Saturday 27th, April 2024
canara news

“ಪೂಜಿತೋ ಯತ್ ಸುರೈರಪಿ”ವಿಘ್ನರಾಜನ ನಿರ್ಮಾತೃ ಮೂಡುಬಿದಿರೆ ದೊಡ್ಮನೆ ರತ್ನಾಕರ ರಾವ್

Published On : 01 Sep 2019


ಚತುರ್ಭುಜಧಾರಿ ಗಣಪ ಪಾಶ, ಅಂಕುಶ, ದಂತವನ್ನು ಆಯುಧವಾಗಿರಿಸಿಕೊಂಡ ಗಣಪತಿ. ಅಭಯಧಾರಿ ವಿಘ್ನರಾಜ ಅಭೀಪ್ಸಿತಾರ್ಥ ಸಿಧ್ಯರ್ಥ. ಇಂತಹ ಗಜಾನನ ಆಕಾಶದ ದೇವತೆ. ಇಂತಹ ಗಣೇಶನನ್ನು ಮಣ್ಣಿನಿಂದ ರಚಿಸಿ ಕಳೆದ 32 ವರ್ಷದಿಂದ ನಿರಂತರವಾಗಿ ಕೇಳಿದವರಿಗೆ ಪೂರೈಸುತ್ತಿರುವವರು ಮೂಡುಬಿದಿರೆಯ ದೊಡ್ಮನೆ ರತ್ನಾಕರ ರಾಯರು. ಪ್ರತೀ ವರ್ಷ ಗುರುಪುರದಿಂದ ಉತ್ತಮ ಜಾತಿಯ ಮಣ್ಣನ್ನು ತಂದು ಹದಗೊಳಿಸಿ ಸುಮಾರು ಎರಡು ತಿಂಗಳ ಕಾಲ ಸತತವಾಗಿ ತಾನೇ ಕುಳಿತು ಗಣೇಶನನ್ನು ರಚಿಸುತ್ತಿರುವ ಇವರು ಮೊದಲಾಗಿ ಹೇಳಿದವರಿಗೆ ಮಾತ್ರ ಪೂರೈಸುತ್ತಾರೆ.

1987 ರಲ್ಲಿ ಕೇವಲ ಒಂದು ಫೋಟೋವನ್ನಿಟ್ಟುಕೊಂಡು ಶ್ರಿಂಗೇರಿ ಶ್ರೀಗಳನ್ನು ನೆನೆಸಿಕೊಂಡು ಪ್ರಾರಂಭಿಸಿದ ಈ ರಚನಾಕಾರ್ಯ ಪ್ರತೀ ವರ್ಷಹೆಚ್ಚುತ್ತಲೇ ಸಾಗುತ್ತಿದ್ದು ಇದೀಗ ಪ್ರಾಯವಾದರೂ ಕೇಳುಗರ, ಆಸಕ್ತರ ಒತ್ತಾಯಕ್ಕೆ ಕಟ್ಟುಬಿದ್ದು ಅನಿವಾರ್ಯವಾಗಿ ಪೂರೈಸಲೇ ಬೇಕಾದಂತಾಗಿದೆ ಎನ್ನುತ್ತಾರೆ. ಹಿಂದೆಲ್ಲಾ ಸ್ವತ: ಬಣ್ಣವನ್ನೂ ಅವರೇ ಕೊಡುತ್ತಿದ್ದರೆ, ಇತ್ತೀಚಿನ ಮೂರು-ನಾಲ್ಕು ವರ್ಷಗಳಿಂದ ಅವರ ಮೊಮ್ಮಗ ಅಭಿಷೇಕ್ ಅವರಿಗೆ ಸಹಾಯ ಮಾಡುತ್ತಿದ್ದಾನೆ. ದೊಡ್ಮನೆ ಚಂದ್ರಶೇಖರ ದೇವಾಲಯದ ಅರ್ಚಕ ಮೊಕ್ತೇಸರರೂ ಆಗಿರುವ ರತ್ನಾಕರ ರಾಯರು ದೇವಾಲಯವನ್ನು ಅಭಿವೃದ್ಧಿ ಪಡಿಸಿದಂತೆ ಗಣಪತಿ ರಚನೆಯಲ್ಲೂ ಸಿದ್ಧಹಸ್ತರೆನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಇವರ ಕಲಾ ಪ್ರೌಢಿಮೆಯನ್ನು ಕಂಡು ಒಂದೆರಡು ಶಾಲೆಗಳವರು ಶಾರದೆಯ ಮೂರ್ತಿಯನ್ನೂ ಮಾಡಿಸಲು ಪ್ರಾರಂಭಿಸಿದ್ದಾರೆ. ತಮ್ಮ ಎಪ್ಪತ್ತೆರಡನೇ ಪ್ರಾಯದಲ್ಲೂ ಸತತ ಪರಿಶ್ರಮ ಪಟ್ಟು ಮಾಡುತ್ತಿರುವ ಈ ಎಲ್ಲಾ ಕಾರ್ಯಗಳನ್ನು ನಿಜಕ್ಕೂ ಮೆಚ್ಚಲೇ ಬೇಕು. ಗಜಾನನನ ಕೃಪೆ ಸದಾ ಇವರ ಮೇಲಿರಲೆಂದು ಸದಾಶಯ. ಫೋಟೋ ಲೇಖನ: ರಾಯೀ ರಾಜ ಕುಮಾರ, ಮೂಡುಬಿದಿರೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here