Friday 26th, April 2024
canara news

ಬಂಟರ ಸಂಘದ ಶ್ರೀಮಹಾವಿಷ್ಣು ದೇವಸ್ಥಾನದ ನಾಗದೇವರ ಸನ್ನಿಧಿಯಲ್ಲಿ

Published On : 07 Aug 2019


ಜ್ಞಾನ ಮಂದಿರ ಸಮಿತಿಯಿಂದ ಆಚರಿಸಲ್ಪಟ್ಟ ನಾಗರಪಂಚಮಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.05: ಬಂಟರ ಸಂಘ ಮುಂಬಯಿ ಇದರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಜ್ಞಾನ ಮಂದಿರ (ದೇವಾಲಯ) ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿನ ನಾಗದೇವರ ಸನ್ನಿಧಿಯಲ್ಲಿ ವಾರ್ಷಿಕ ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅವರ ದಕ್ಷ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಂ.ಭಂಡಾರಿ ಸಾರಥ್ಯದಲ್ಲಿ ಆಚರಿಸಲ್ಪಟ್ಟ ವಾರ್ಷಿಕ ನಾಗರ ಪಂಚಮಿಯಲ್ಲಿ ಪ್ರತಿಷ್ಠಾಪಿತ ನಾಗದೇವರಿಗೆ ಪುಷ್ಪಾಲಂಕೃತಗೊಳಿಸಿ ಸ್ವರ್ಣ ಕವಚ ಹೊದಿಸಿ ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಮಹಾಪೂಜೆ, ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಸರ್ವಸೇವೆ, ಅಶ್ಲೇಷಬಲಿ, ನಾಗತಂಬಿಲ ಸೇರಿದಂತೆ ಅನೇಕ ಪೂಜಾಧಿಗಳು ನಡೆಸಲ್ಪಟ್ಟಿದ್ದು ಕೃಷ್ಣ ವಿ.ಶೆಟ್ಟಿ ಮತ್ತು ಕಲ್ಪನಾ ಕೆ.ಶೆಟ್ಟಿ ದಂಪತಿಗಳು ನಾಗರ ಪಂಚಮಿಯ ವಿಶೇಷ ಪೂಜಾಧಿಗ ಯಜಮಾನತ್ವ ವಹಿಸಿದ್ದರು. ಇತರ ಪುರೋಹಿತರು ವಿವಿಧ ಪೂಜೆ, ಹವನಗಳನ್ನು ನೆರವೇರಿಸಿ ಹರಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಜ್ಞಾನ ಮಂದಿರ ಸಮಿತಿ ಮಾಜಿ ಕಾರ್ಯಾಧ್ಯಕ್ಷರುಗಳಾದ ಜಗನ್ನಾಥ ಎನ್.ರೈ, ಬೋಳ್ನಾಡುಗುತ್ತು ಚಂದ್ರಹಾಸ ರೈ, ಶಿಮರಾಮ ಜಿ.ಶೆಟ್ಟಿ, ಡಾ| ಎಂ.ಎಸ್ ಆಳ್ವ, ವಸಂತ್ ಎ.ಶೆಟ್ಟಿ ಪಲಿಮಾರು, ಜಯರಾಮ ಎನ್.ಶೆಟ್ಟಿ (ರೀಜೆನ್ಸಿ), ಜೆ.ಪಿ ಶೆಟ್ಟಿ (ಪೆಸ್ಟ್ ಮಾರ್ಟಂ), ಡಿ.ಕೆ ಶೆಟ್ಟಿÀ ಪೆÇವಾಯಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಶಾಂತರಾಮ ಬಿ.ಶೆಟ್ಟಿ, ಪಿ.ಧನಂಜಯ ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ರತ್ನಾಕರ್ ಶೆಟ್ಟಿ ಮುಂಡ್ಕೂರು, ದಿವಾಕರ ಬಿ.ಶೆಟ್ಟಿ ಕುರ್ಲಾ, ಡಾ| ಸುನೀತಾ ಎಂ.ಶೆಟ್ಟಿ, ಸಂತೋಷ್ ಆರ್.ಶೆಟ್ಟಿ (ಸಂತೋಷ್ ಕೇಟರರ್ಸ್), ಬಂಟ್ಸ್ ಸಂಘದÀ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ ವಾರಂಗ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಹಾಜರಿದ್ದು ಶ್ರೀ ನಾಗದೇವರಿಗೆ ಪೂಜಿಸಿದರು. ಮನೀಷ್ ಕೇಟರರ್ಸ್‍ನ ವಾಮನ ಎಸ್.ಶೆಟ್ಟಿ ಅವರ ಸೇವಾರ್ಥ ಪ್ರಸಾದ ರೂಪಿತ ಭೋಜನದೊಂದಿಗೆ ವಾರ್ಷಿಕ ನಾಗರ ಪಂಚಮಿ ಸಮಾಪನ ಕಂಡಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here