Friday 26th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಐದನೇ ಡೈರೆಕ್ಟರಿ ಬಿಡುಗಡೆ

Published On : 14 Jan 2020   |  Reported By : Rons Bantwal


ಪತ್ರಿಕಾಮಾಧ್ಯಮ ಸಮಾಜದ ಪ್ರತಿಬಿಂಬವಾಗಿದೆ: ಸಿಎ| ಜಗದೀಶ್ ಶೆಟ್ಟಿ

ಮುಂಬಯಿ, ಜ.12: ಸಮಕಾಲೀನ ಜಗತ್ತಿನಲ್ಲಿ ಮಾಧ್ಯಮದ ಪಾತ್ರ ಮತ್ತು ಸ್ಥಾನಮಾನ ಸರ್ವೋನ್ನತವಾದದು. ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಗೌರವ, ಸ್ಥಾನಮಾನ ಹೊಂದಿದೆ. ಮಾಧ್ಯಮಗಳು ರಾಷ್ಟ್ರದ ಪ್ರಜಾಪ್ರಭುತ್ವದ ಕಣ್ಣು ತೆರೆಯುವ ಪಾತ್ರ ವಹಿಸುತ್ತದೆ. ಮಾಧ್ಯಮ ಶಕ್ತಿಯು ಪ್ರಜಾಪ್ರಭುತ್ವದ ಧ್ವನಿ ನೀಡುವ ಶಕ್ತಿಯಾಗಿದೆ. ಆದುದರಿಂದಲೇ ಪತ್ರಿಕೋದ್ಯಮ ಬರೇ ಪ್ರಚಾರ ನೀಡುವ ಮಾಧ್ಯಮಗಳಾಗದೆ ಸ್ವಾಸ್ಥ ್ಯ ಸಮಾಜ ನಿರ್ಮಾಣದ ಶಕ್ತಿಯಾಗಬೇಕು ಎಂದು ಸಿಎ| ಜಗದೀಶ್ ಬಿ.ಶೆಟ್ಟಿ (ಸುರತ್ಕಲ್) ತಿಳಿಸಿರು.

ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ನಗರದ ಬಾಂದ್ರಾ ಪೂರ್ವದ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಪತ್ರಕರ್ತರ ಸಂಘದ `ಡೈಯರಿ-2020' ಬಿಡುಗಡೆ ಗೊಳಿಸಿ ಜಗದೀಶ್ ಶೆಟ್ಟಿ ಸುರತ್ಕಲ್ ಮಾತನಾಡಿದರು.

ಪತ್ರಕರ್ತರು ಸಮಾಜದ ಅತ್ಯುಚ್ಛ ಗೌರವವುಳ್ಳವರು ಆದುದರಿಂದಲೇ ಅವರು ಸಮಾಜದಲ್ಲಿ ಶ್ರೇಷ್ಠ ಸ್ಥಾನಮಾನ ಹೊಂದಿರುತ್ತಾರೆ. ತಮ್ಮ ಸೇವಾವೈಖರಿ, ಬರೇ ಲೇಖನಿಯ ಶಕ್ತಿಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡಿ ಸಮಾಜದ ದಿಶೆಯನ್ನೇ ಬದಲಾಯಿಸಬಲ್ಲ ಪತ್ರಕರ್ತರನ್ನು ಒಗ್ಗೂಡಿಸುವುದು ತುಂಬಾ ದೊಡ್ಡ ಕಾರ್ಯವಾಗಿದೆ. ಕಾರಣ ಸಮಾಜದ ಕಾಣ್ಗಾವಲುಗಳಂತಿರುವ ಪತ್ರಕರ್ತರು ಅವಿರತ ಶ್ರಮಿಕರು. ಸದಾ ತ್ಯಾಗಮಯಿಗಳಿರುವ ಅವರ ವೈಯಕ್ತಿಕ ಜೀವನ ಕಷ್ಟದಾಯಕವಾದದು. ಅಖಂಡ ಸಮಾಜವನ್ನು ಜಾಗೃತ ಗೊಳಿಸುವ, ಸುಶಿಕ್ಷಿತಗೊಳಿಸುವವರೇ ಪತ್ರಕರ್ತರಾಗಿದ್ದ್ದಾರೆ. ಇಂತಹ ಪತ್ರಿಕಾ ಮಾಧ್ಯಮವು ಸಮಾಜದ ಪ್ರತಿಬಿಂಬವಾಗಿದ್ದು ಪತ್ರಕರ್ತರ ಸ್ಪಂದನೆಗೆ ಕಪಸಮ ಸೂಕ್ತ ವೇದಿಕೆಯಾಗಿದೆ. ಸಂಘದ ಪ್ರಕಾಶಿತ 5ನೇ ದಿನಚರ್ಯೆ ಕೈಪಿಡಿ ಮಹಾನಗರದಲ್ಲಿ ಕಾರ್ಯಚರಿಸುತ್ತಿರುವ ದೈನಿಕ, ಸಾಪ್ತಾಹಿಕ, ಮಾಸಿಕ ಇತ್ಯಾದಿಗಳ ಮಾಹಿತಿಗಳೊಂದಿಗೆ ಪ್ರಕಾಶಿತ ಮೌಲ್ಯಯುತ ಮಾಹಿತಿಸೂಚಿ ಪುಸ್ತಕವಾಗಿದೆ ಎಂದರು.

