Friday 26th, April 2024
canara news

ಮುಲುಂಡ್‍ನಲ್ಲಿ ಭಂಡಾರಿ ಸೇವಾ ಸಮಿತಿ ಪೂರೈಸಿದ 66ನೇ ವಾರ್ಷಿಕ ಮಹಾಸಭೆ

Published On : 11 Sep 2019   |  Reported By : Ronida Mumbai


ಸಮುದಾಯದ ಸಂಸ್ಥೆಗಳಿಂದ ಸಮಾಜದ ಸದೃಢತೆ ಸಾಧ್ಯ: ನ್ಯಾ| ಆರ್.ಎಂ ಭಂಡಾರಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.08: ಸ್ವಸಮಾಜದ ಸರ್ವೋನ್ನತಿಗೆ ಸಮುದಾಯದ ಸಂಸ್ಥೆಗಳೇ ಬೆನ್ನೆಲೆಬು ಇದ್ದಂತೆ. ಇಂತಹ ಸಂಸ್ಥೆಗಳು ಬೆಳೆದು ಮುನ್ನಡೆದಾಗ ಪ್ರತೀ ಸಮಾಜಗಳೂ ಸ್ವಯಂವಾಗಿ ಸದೃಢಗೊಳ್ಳುವುದು. ಇದರಿಂದ ಸ್ವಜಾತೀಯ ಸಂಪ್ರದಾಯ, ಸಂಸ್ಕೃತಿಗಳೂ ತನ್ನಿಂತಾನೇ ಜೀವಾಳವಾಗಿ ಉಳಿಯ ಬಲ್ಲವು. ಆರೋಗ್ಯ ನಿಧಿ ಮತ್ತು ವಿದ್ಯಾ ನಿಧಿಯ ಸಲುವಾಗಿ ಧನ ಸಂಗ್ರಹಣಾ ಕೆಲಸ ಅಭಿವೃದ್ಧಿಯಲ್ಲಿದ್ದು, ಆಥಿರ್sಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಶೀಘ್ರವೇ ಇದನ್ನು ಕಾರ್ಯರೂಪದಲ್ಲಿ ತರುವಲ್ಲಿ ನಮ್ಮ ಸಮಿತಿ ಸದಸ್ಯರು ಕಾರ್ಯನಿರ್ವಾಹಿಸುತ್ತಿದ್ದು, ಸಮಿತಿ ಸದಸ್ಯರು ಭಂಡಾರಿ ಸಮಾಜದವರಿಗೆ ಭೇಟಿ ನೀಡಿ ಧನ ಸಂಗ್ರಹಿಸಲಿದ್ದಾರೆ. ಎಲ್ಲರೂ ಸಹಕರ ನೀಡಬೇಕು ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಮುಲುಂಡ್ ಪಶ್ಚಿಮದ ಶ್ರೀ ಕುಛ್ ದೇಷಿಯಾ ಸರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್‍ನ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಂಡಾರಿ ಸೇವಾ ಸಮಿತಿಯ 66ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಆರ್.ಎಂ ಭಂಡಾರಿ ಮಾತನಾಡಿದರು.

ಸೇವಾ ಸಮಿತಿಯ ಉಪಾಧ್ಯಕ್ಷÀ ಪ್ರಭಾಕರ್ ಪಿ.ಭಂಡಾರಿ ಥಾಣೆ, ಗೌ| ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ಆರ್.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ನಿಕಟಪೂರ್ವಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ವೇದಿಕೆಯಲ್ಲಿದ್ದು, ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಸ್ತುತಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತÀರು.

ಸಭೆಯಲ್ಲಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾರಾಯಣ ಆರ್.ಭಂಡಾರಿ, ಜಯಶೀಲ ಯು.ಭಂಡಾರಿ, ಕೇಶವ ಟಿ.ಭಂಡಾರಿ, ರಾಕೇಶ್ ಎಸ್.ಭಂಡಾರಿ, ಜಯ ಪಿ.ಭಂಡಾರಿ, ವಿಶ್ವನಾಥ್ ಬಿ.ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್ ಭಂಡಾರಿ, ಕರುಣಾಕರ ಭಂಡಾರಿ, ಪ್ರಕಾಶ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ.ಭಂಡಾರಿ ಸೇರಿದಂತೆ ಅನೇಕ ಸದಸ್ಯರು ಭಂಡಾರಿ ಬಂಧುಗಳು ಉಪಸ್ಥಿತರಿದ್ದರು.

ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಭಾಂಧವರು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಿಕರ ಪರವಾಗಿ ವಿನೋದ್ ಭಂಡಾರಿ ಡೊಂಬಿವಲಿ, ವಿಜಯಾನಂದ ಭಂಡಾರಿ, ಪ್ರಕಾಶ್ ಭಂಡಾರಿ ಡೊಂಬಿವಲಿ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತರು.

ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಸ್ವಾಗತಿಸಿ, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಭಿತ್ತರಿಸಿದರು. ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶಾಲಿನಿ ರಮೇಶ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷರು ಪುರುಷೋತ್ತಮ ಜಿ.ಭಂಡಾರಿ ಅಭಾರ ವ್ಯಕ್ತಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾ ಸಭೆ ಸಮಾಪನ ಗೊಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here