ ಒಂದೇ ನೇರದಲ್ಲಿದೆ. ಭತ್ತದ ಬೆಳೆ ಸರಿಯಾಗಿ, ಸದೃಢವಾಗಿ ಬೆಳೆಸಿದರೆ ಎಲ್ಲವೂ ಯೋಚಿಸಿದಂತೆ ಫಲದಾಯಕ ಆಗುವುದು. ಒಂದೆಡೆ ಬತ್ತ ಫಲದ ಕಣಜಕಣಕ್ಕೆ ಹಣದ ಕೊರತೆಯಲ್ಲ ಜನರ ಕೊರತೆ ಅಂದಣಿಸಿದರೆ ಮತ್ತೊಂದೆಡೆ ಮಳೆರಾಯನ ನಿರೀಕ್ಷೆ ಉಳುಮೆಗೆ ಅಡ್ಡಿಯಾದಿತೇ ಅಂದುಕೊಳ್ಳುತ್ತಿದ್ದಂತೆಯೇ ಬೆಳೆಬೆಳೆಸುವ ಉತ್ಸಾಹಕ್ಕೆ ಇವೇನೂ ಅಡ್ಡಿಯಾಗದು ಎಂದು ಮನವರಿಕೆ ಮಾಡಿ ತಾತನ ಕಾಲದ ಹಿಂದಿನಂತೆ ಎಕರೆಗಟ್ಟಲೆ ಸಾಗುವಾಳಿ ಮಾಡುವ ಬೃಹತ್ ಕಾಯಕಕ್ಕೆ ದುಮುಕಿದ್ದೇನೆ ಅನ್ನುತ್ತಾರೆ ಶೆಟ್ರು.

ಭತ್ತ ಕೃಷಿ ಮೂಲ ಸಮಸ್ಯೆಯಿಂದ ಕ್ಷಿಣಿಕೆಯನ್ನು ಕಾಣುತ್ತಿದೆ ಅನ್ನುವುದಕ್ಕಿಂತ ನಾವೂ ಬೆಳೆಯತ್ತ ಬೆಲೆ ಕೊಡುವ ಅಗತ್ಯವಿದೆ. ಯುವ ಜನಾಂಗ ಹೆಚ್ಚಿನ ಗಮನ ಹರಿಸಿ ಕೃಷಿಯಲ್ಲಿ ಉತ್ಸುಕರರಾಗುವ ಅಗತ್ಯವಿದೆ. ಆವಾಗಲೇ ನಾವು ಊಟಮಾಡುವ ಅನ್ನವನ್ನು ನಾವೇ ಬೆಳೆಸಿಕೊಂಡು ನಮ್ಮ ಮುಂಬರುವ ಪೀಳಿಗೆಗೂ ಮತ್ತೆ ಕೃಷಿಪ್ರಧಾನ ಜೀವನದ ಪ್ರಾಮುಖ್ಯತೆ ರೂಢಿಸಿಕೊಳ್ಳ ಬಹುದು. ಆದುದರಿಂದ ಬತ್ತ ಬೆಳೆಸುವಿಕೆಯ ಅಂತ್ಯಬೇಡ, ಅಂಜದೆ ಅಳುಕದೆ ಅನಿಯಮಿತವಾಗಿ ಬತ್ತಬೆಳೆಯನ್ನು ಬೆಳೆಸಿ ಮುಂದೆ ಸಾಗುತ್ತಿರೋಣ. ಸರಕಾರಗಳು ಸಮಯೋಚಿತವಾಗಿ ಸ್ಪಂದಿಸಿದರೆ, ಅಗತ್ಯ ನೀರಾವರಿ ಸೌಲಭ್ಯ ಮಾಡಿಕೊಟ್ಟರೆ, ಬೆಳೆಸಿದ ಬೆಳೆಗೆ ಪೂರಕವಾದ ಬೆಲೆಯನ್ನಿತ್ತು ಸಹಾಯಧನ ಸಲೀಸಾಗಿ ಕೈ ಸೇರಿಸಿದರೆ ಎಲ್ಲರೂ ಮತ್ತೆ ಗದ್ದೆಗಳತ್ತ ಆಸಕ್ತಿ ತೋರಿಸುವುದರಲ್ಲಿ ಸಂಶಯವೇವಿಲ್ಲ ಅಲ್ಲದೆಕಷ್ಟನಷ್ಟದಿಂದ ಕಂಗಾಳಾಗುವ ಪ್ರೆಶ್ನೆಯೇ ಉದಯಿಸದು. ಮಳೆಯೂ ಕೂಡಾ ಸಮಯಕ್ಕೆ ಸರಿಯಾಗಿ ಕೈಕೊಟ್ಟರೂ ನೀರಿನ ಪರ್ಯಾಯ ವ್ಯವಸ್ಥೆ ಮಾಡಿದ್ದಲ್ಲಿ ಮತ್ತೆ ರೈತರು ತಮ್ಮ ಪರಂಪರಿಕಾ ವೃತ್ತಿಯತ್ತ ಮುಖಮಾಡುವರು ಎಂಬ ಆಶಯ ವ್ಯಕ್ತ ಪಡಿಸುತ್ತಿದ್ದಾರೆ ಹರೀಶ್ ಶೆಟ್ಟಿ.

