Friday 26th, April 2024
canara news

ಅದಮಾರು ಮಠ ಮುಂಬಯಿ ಶಾಖೆಯಲ್ಲಿ ಬೆಳಕಿನ ಹಬ್ಬದ ಆಚರಣೆ

Published On : 29 Oct 2019   |  Reported By : Rons Bantwal


ದೀಪಾವಳಿ ಸಂಭ್ರಮವು ಜ್ಞಾನದ ಸಂಕೇತವಾಗಿದೆ : ಈಶ ಪ್ರಿಯತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.27: ದೀಪಾವಳಿ ಅನ್ನುವುದು ದೀಪಗಳ ಸಮೂಹ. ಸಾಲುಸಾಲು ದೀಪಗಳ ಸರದಿಗಳಾಗಿಸಿ ದೀಪಗಳ ಮೂಲಕ ದೇವರನ್ನು ಕಾಣುವ ಹಬ್ಬವಾಗಿದೆ. ಇಂತಹ ಬೆಳಗುವ ಹಬ್ಬವನ್ನು ನಾವು ದಿನನಿತ್ಯ ಆಚರಿಸುವ ಅಗತ್ಯವಿದೆ. ಪೂರ್ವಜರು ದೀಪವನ್ನು ಜ್ಞಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ ಬೆಳಕು ಕಷ್ಟಮುಕ್ತಗೊಳಿಸಿ ದಾರಿ ತೋರಿಸುವ ಸಾಧನವಾಗಿದ್ದು, ಹೇಗೆ ದೀಪದ ಬೆಳಕಿಲ್ಲದೆ ಪ್ರಾಣಿಸಂಕುಲಕ್ಕೆ ಏನೂ ಕಾಣದೋ ಅಂತೆಯೇ ಬದುಕು ಕೂಡಾ ದೀಪವಿನಃ ಕತ್ತಲಾಗಿರುತ್ತದೆ. ಪ್ರಕೃತಿ ಸೃಷ್ಠಿಯ ಹಿನ್ನಲೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದ್ದು ಅಜ್ಞಾನವನ್ನು ದೂರಗೊಳಿಸುವ ಶಕ್ತಿಯಾಗಿದೆ. ಭಗವಂತನ ಸಾಕ್ಷಾತ್ಕರ ಮಾಡಲು ಜ್ಞಾನಿಯ ಅವಶ್ಯವಿದ್ದು ಅದನ್ನು ದೀಪವು ಸೃಷ್ಟಿಸಬಲ್ಲದು. ಈ ಹಬ್ಬವು ಜ್ಞಾನದ ಬೆಳಕಲ್ಲಿ ಬೆಳಕಿನ ಅನುಸಂಧಾನ ಮಾಡುವ ಸಂಭ್ರಮವಾಗಬೇಕು. ಹೊರಗಿಡುವ ದೀಪಗಳು ಬರೇ ಬಾಹ್ಯಚರಣೆಗಳಾಗಿದ್ದು, ಮನುಕುಲದ ಅಂತಾರಚಣೆಯು ಸಾಕ್ಷಾತ್ಕರದ ದೀಪಾವಳಿಯಾಗಬೇಕು. ಅಂದರೆ ದೇವರನ್ನು ತಿಳಿದು ಬಾಳುವ ಬುದುಕೇ ದೀಪಾವಳಿ ಆಗಬೇಕು. ಹಿಂದೂ ಧರ್ಮದ ಜಾಗತಿಕ ಸಂದೇಶ ಸಂಭ್ರಮವೇ ದೀಪಾವಳಿ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿ ಶ್ರೀ ಕೃಷ್ಣ ಮಠದ 32ನೇ ಆವೃತ್ತಿಯ ಉಡುಪಿ ಪರ್ಯಯ ಪಟ್ಟಾಧೀಶ ದೀಕ್ಷೆ ಸ್ವೀಕಾರ ಪೂರ್ವ ಪರ್ಯಾಯ ಸಂಚಾರ ನಿಮಿತ್ತ ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ವಾಸ್ತವ್ಯವಿರುವ ಈಶ ಪ್ರಿಯತೀರ್ಥರು ಇಂದಿಲ್ಲಿ ಭಾನುವಾರ ಮುಂಬಯಿ ಅದಮಾರು ಮಠದಲ್ಲಿ ಶ್ರೀಪಾದರು ಮಠದಲ್ಲಿನ ಶ್ರೀದೇವರಿಗೆ ಮತ್ತು ಭೂದೇವಿಗೆ ಎಣ್ಣೆ ಶಾಸ್ತ್ರದೂಂದಿಗೆ ಪೂಜೆಗೈದು ಆ ಎಣ್ಣೆ ಹಚ್ಚಿ ಪ್ರಸಾದ ರೂಪದಲ್ಲಿ ಆ ಎಣ್ಣೆಯೊಂದಿಗೆ ಶಿಷ್ಯರನ್ನೊಳಗೂಡಿ ಶ್ರೀಗಳು ಅಭ್ಯಂಜನಗೈದÀು ಹಳೆಕಾಲದ ನರಕಾಸುರವಧೆಯನ್ನು ಮುಂಬಯಿ ಭಕ್ತರಲ್ಲಿ ಮೆಲುಕು ಹಾಕಿದರು. ಶ್ರೀ ಚತುರ್ಭುಜ ಕಲಿಯಾ ಮರ್ದಾನ (ರುಕ್ಮಿಣಿ ಸತ್ಯಭಾಮ ಸಹಿತ) ಹಳೆ ಸಂಪ್ರದಾಯಿಕ ಅರ್ಚನೆಗೈದು ತೈಲದೀಪದ ನಡುವೆ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ಅಲಂಕಾರ ಪೂಜೆ, ಸಹಸ್ರನಾಮಾರ್ಚನೆ, ತೀರ್ಥಪೂಜೆ, ಧೂಪಪೂಜೆ ಮತ್ತು ಮಹಾಪೂಜೆ ನೆರವೇರಿಸಿದರು. ನಂತರ ಆರತಿಗೈದು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಿ ನೆರೆದ ನೆರೆದ ಸದ್ಭಕ್ತರಿಗೆ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ದೀಪಾವಳಿ ಸಂದೇಶವನ್ನಿತ್ತರು.

ಈ ಶುಭಾವಸರದಲ್ಲಿ ಪುರೋಹಿತರಾದ ವಾಸುದೇವ ಉಡುಪ, ಜನಾರ್ಧನ ಅಡಿಗ, ರಾಮವಿಠಲ ಕಲ್ಲೂರಾಯ, ಸರ್ವಜ್ಞ ಉಡುಪ, ಶಂಕರ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಐ.ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ವಾಣಿ ಆರ್.ಭಟ್, ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here