Friday 26th, April 2024
canara news

ಸಾಫಲ್ಯ ಸೇವಾ ಸಂಘದಿಂದ ಜರುಗಿದ ಶ್ರೀ ಸತ್ಯನಾರಾಯಣ ಮಹಾಪೂಜೆ-ಸಮ್ವೇದನಾ ಕಾರ್ಯಕ್ರಮ

Published On : 17 Oct 2019   |  Reported By : Rons Bantwal


ಮಾನವ ಹಕ್ಕುಗಳ ರಕ್ಷಣೆಯಾದಾಗಲೇ ಸಮಾಜೋದ್ಧಾರ ಸಾಧ್ಯ-ಆದರ್ಶ್ ಗಾಣಿಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.13: ಸಮಾಜ ಬಾಂಧವರಲ್ಲಿ ಸ್ಪೂರ್ತಿ ತುಂಬಿದಾಗ ಮಾತ್ರ ಸಮಗ್ರ ಸಮಾಜದ ಉನ್ನತಿ ಸಾಧ್ಯ. ಇದಕ್ಕೆಲ್ಲಾ ಕೌಟುಂಬಿಕ ಸಂಬಂಧಗಳ ಪುನಃರ್ ನಿರ್ಮಾಣದ ಅತ್ಯವಶ್ಯಕತೆ ಇದೆ. ಕಾರಣ ಮನುಕುಲಕ್ಕೆ ಆಸ್ತಿ-ಸಂಪತ್ತುಕ್ಕಿಂತ ಕೌಟುಂಬಿಕ ಸಂಬಂಧಗಳೇ ಮೌಲಿಕ ಸೊತ್ತುವಾಗಿದೆ. ಮಾನವ ಹಕ್ಕುಗಳ ರಕ್ಷಣೆಯಾದಾಗಲೇ ಸಮಾಜೋದ್ಧಾರ ಸಾಧ್ಯ. ಇನ್ನೊಬ್ಬರಿಗೆ ನೀವು ಮಾಡಬಹುದಾದ ದೊಡ್ಡತನ ಅಂದರೆ ನಿಮ್ಮ ಸಂಪತ್ತನ್ನು ಹಂಚಿಕೊಳ್ಳುವುದುವಲ್ಲ, ಸ್ನೇಹಮಯ ಸಂಬಂಧ ಬೆಳೆಸಿಕೊಳ್ಳುವುದು. ನಿಷ್ಠಾವಂತರಲ್ಲಿ ಮಾತ್ರ ಸಮಾಜಸೇವೆಯ ಹುಮ್ಮಸ್ಸು ಇರುತ್ತದೆ. ಅವರು ಸಮಾಜದಿಂದ ಏನಾನ್ನೂ ಬಯಸದೆ ತಮ್ಮತನವನ್ನೇ ಸಮಾಜಕ್ಕೆ ವ್ಯಯಿಸುತ್ತಾರೆ. ಇದಕ್ಕೆ ಸಮಾಜ ಬಾಂಧವರು ಸ್ಪಂದಿಸಿದಾಗಲೇ ಒಟ್ಟು ಸಮಾಜದ ಉನ್ನತಿ ಸಾಧ್ಯ. ಇಂತಹ ಸಮಾಜ ಸೇವೆಯನ್ನೇ ಮುನ್ನಡಿಸಿ ರಾಷ್ಟ್ರದ ಹಿರಿಮೆಗೆ ಪೆÇ್ರೀತ್ಸಹಕರಾಗಿರಿ ಎಂದು ಹೆಚ್‍ಸಿಸಿ ಬೆಂಗಳೂರು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆದರ್ಶ್ ಗಾಣಿಗ ತಿಳಿಸಿದರು.

ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆಯೋಜಿಸಿದ್ದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮ್ವೇದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ತ್ರಿವಳಿ ಕಾರ್ಯಕ್ರಮಗಳಿಗೆ ಚಾಲನೆಯನ್ನಿತ್ತು ಆದರ್ಶ್ ಗಾಣಿಗ ಮಾತನಾಡಿದರು.

ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಫಲ್ಯ ಸಮುದಾಯದ ಮುತ್ಸದ್ಧಿ, ಹೊಟೇಲು ಉದ್ಯಮಿ ಸದಾನಂದ ಸಫಲಿಗ (ರಾಜ್‍ಯೋಗ್), ಉದ್ಯಮಿ ಮಹೇಶ್ ಎಸ್.ಬಂಗೇರ ಹಾಗೂ ರಾಷ್ಟ್ರೀಯ ಕ್ರೀಡಾಪಟು ದೀಪಕ್ ವಿ.ಕೋಟ್ಯಾನ್ ಗೌರವ ಅತಿಥಿüಗಳಾಗಿ ಮತ್ತು ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಟಿ.ಸಫಲಿಗ, ಗೌರವ ಕೋಶಾಧಿಕಾರಿ ಹೇಮಂತ್ ಬಿ.ಸಫಲಿಗ, ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಶಾಂತ ಸುವರ್ಣ, ಯುವ ವಿಭಾಗಧ್ಯಕ್ಷ ಪ್ರತೀಕ್ ಕರ್ಕೇರ ವೇದಿಕೆಯಲ್ಲಿದ್ದು ಸಂಘದ ಕ್ರೀಡಾ ಮತ್ತು ಅದೃಷ್ಟ ವಿಜೇತರಿಗೆ ಬಹುಮಾನಗಳನ್ನು ಪ್ರದಾನಿಸಿ ಅಭಿನಂದಿಸಿದರು.

ಸರ್ವರ ಸಹಕಾರವಿದ್ದರೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೇವಾಪ್ರೇರಣೆ, ಹುಮ್ಮಸ್ಸು ಸಿಗುವುದು. ಸಮಾಜದ ಸುಖಕಷ್ಟದ ನಿಜಾರ್ಥದ ಸೇವೆಯೇ ಸಂಸ್ಥೆಗಳ ಉದ್ದೇಶವಾಗಬೇಕು. ಸೇವಾ ಸಾಧನೆಗೆ ಹೆಸರಿನ ಅಗತ್ಯವಿಲ್ಲ ಬದಲಾಗಿ ಫಲಾನುಭವಿಗಳ ನೆಮ್ಮದಿಯೇ ನಮ್ಮನ್ನು ಬೆಳೆಸುತ್ತದೆ. ಕೊಡುಕೊಳ್ಳುವಿಕೆಯಿಂದ ಮಾತ್ರ ಇಂತಹ ಸೇವಾಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿದ್ದು ಇದನ್ನು ಸಮಾಜ ಬಾಂಧವರು ಅನುಭವಿಸಬೇಕು. ನಾವು ಬದುಕುವುದರ ಜೊತೆಗೆ ಸಮಾಜ, ಸಮಾಜದ ಜೊತೆಗೆ ಪ್ರಾಣಿ ಸಂಕುಲವನ್ನೂ ಬದುಕಿಸಿ ಬೆಳೆಸಿದಾಗ ಮನುಕುಕದ ಸೇವೆ ಸಾರ್ಥಕವಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶ್ರೀನಿವಾಸ ಸಾಫಲ್ಯ ತಿಳಿಸಿದರು.

ಕಾರ್ಯಕ್ರಮದ ಮಧ್ಯಾಂತರದಲ್ಲಿ ನಡೆಸಲ್ಪಟ್ಟ ಮಾಹಿತಿ ಕಾರ್ಯಗಾರದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮೇಧಾವಿ, ಹೆಚ್‍ಡಿಎಫ್‍ಸಿ ಬ್ಯಾಂಕ್‍ನ ಉನ್ನತಾಧಿಕಾರಿ ಧನಲಕ್ಷಿ ್ಮೀ ಸುವರ್ಣ ಮತ್ತು ಬ್ಯಾಂಕ್ ಉದ್ಯೋಗಿ ಕು| ಸಂಜನಾ ಕುಂಜತ್ತೂರು ಅವರು ಲೇವಾದೇವಿ ಅಂಕೀಯ ಸಮ್ವೇದನಾ (ಅವೇರ್‍ನೆಸ್ ಆನ್ ಡಿಜಿಟಲ್ ಬ್ಯಾಂಕಿಂಗ್) ಹಾಗೂ ಶ್ರೀನಿವಾಸ ಪಿ.ಸಾಫಲ್ಯ ಅವರು ಹಕ್ಕುದಾರಿಕಾ ಉಪಾಯದ ಅರಿವು (ಅವೇರ್‍ನೆಸ್ ಆನ್ ಸಕ್ಸೆಶನ್ ಪ್ಲಾನ್) ಬಗ್ಗೆ ತಿಳುವಳಿಕೆ ಮೂಡಿಸಿದರು.

