Friday 26th, April 2024
canara news

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಅಡ್ಡೂರಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

Published On : 02 Oct 2019   |  Reported By : Rons Bantwal


ಅಡ್ಡೂರು,ಸೆಪ್ಟೆಂಬರ್ 29: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ರೋಝ್ ಫ್ರೆಂಡ್ಸ್ (ರಿ) ಕಳಸಗುರಿ,ಅಡ್ಡೂರು ಮತ್ತು ಲಯನ್ಸ್ ಕ್ಲಬ್ ಗುರುಪುರ ಕೈಕಂಬ (ರಿ) ಜಂಟಿ ಆಶ್ರಯದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್ ಹಂಪನಕಟ್ಟೆ ಮಂಗಳೂರು ಸಹಕಾರದೊಂದಿಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ದಿನಾಂಕ 29/09/2019 ನೇ ಭಾನುವಾರದಂದು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಜಬ್ಬಾರ್ ಎಸ್ ಎಚ್ ರವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಅಬ್ದುಲ್ ರಝಾಕ್ ದಾರಿಮಿ ಉಸ್ತಾದರ ದುವಾಶೀರ್ವಚನದೊಂದಿಗೆ ಮುಸ್ತಫಾ ಅಡ್ಡೂರು ದೆಮ್ಮಲೆಯವರು ಉದ್ಘಾಟಿಸಿದರು.

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 55 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಇದೇ ಸಂಧರ್ಭದಲ್ಲಿ 30 ವರ್ಷಗಳಿಂದ ಕಳಸಗುರಿ ಅಡ್ಡೂರು ಪರಿಸರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಪೂರೈಸುತ್ತಿರುವ ಬಿ. ಝಕರಿಯಾ ಹಾಜಿಯವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಲ| ಜೆಫ್ರಿಯನ್ ತಾವ್ರೊ,ಯು.ಪಿ ಇಬ್ರಾಹಿಮ್,ಲ| ಜೋಸೆಫ್ ವಾಲ್ಟರ್ ಪ್ಯಾರಿಸ್, ಎಮ್.ಎ ಅಹ್ಮದ್ ಬಾವ,ಟಿ.ಸಯ್ಯದ್ ತೋಕೂರು,ಶಾಫಿ ಕೊಯ್ಯಾರ್,ಡಿ.ಎ. ಅಶ್ರಫ್,ಲ| ಡಾ| ಇ.ಕೆ.ಎ.ಸಿದ್ದೀಕ್ ಅಡ್ಡೂರು,ಸಚಿನ್ ಅಡಪ,ಎ.ಕೆ.ರಿಯಾಝ್ ಅಡ್ಡೂರು, ಯಶವಂತ್ ಶೆಟ್ಟಿ,ಜಯಲಕ್ಷ್ಮಿ, ಅಶ್ರಫ್ ಎನ್.ಜಿ, ಜಬ್ಬಾರ್ ಕಳಸಗುರಿ, ರುಕಿಯಾ,ಎಮ್.ಎಚ್ ಮೊಹಿಯುದ್ದೀನ್, ಜಿ ಅಹ್ಮದ್ ಬಾವ,ಹಬೀಬ್ ಕಟ್ಟಪುಣಿ,ರಮೇಶ್ ಕುಲಾಲ್, ಎ.ಕೆ.ಮುಸ್ತಫಾ,ಸಿದ್ದೀಕ್ ಕೆಳಗಿನಕೆರೆ,ಸುಬಾಶ್ಚಂದ್ರ ಎನ್.ಎಚ್,ಲತೀಫ್ ಕಟ್ಟಪುಣಿ,ಜಲೀಲ್ ಹಾಗೂ ರೋಝ್ ಫ್ರೆಂಡ್ಸ್ ಕಳಸಗುರಿ ಮತ್ತು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಿದ್ದೀಕ್ ಕುಚ್ಚಿಗುಡ್ಡೆ ಸ್ವಾಗತಿಸಿ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here