Friday 26th, April 2024
canara news

ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ನಾಲ್ಕನೇ ವಾರ್ಷಿಕ ಮಹಾಸಭೆ

Published On : 18 Sep 2019   |  Reported By : Rons Bantwal


ಕ್ಷೇತ್ರದ ರೈತರ ಭದ್ರ ಭವಿಷ್ಯತ್ತಿಗಾಗಿ ಶ್ರಮಿಸುವೆ: ಶಾಸಕ ಸುನೀಲ್ ಕುಮಾರ್

ಮುಂಬಯಿ (ಕಾರ್ಕಳ), ಸೆ.16: ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ನಿಯಮಿತ ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಕಳೆದ ಭಾನುವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿನ ಕಂಪೆನಿಯ ಕಾರ್ಯಾಲಯದಲ್ಲಿ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರೈತರಿಂದ, ರೈತರಿಗಾಗಿ, ರೈತರೇ ನಡೆಸುವ ಈ ಕಂಪೆನಿಯು 3 ವರ್ಷಗಳನ್ನು ಪೂರೈಸಿ 4ನೇ ವರ್ಷದತ್ತ ಸಾಗುವ ಸಂದರ್ಭದಲ್ಲಿ ಕಂಪೆನಿಯು ಅನೇಕ ಪೂರ್ವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಎಲ್ಲಾ ಕಾರ್ಯ ಯೋಜನೆಗಳು ರೈತರ ಅಭಿವೃಧ್ಧಿಗಾಗಿ ಸಹಕಾರಗೊಳ್ಳಲು ಸರಕಾರದ ವತಿಯಿಂದ ನನ್ನ ಕ್ಷೇತ್ರ ಕಾರ್ಕಳದ ರೈತರ ಭದ್ರ ಭವಿಷ್ಯತ್ತಿಗಾಗಿ ಎಲ್ಲಾ ಸಹಕಾರಗಳನ್ನು ಕೊಡುವ ಪ್ರಯತ್ನ ಮಡುತ್ತೇನೆ ಎಂದು ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅತಿಥಿü ಭಾಷಣ ಹೇಳಿದರು.

ಮುಂದಿನ ವರ್ಷ ಕಂಪೆನಿಯು ರೈತ ಸದಸ್ಯರ ಬೆಂಬಲದೊಂದಿಗೆ ಇನ್ನಷ್ಷು ಗಟ್ಟಿಗೊಳ್ಳಬೇಕು. ಕಂಪೆನಿಯು ಲಾಭಾಂಶವನ್ನು ಪಡೆಯಬೇಕು ಎನ್ನುವ ಪೂರ್ವ ಯೋಜನೆಯೊಂದಿಗೆ ಕಾರ್ಕಳದ ರೈತ ಸದಸ್ಯರಿಗೆ ಕಂಪೆನಿಯ ಮುಖೇನ ಕಡಿಮೆ ಬೆಲೆಯಲ್ಲಿ ಎಲ್ಲಾ ತರಹದ ರಸಗೊಬ್ಬರ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣ ಪರಿಕರ ಕಡಿಮೆ ಬಾಡಿಗೆಯಲ್ಲಿ ಉಳುಮೆಯ ಯಂತ್ರ ಕಟವುಯಂತ್ರ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ರೈತ ಸದಸ್ಯರು ಪಡೆಯಬೇಕೆಂದು ಅಂತೋನಿ ಡಿಸೋಜಾ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ನಿರ್ದೇಶಕರಾದ ಕೆ.ಪಿ ಧರಣೇಂದ್ರ, ಪ್ರವೀಣ್ ಸಾಲ್ಯಾನ್, ಹರೀಶ್ ಅಂಚನ್, ನಾರಾಯಣ್ ಸುವರ್ಣ, ಅನಿಲ್ ಎಸ್.ಪೂಜಾರಿ, ಗಂಗಯ್ಯ ಪೂಜಾರಿ, ಜಯಲಕ್ಷ್ಮಿ ಮುಡಾರು, ವೀಣಾ ನಾಯಕ್ ಹಾಗೂ ಶೋಭಾ ವೇದಿಕೆಯಲ್ಲಿದ್ದು ಉಪಾಧ್ಯಕ್ಷ ಹರೀಶ್ಚಂದ್ರ ತೆಂಡುಲ್ಕರ್ ಸ್ವಾಗತಿಸಿದರು. ಸಭೆಯಲ್ಲಿ ಜಮಾ ಖರ್ಚಿನ ವಿವರ ಮತ್ತು ಅಂತಿಮ ಲೆಕ್ಕ ಪತ್ರ ಮಹಾಸಭೆಯಲ್ಲಿ ಅನುಮೋದನೆಗೊಂಡ ನಂತರ 2019-20ನೇ ಸಾಲಿನ ಬಜೆಟ್ ತಿಳಿಸಲಾಯಿತು. ವಿಶೇಷ ಆಹ್ವಾನಿತರಾಗಿದ್ದ ನವೀನ್‍ಚಂದ್ರ ಜೈನ್ ಹಾಗೂ ಎಪಿಎಂಸಿ ಅಧ್ಯಕ್ಷ ಜಯವರ್ಮ ಜೈನ್ ತಮ್ಮ ಸಲಹೆ ಸೂಚನೆಗಳನ್ನಿತ್ತರು.

ರೈತ ಸದಸ್ಯರ ಕೃಷಿ ಭೂಮಿಯ ಮಣ್ಣು ಪರೀಕ್ಷೆಗಾಗಿ ಎಂಸಿಎಫ್ ವತಿಯಿಂದ ಮಣ್ಣು ಪರೀಕ್ಷೆ ಘಟಕದ ಮುಖೇನ ಮಾಹಿತಿ ಶಿಬಿರ ನಡೆಸಲಾಯಿತು. ಎಂಸಿಎಫ್‍ನ ಪ್ರಾದೇಶಿಕ ವ್ಯವಸ್ಥಾಪಕ ಡಾ| ಕೆ.ನಿರಂಜನ್ ಮಣ್ಣು ಪರೀಕ್ಷೆಯ ಬಗ್ಗೆ ಹಾಗೂ ರಸಗೊಬ್ಬರ ಅಳವಡಿಕೆಯ ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಕಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಶ್ರೀನಿವಾಸ್ ರೈತರಿಗೆ ಇಲಾಖಾ ವತಿಯಿಂದ ಲಭಿಸುವ ಸಹಾಯ ಧನದ ಬಗ್ಗೆ ವಿವರಿಸಿದರು.

ನಿರ್ದೇಶಕಿ ವೀಣಾ ನಾಯಕ್ ಅವರ ರೈತ ಗೀತೆಯೊಂದಿಗೆ ಮಹಾಸಭೆ ಆರಂಭಗೊಂಡಿತು. ಗಣ್ಯರು ಮತ್ತು ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಗಂಗಾಧರ್ ಪಣಿಯೂರು ವಾರ್ಷಿಕ ಮಹಾಸಭೆಯ ತಿಳುವಳಿಕೆ ಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿ ಸಭಾ ಕಲಾಪ ನಿರೂಪಿಸಿದರು. ನಿರ್ದೇಶಕ ಕೆ.ಪಿ ಧರಣೇಂದ್ರ ಧನ್ಯವಾದ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here