Friday 26th, April 2024
canara news

ಭಾರತ್ ಬ್ಯಾಂಕ್ ಅಂಧೇರಿ ಪೂರ್ವ ಶಾಖೆಯ ರಜತೋತ್ಸವ ಸಂಭ್ರಮ

Published On : 10 Oct 2019   |  Reported By : Rons Bantwal


ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಗ್ರಾಹಕರೇ ಬ್ಯಾಂಕುಗಳ ಬಂಡವಾಳ-ಎಲ್.ವಿ ಅಮೀನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.09: ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಅಂಧೇರಿ ಪೂರ್ವ ಶಾಖೆಯ ಶಾಖಾ ರಜತೋತ್ಸವ (ಇಪತ್ತೈದನೇ ವಾರ್ಷಿಕ ದಿನಾಚರಣೆ) ಇಂದಿಲ್ಲಿ ಬುಧವಾರ ಬೆಳಿಗ್ಗೆ ಅಂಧೇರಿ ಮರೋಲ್‍ನ ಟೌನ್‍ಸೆಂಟರ್‍ನ ಶಾಖೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ಬ್ಯಾಂಕ್‍ನ ನಿರ್ದೇಶಕರುಗಳಾದ ಎಲ್.ವಿ ಅಮೀನ್ ಮತ್ತು ಎಂ.ಎನ್ ಕರ್ಕೇರ ದೀಪಹಚ್ಚಿ ಕಾರ್ಯಕ್ರಮ ಬೆಳಗಿಸಿದರು.

ಕಾರ್ಯಕ್ರಮ ನಿಮಿತ್ತ ಧರ್ಮಾರ್ಥ ನೇತ್ರ ತಪಾಸನಾ ಶಿಬಿರ ಆಯೋಜಿಸಲಾಗಿತ್ತು. ಅಭ್ಯಾಗತರಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್, ಸಮಾಜ ಸೇವಕರಾದ ರಮೇಶ್ ಕೋಟ್ಯಾ ನ್, ಸತೀಶ್ ಶೆಟ್ಟಿ, ನಾರಾಯಣ ಸುವರ್ಣ, ನ್ಯಾ| ಡಿ.ಕೆ ಶೆಟ್ಟಿ, ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಸಿಇಒ (ನಿಯೋಜಿತ) ವಿದ್ಯಾನಂದ ಎಸ್.ಕರ್ಕೇರಾ ಉಪಸ್ಥಿತರಿದ್ದು ಶುಭಾರೈಸಿದರು.

ಎಲ್.ವಿ ಅಮೀನ್ ಮಾತನಾಡಿ ಸದ್ಯದ ಸಹಕಾರಿ ರಂಗದ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಗ್ರಾಹಕರೇ ನಮ್ಮ ಬಂಡವಾಳ ಹಾಗೂ ಅವರಿಗೆ ಬ್ಯಾಂಕ್‍ನ ಬಗ್ಗೆ ಇರುವ ನಂಬಿಕೆಯೇ ನಮ್ಮ ಜೀವಾಳ. ಆದುದರಿಂದ ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‍ನ ಪ್ರಧಾನ ಉದ್ದೇಶವಾಗಬೇಕು ಎಂದರು.

ಎಂ.ಎನ್ ಕರ್ಕೇರ ಮಾತನಾಡಿ ಬ್ಯಾಂಕ್‍ನ ಸಿಬ್ಬಂದಿ ವರ್ಗವು ಅತ್ಯುತ್ತಮ ಸೇವೆÉÉಯನ್ನು ಮಾಡುತ್ತಿದ್ದು ಇಂದಿನ ಸಮಯದಲ್ಲಿ ಅದು ಬ್ಯಾಂಕ್‍ಗೆ ಬಂದ ಧನಾತ್ಮಕ ಅಂಶವಾಗಿದೆ ಎಂದರು.

ಹರೀಶ್ ಅಮೀನ್ ಮಾತನಾಡಿ ಭಾರತ್ ಬ್ಯಾಂಕ್ ಅಂಧೇರಿ ಪೂರ್ವ ಶಾಖೆಯು ನಿರಂತರವಾಗಿ ಗ್ರಾಹಕ ಸೇವೆಯಲ್ಲಿ ತೊಡಗಿಸಿ ಗ್ರಾಹಕರ ಅಭಿಮಾನಕ್ಕೆ ಪಾತ್ರವಾಗಿದೆ. ಇಂತಹ ಸೇವಾನಿಷ್ಠಾ ಪರಂಪರೆಯನ್ನು ಉಳಿಸಿಕೊಂಡ ಕೆಲವೇ ಬ್ಯಾಂಕ್‍ನ ಶಾಖೆಗಳಲ್ಲಿ ಒಂದಾಗಿದೆ ಪ್ರಶಂಸೆಗೆ ಪಾತ್ರವಾಗಿರುವುದು ಅಭಿನಂದನೀಯ ಎಂದು ಶುಭರೈಸಿದರು.


ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್ ಮಾತನಾಡಿ ಗ್ರಾಹಕರು ಬ್ಯಾಂಕ್‍ನ ಆಸ್ತಿ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಿ ಅವರ ಬಾಂಧವ್ಯವನ್ನು ಮತ್ತಷ್ಟು ಬಪಪಡಿಸಲು ಬ್ಯಾಂಕ್ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಹಿತನುಡಿಗಳನ್ನಾಡಿದರು

ಈ ಶುಭಾವಸರದಲ್ಲಿ ಮಹಾ ಪ್ರಬಂಧಕರುಗಳಾದ ಜಗದೀಶ್ ಅಮೀನ್, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಕೋಟ್ಯಾನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ ಜಿ.ಪೂಜಾರಿ, ಜನಾರ್ದನ ಎಂ.ಪೂಜಾರಿ, ಸತೀಶ್ ಎಂ.ಬಂಗೇರಾ, ಬ್ಯಾಂಕ್‍ನ ಡಿಜಿಎಂ (ನಿವೃತ್ತ) ಮೋಹನ್‍ದಾಸ್ ಹೆಜ್ಮಾಡಿ (ಶಾಖೆಯ ಮಾಜಿ ಪ್ರಬಂಧಕ), ನಿವೃತ್ತ ಉನ್ನತಾಧಿಕಾರಿಗಳಾದ ಸುರೇಶ್ ಎಸ್.ಸಾಲ್ಯಾನ್, ಶೋಭಾ ದಯಾನಂದ, ದಿವಾಕರ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಆಫ್ ಕಾಸ್‍ಮಿಕ್ ಪ್ರೈಡ್ ಸಂಸ್ಥೆಯ ಸಹಯೋಗದಲ್ಲಿ ನೇತ್ರ ಶಿಬಿರ ನಡೆಸಲಾಗಿದ್ದು, ನೇತ್ರತಜ್ಞ ಡಾ| ದೀಪಕ್ ವೈದ್ಯ ಮತ್ತು ತಂಡವು ತಪಾಸನಾ ಶಿಬಿರ ನಡೆಸಿದರು. ಶಾಖಾ ಹಿರಿಯ ಪ್ರಬಂಧಕ ನವೀನ್ ಕರ್ಕೇರಾ ಸ್ವಾಗತಿಸಿದರು. ಉಪ ಪ್ರಬಂಧಕಿ ಪ್ರಭಾವತಿ ಕರ್ಕೇರ ಅತಿಥಿüಗಳನ್ನು ಪರಿಚಯಿಸಿದರು. ಉಪ ಪ್ರಬಂಧಕ ಮಹೇಶ್ ಕುರಿಯಾನ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here