Saturday 27th, April 2024
canara news

ಬ್ಲಡ್ ಡೋನರ್ಸ್ ಮಂಗಳೂರಿಂದ ಉಪ್ಪಿನಂಗಡಿಯಲ್ಲಿ 200ನೇ ರಕ್ತದಾನ ಶಿಬಿರ

Published On : 28 Aug 2019   |  Reported By : Rons Bantwal


ಮುಂಬಯಿ (ಉಪ್ಪಿನಂಗಡಿ), ಆ.26:ನಿಝಾಮುದ್ದೀನ್ ಕೆಂಪಿ ರವರ ಸ್ಮರಣಾರ್ಥ ಉಬಾರ್ ಡೋನಸ್೯, ಮಂಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್ (ರಿ) ಬ್ಲಡ್ ಡೋನಸ್೯ ಮಂಗಳೂರು (ರಿ.) ಐಎಂಡಬ್ಲ್ಯುಎ ಪೆರಿಯಡ್ಕ (ರಿ.) ಸಿಲ್ವರ್ ಸ್ಪೂ ನ್ ಕ್ಯಾಟರರ್ಸ್ ಹಾಗೂ ಮಂಗಳೂರಿನ ಎ.ಜೆ ಅಸ್ಪತ್ರೆಯ ಸಹಯೋಗದಲ್ಲಿ ಬ್ಲಡ್ ಡೋನಸ್ ೯ ಮಂಗಳೂರು ಇದರ 200ನೇ ರಕ್ತದಾನ ಶಿಬಿರ ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮುಂಬಾಗದಲ್ಲಿ ನಡೆಯಿತು.

ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬ್ ನಝೀರ್ ಅಝ್ ಹರಿ ಬೊಳ್ಮಿನಾರು ದುಅ ಆರ್ಶಿವಚಣಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಮಾಜಿಕ ತಾಣವನ್ನು ದುರುಪಯೋಗ ಅಗುತ್ತಿರುವ ಕಾಲದಲ್ಲಿ ಬ್ಲಡ್ ಡೋನರ್ಸ್ ನ ಯುವಪಡೆ ಸಮಾಜಿಕ ಜಾಲ ತಾಣವನ್ನು ಸಂಪೂರ್ಣವಾಗಿ ಸದ್ದುಪಯೋಗೊಳಿಸಿ ರೋಗಿಗಳಿಗೆ ಅಸರೆಯಟಗುತ್ತಿದ್ದಾರೆ. ಈ ಕಾರ್ಯ ಶ್ಲಾಘನಿಯ ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಅನುಚೇತ್ ಕುಮಾರ್ ಹಾಗೂ ಅಮಾನ್ ಕೆ.ಎ ಮತ್ತು ಸಮಾಜ ಸೇವಕರಾದ ನಝೀರ್ ಹಂಡೇಲ್ ರವರನ್ನು ಸನ್ಮಾನಿಸಲಾಯಿತು.

ಎಸ್ ಡಿ ಪಿಐ ರಾಜ್ಯ ಪ್ರ.ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರೋಗಿಗಳಿಗೆ ರಕ್ತ ನೀಡುದರ ಜೊತೆಗೆ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವುದು ವಾಸಿಸಲು ಸೂರ ಇಲ್ಲದವರಿಗೆ ಭವ್ಯ ಮನೆ ನಿರ್ಮಾಣ ಮಾಡುತ್ತಿರುವ ವಿಚಾರವನ್ನು ನಾನು ತಿಳಿದಿದೆನೆ ಈ ಸಂಸ್ಥೆ ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಶುಭಹಾರೈಸಿದರು.

ಮಾಲೀಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಹಾಜಿ ಕೆಂಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಬೆಳ್ತಂಗಡಿ ಪ್ರದೇಶದಲ್ಲಿ ನೇರೆ ಬಂದ ಸಂದರ್ಭ ವಿಶೇಷೆ ಸೇವೆಗೈದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಮಾಜ ಸೇವಕರನ್ನು ಗುರುತಿಸಲಾಯಿತು.

ಸ್ಥಳೀಯ ವೈದ್ಯ ಡಾ. ನಿರಂಜನ್, ಎ.ಜೆ ಅಸ್ಪತ್ರೆಯ ರಕ್ತ ನಿಧಿ ಆಧಿಕಾರಿ ಡಾ.ಗೋಪಾಲಕೃಷ್ಣ, ಮಠ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ನಝೀರ್ ಮಠ, ಪೆರಿಯಡ್ಕ ಜುಮಾ ಮಸೀದಿ ಅಧ್ಯಕ್ಷ ಬಶೀರ್ ಕೆ.ಪಿ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ಯು.ಟಿ ತೌಸೀಫ್, ಎಂ.ಫ್ರೆಂಡ್ಸ್ ಮಂಗಳೂರು ಸದಸ್ಯ ತಾಹಿರ್ ಸಾಲ್ಮರ, ಉದ್ಯಮಿ‌ಗಳಾದ ಇಬ್ರಾಹೀಂ ಆಚಿ ಕೆಂಪಿ, ಉಮರ್, ಐ ಅಶ್ರಫ್ ಮೈಸೂರು, ಬ್ಲಡ್ ಡೋನರ್ಸ ಕಾರ್ಯನಿರ್ವಾಹಕರಾದ ಇಬ್ರಾನ್ ಯು.ಎಫ್ ಸಿ, ಆಶ್ರಫ್ ಉಪ್ಪಿನಂಗಡಿ, ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಮುಸ್ತಾಫ ಪಿ.ಎಚ್, ಉಬಾರ್ ಡೋನರ್ಸ್ ಉಪ್ಪಿನಂಗಡಿ ಅಧ್ಯಕ್ಷ ಶಬೀರ್ ಕೆಂಪಿ, ಮಂಬಾಹು ರಹ್ಮ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್, ಐಎಂಡಬ್ಲ್ಯುಎ ಅಧ್ಯಕ್ಷ ಲತೀಫ್ ಎಚ್ ಎಸ್ ಎ, ಅಫ್ತಾಬ್ ಬಸ್ತಿಕಾರ್, ಝಕರಿಯ್ಯಾ ಕೋಡಿಪಾಡಿ ಉಪಸ್ಥಿತರಿದರು.

ಬ್ಲಡ್ ಡೋನಸ್೯ ಕಾರ್ಯನಿವಾಹಕ ರಝಾಕ್ ಸಾಲ್ಮರ ಸ್ವಾಗತಿದರು. ಕಾರ್ಯನಿವಾಹಕ ನವಾಝ್ ಕೊಳ್ಳರಕೋಡಿ ವಂದಿಸಿದರು. ಘಝಾಲಿ ಕೆ.ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ 101ಯುನಿಟ್ ರಕ್ತ ದಾನಿಗಳಿಂದ ಸಂಗ್ರಹಿಸಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here