Friday 26th, April 2024
canara news

ಬರೋಡದ ನಿರಾಶ್ರಿತರಿಗೆ ಅಭಯಾಸ್ತ ಚಾಚಿದ ಶಶಿಧರ ಬಿ.ಶೆಟ್ಟಿ ಬೆಳ್ತಂಗಡಿ

Published On : 05 Aug 2019   |  Reported By : Rons Bantwal


ಸಾವಿರಾರು ನೌಕರರ ಧನಿಯಾಗಿದ್ದರೂ ಸ್ವತಃ ಆಹಾರವಸ್ತುಗಳನ್ನು ಹೆಗಲನ್ನೇರಿಸಿ ಸಮಾಜ ಸೇವಕ
(ಚಿತ್ರ / ಬರಹ : ರೊನಿಡಾ, ಮುಂಬಯಿ)

ಮುಂಬಯಿ, ಆ.02: ಗುಜರಾತ್ ರಾಜ್ಯದ ಬರೋಡಾ ನಿವಾಸಿ, ಶಶಿ ಕೇಟರಿಂಗ್ ಸರ್ವಿಸ್‍ನ ಮಾಲಿಕ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಇವರು ಅತಿವೃಷ್ಟಿಯಿಂದ ಬರೋಡಾದ ಸುಮಾರು 30-40 ಸಾವಿರ ಜನರ ವಾಸ್ತವ್ಯದ ಜಾಲಾವೃತ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಆಹಾರಪೆÇಟ್ಟಣ, ಲಕ್ಷಾಂತರ ಲೀಟರ್ ನೀರು ಬಾಟಲಿಗಳನ್ನು ನೀಡಿ ಅಭಯಸ್ತ ಚಾಚಿ ಮಾನವತೆ ಮೆರೆದರು.

ಬರೋಡಾದ ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ (ಸದ್ಯ ಬೆಳ್ತಂಗಡಿ ಶಕ್ತಿನಗರ ಮೂಲತಃ) ಶಶಿಧರ ಶೆಟ್ಟಿ ತನ್ನ ಮಿತ್ರವೃಂದ, ಸಹದ್ಯೋಗಿ ಬಳಗವÀನ್ನೊಳಗೊಂಡ ಸೇವಾ ಸೈನಿಕರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ, ಸ್ಥಾನೀಯ ಅಗ್ನಿಶಾಮಕ ದಳ, ಪೆÇೀಲಿಸ್ ಮುಖ್ಯಸ್ಥರ ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಕಡಿತಗೊಂಡ ಸ್ಥಳಗಳಿಗೂ ವಿಶೇಷ ಬೆಳಕಿನ ಸಹಾಯ ಪಡೆದು ಬೋಟುಗಳಲ್ಲಿ ಹಗಲಿರುಳು ಎನ್ನದೆ ಕೋಸ್ಟ್‍ಗಾರ್ಡ್ ದೋನಿಗಳಲ್ಲಿ ಸ್ವತಃ ಮನೆಮನೆಗೆ ಸಾಗಿ ಸಹಾಯಸ್ತ ಚಾಚಿದರು.

ಸಾವಿರಾರು ನೌಕರರ ಧನಿಯಾಗಿರುವ ಶಶಿಧರ್ ಶೆಟ್ಟಿ ಸ್ವತಃ ನೀರು ಬಾಟಲಿಗಳನ್ನು ಹೆಗಲನ್ನೇರಿಸಿ, ಇಲ್ಲಿನ ತುಳು-ಕನ್ನಡಿಗರನ್ನು ಒಗ್ಗೂಡಿಸಿ ನಿರಾಶ್ರಿರಲ್ಲಿ ಧಾವಿಸಿದರು. ಬರೋಡಾ ಸಂಸದ ರಂಜನ್‍ಬೆನ್ ಧನಂಜಯ್ ಭಟ್, ಸ್ಥಳೀಯ ಶಾಸಕರ, ರಿಫೈನರಿ, ಕೈಗಾರಿಕೋದ್ಯಮ, ಕಂಪೆನಿಗಳ ಸಹಕಾರ, ಆದೇಶಾನುಸಾರ ನೀರು, ಚಹಾ, ತಿಂಡಿತಿನಿಸು, ಉಪಹಾರಗಳ ಸಾವಿರಾರು ಆಹಾರ ಪೆÇಟ್ಟಣಗಳನ್ನು ಸಿದ್ಧಪಡಿಸಿ ಸರಕುವಾಹನಗಳಲ್ಲಿ ತುಂಬಿಸಿ ಮನೆಮನೆಗೆ ತಲುಪಿಸುವಲ್ಲಿ ಕಾರ್ಯನಿರತರಾದರು. ಸೇವೆಯೊಂದಿಗೆ ಮಾನವೀಯತೆಯನ್ನು ಮೆರೆದರು. ಮಧನ್ ಕುಮಾರ್ ಸೇರಿದಂತೆ ಅನೇಕರು ಸಹಕರಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here