ಭಾರತದಲ್ಲಿನ ಬಹುಪಾಲು ಪತ್ರಕರ್ತರ ಆಥಿರ್üಕ ಸ್ಥಿತಿಗತಿ ಅಭಾವಿತವಾಗಿದ್ದು, ನೌಕರಿಯೂ ಅಸುರಕ್ಷಿತ. ಇದರಿಂದ ಅರೆಕಾಲಿಕ ವೃತ್ತಿಯನ್ನೂ ಅವಲಂಬಿಸಿ ಬದುಕುವ ಅನಿವಾರ್ಯತೆ ಪತ್ರಕರ್ತರದ್ದು. ಅವಿರತ ಕೆಲಸದ ಒತ್ತಡದಿಂದ ಮನಶಾಂತಿ, ನೆಮ್ಮದಿಯಿಂದ ವಂಚಿತ ಪತ್ರಕರ್ತರ ಆರೋಗ್ಯವೂ ಅಸುಧಾರಿತ. ಇವೆಲ್ಲವನ್ನೂ ಮನವರಿಸಿ ಪತ್ರಕರ್ತರ ಸಮುದಾಯಕ್ಕೆ ಶಕ್ತಿತುಂಬುವ ಕಾಯಕವನ್ನೇ ಉದ್ದೇಶವಾಗಿ ರೂಪುಗೊಂಡ ಕಪಸಮ ಸಂಸ್ಥೆ ಪತ್ರಕರ್ತರ ಪಾಲಿನ ಸುರಭಿಯಂತಿದೆ ಎಂದÀು ಅಧ್ಯಕ್ಷೀಯ ಭಾಷಣವನ್ನು ಉದ್ದೇಶಿಸಿ ರೋನ್ಸ್ ಬಂಟ್ವಾಳ್ ತಿಳಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಪ್ರಸ್ತಾವಿಕ ನುಡಿಗಳನ್ನಾಡಿ ಡಿರೆಕ್ಟರಿ ಪ್ರಕಾಶ ಕ, ಸಂಪಾದಕ ರೋನ್ಸ್ ಬಂಟ್ವಾಳ್‍ರ ಸಾಮಾಜಿಕಕಳಕಳಿ, ಅವಿರತ ಶ್ರಮ, ಪತ್ರಕರ್ತರ ಬದುಕು ಮತ್ತು ಹೊರನಾಡ ಕರ್ಮಭೂಮಿಯಲ್ಲಿನ ಕನ್ನಡ ಪತ್ರಿಕೋದ್ಯಮದ ದೂರದೃಷ್ಠಿತ್ವ ಅತ್ಯಮೂಲ್ಯವಾದದು ಎಂದು ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು.

ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ, ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಗೌ| ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ ವೇದಿಕೆಯಲ್ಲಿದ್ದರು. ಕಾರ್ಯಕಾರಿ ಸದಸ್ಯರುಗಳಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ, ಗೋಪಾಲ್ ತ್ರಾಸಿ, ಸವಿತಾ ಎಸ್.ಶೆಟ್ಟಿ ಉಪಸ್ಥಿತರಿದ್ದು, ರಂಗ ಎಸ್. ಪೂಜಾರಿ ಸ್ವಾಗತಿಸಿದರು. ಡಾ| ದಿನೇಶ್ ಶೆಟ್ಟಿ ರೆಂಜಾಳ ಅತಿಥಿü ಪರಿಚಯಗೈದರು. ಅಶೋಕ ಎಸ್.ಸುವರ್ಣ ಕಾರ್ಯಕ್ರಮ ಜ್ ನಿರ್ವಹಿಸಿದರು. ರವೀಂದ್ರ ಶೆಟ್ಟಿ ತಾಳಿಪಾಡಿ ವಂದನಾರ್ಪಣೆಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here