ನರೇಂದ್ರ ಮೋದಿ ಕನಸೂ ನನಸಾಗುವುದು:
ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಮಭಕ್ತರಂತಿರುವ ಎರ್ಮಾಳ್ ಕೇಂದ್ರ ಸರಕಾರವು ರೈತರಿಗಾಗಿ ಸಿದ್ಧಪಡಿಸಿದ ಯೋಜನೆಗಳ ಫಲಾನುಭವವನ್ನು ಎಲ್ಲಾ ರೈತರು, ಕೃಷಿಕರು ಪಡೆಯಬೇಕು. ಆ ಮೂಲಕ ತಮ್ಮ ಗದ್ದೆಗಳಲ್ಲಿ ಫಸಲು ಬೆಳೆಸಿ ಮತ್ತೆ ರೈತಾಪಿ ಪರಂಪರೆಯನ್ನು ಸದೃಢ ಗೊಳಿಸಬೇಕು ಎನ್ನುತ್ತಾರೆ. ರೈತರಿಗಾಗಿ ಮೋದಿ ಸರಕಾರದ ಹೊಸ ಚಿಂತನೆಯಲ್ಲೊಂದಾದ ಕೃಷಿಭೂಮಿಯಲ್ಲಿ ದುಡಿಯದೆ ಏನನ್ನೂ ಮಾಡದೆ ಭೂಮಿ ಪಾಳು ಬಿಟ್ಟರೆ 6.5% ಜುಲ್ಮಾನೆಗೂ ಒಳಗಾಗುವುದಕ್ಕಿಂತ ನೂತನ ಯೋಜನೆಯಲ್ಲೊಂದಾದ ಉಳುಮೆ ಜಾಗದ ಸರ್ವೇ ಸಂಖ್ಯೆವುಳ್ಳ ಜಮೀನುದಾರರು ಸಂಬಂಧಿತ ಪಂಚಾಯತ್‍ನಲ್ಲಿ ಸರಕಾರಿ ಫಲಾನುಭವಿ ಫಾರ್ಮ್‍ನ್ನು ತುಂಬಿಸಿ ವಾರ್ಷಿಕ 6,000/- ರೂಪಾಯಿ ಪಡೆಯ ಬಹುದು. ಹತ್ತು ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3,000/- ರೂಪಾಯಿ ಪಡೆಯ ಬಹುದು. ಈ ಮೂಲಕ ಬರಿದಾದ ಗದ್ದೆ, ಕೃಷಿಭೂಮಿಯನ್ನು

ಕರ್ಮಭೂಮಿ ಮುಂಬಯಿಯಲ್ಲಿದ್ದು, ಭಾರತೀಯರನ್ನೆಲ್ಲಾ ಬಂಧುಗಳನ್ನಾಗಿಸಿ ಸರ್ವರ ಒಡನಾಟದಲ್ಲಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವತ್ತ ಹಗಳಿರುಲು ದುಡಿದ, ಪಾದರಸದ ಚಲನವಲನದಂತಿದ್ದು, ಸದಾ ನಿಂತ ನೀರಾಗಿರದೆ ಹರಿಯುತ್ತಿರುವ ನದಿಯಂತಿರುವ ಹೃದಯಶ್ರೀಮಂತಿಕೆಯ ಯುವೋದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ ಪರಿಸರಸ್ನೇಹಿ ಉಳ್ಳವರು. ಕರ್ಮಭೂ ಮಿಯಷ್ಟೇ ಜನ್ಮಭೂಮಿಯನ್ನೇ ಪ್ರೀತಿಸುತ್ತಿರುವ ಹರೀಶ್ ಕೃಷಿಯಲ್ಲಿ ಅಪಾರ ಶ್ರದ್ಧೆಯನ್ನೂ, ಆಸಕ್ತಿಯನ್ನೂ ಮೈಗೂಡಿಸಿದರು.

ಫಸಲು ನೀಡುತ್ತಿರುವ ಕೃಷಿಭೂಮಿಯ ಬಂಜಾರು ಪ್ರದೇಶ ಕಂಡು ನೆಮ್ಮದಿ ಕಳಕೊಂಡ ಇವರು ವರ್ಷಂಪ್ರತೀ ಮುಂಗಾರು ಆಗಮಿಸುವ ಮುನ್ನ ತವರೂರಿಗೆ ತೆರಳಿ ತಮ್ಮಲ್ಲಿನ ಕೃಷಿಭೂಮಿಗೆ ಮತ್ತೆ ಹಳೇ ಕಾಲದ ಸೊಬಗು ನೀಡುವ ಚಿಂತೆಯನ್ನರಿಸುವವರು. ಕೃಷಿ ಲಾಭದಾಯಕವಲ್ಲ ಎಂದು ತಿಳಿದೂ ಫಸಲು ಬೆಳೆಸಿ ಹಸಿರು ಭೂಮಿಯನ್ನು ಮತ್ತೆ ಚಿಗುರುವಂತೆ ಮಾಡುವ ಕನಸು ಹೊತ್ತು ಕರಾವಳಿಯಲ್ಲಿ ಕೃಷಿ ಕ್ಷೀಣಿಸುತ್ತಿರುವ ಭತ್ತಬೆಳೆಗೆ ಭದ್ರ ಹೆಸರಿನ ಕಾಳು (ಬೀಜ)ಗಳನ್ನು ಭಿತ್ತಿ ಫಸಲು ತೆಗೆಯುವಲ್ಲಿ ಮಗ್ನರಾಗಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here