ಪೇಜಾವರ ಮಠದ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತಮ್ಮ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿ ಹರಸಿದರು. ಮುಕುಂದ ಬೈತ್‍ಮಂಗಳ್ಕರ್ ತೀರ್ಥಪ್ರಸಾದ ವಿತರಿಸಿದರು. ಭಾಸ್ಕರ್ ಟಿ.ಸಫಲಿಗ ಮತ್ತು ಸುಲೋಚನಾ ಭಾಸ್ಕರ್ ದಂಪತಿ ಪೂಜಾಧಿಗಳ ಯಜಮಾನಸ್ಥಾನ ವಹಿಸಿದ್ದರು. ಸಾಫಲ್ಯ ಭಕ್ತ ಮಂಡಳಿಯು ಭಜನೆ ನಡೆಸಿತು.

ಸಂಘದ ಜೊತೆ ಕೋಶಾಧಿಕಾರಿ ರವಿಕಾಂತ್ ಎನ್.ಸಫಲಿಗ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಬಂಗೇರ ಸೇರಿದಂತೆ ಇತರ ಪದಾಧಿಕಾರಿ, ಸದಸ್ಯರನೇಕರು, ಭಾರೀ ಸಂಖ್ಯೆಯ ಸಾಫಲ್ಯ ಬಂಧು ಭಗಿನಿಯರು ಉಪಸ್ಥಿತರಿದ್ದು ಗಾರ್ಭ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಜೊತೆ ಕಾರ್ಯದರ್ಶಿ ವಿಮಲಾ ಎಸ್.ಬಂಗೇರಾ ಮತ್ತು ಕಿರಣ್ ಸಾಫಲ್ಯ ಅವರು ದಾಂಡಿಯಾ ರಾಸ್ ನಡೆಸಿದರು. ಇದೇ ಸಂದರ್ಭದಲ್ಲಿ ಸಂಘದ ಯುವ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್‍ಜಿಒ) ಮುಖೇನ ಅನಾಥಾಶ್ರಮಕ್ಕೆ ಕೊಡಲು ಬಟ್ಟೆಬರೆಗಳನ್ನು ಸಂಗ್ರಹಿಸಿತು.

ಕೃಷ್ಣಕುಮಾರ್ ಬಂಗೇರ ಸ್ವಾಗತಿಸಿ ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ಸಚಿನ್ ಕೆ.ಸಾಲ್ಯಾನ್, ಕೃತಿ ಕಾಂಚನ್, ಶ್ವೇತಾ ಬಂಗೇರ, ಸಂಜನಾ ಕುಂಜತ್ತೂರು, ಸಂಧ್ಯಾ ಪುತ್ರನ್, ದಿಶಾ ಬಂಗೇರ ಅತಿಥಿüಗಳನ್ನು ಪರಿಚಯಿಸಿದರು. ಅನುಸೂಯ ಸೋಮೇಶ್ವರ್ ಮತ್ತು ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಹರ್ಷದ್ ಸಫಲಿಗ ಮತ್ತು ಕು| ಅಶ್ವಿನಿ ಸಫಲಿಗ ವಿಜೇತರ ಯಾದಿ ಪ್ರಕಟಿಸಿದರು. ವಿಮಲಾ ಬಂಗೇರ ಮತ್ತು ಹೇಮಂತ್ ಸಾಫಲ್ಯ ಕಾರ್ಯಕ್ರಮ ನಿರ್ವಹಿಸಿದರು. ಭಾಸ್ಕರ್ ಅವಿೂನ್ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here