Friday 26th, April 2024
canara news

ಸಾಫಲ್ಯ ಸೇವಾ ಸಂಘ ಯುವ ವಿಭಾಗ ನೃತ್ಯ ವೈಭವ ಸಮಾರೋಪ-ಟ್ರೋಫಿ ಪ್ರದಾನ

Published On : 25 Jan 2020   |  Reported By : Rons Bantwal


ಸಮಾಜದ ವೈಭವೀಕರಣಕ್ಕೆ ಸಫಲಿಗರು ಶ್ರೇಷ್ಠರು : ಡಾ| ವಿರಾರ್ ಶಂಕರ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,ಜ.19: ಸಮುದಾಯ ಮುನ್ನಡೆಗೆ ಪೂರ್ವಜರ ದೂರದೃಷ್ಟಿ ಪ್ರಶಂಸನೀಯವಾಗಿದ್ದು ಅರಸು ಮನೆತನದಲ್ಲೇ ಗೌರವಯುತ ಸ್ಥಾನಕ್ಕೆ ಭಾಜನವಾಗಿದ್ದ ಸಫಲಿಗರು ಸಮಾಜದ ವೈಭವೀಕರಣಕ್ಕೆ ಶ್ರೇಷ್ಠÀರೆಂದೆಣಿಸಿದವರು. ಅಂದು ಜೀವನೋಪಾಯ ಸ್ಥಿತಿಗತಿ ಚೆನ್ನಾಗಿರದೆ ಈ ಮಹಾನಗರಿಗೆ ವಲಸೆ ಬರುವುದು ಅನಿವಾರ್ಯವಾಗಿತ್ತು. ಇಂದು ಯುವಜನಾಂಗ ವಿದ್ಯಾವಂತರೆಣಿಸಿ ಸ್ಥಿತಿವಂತರಾಗಿ ತಮ್ಮ ಅಸ್ತಿತ್ವವನ್ನು ಸಮಾನತೆಯಲ್ಲಿ ತಂದಿರಿಸಿದ್ದಾರೆ. ಆದ್ದರಿಂದ ಸಮುದಾಯದ ಹಿತದೃಷ್ಠಿಯಿಂದ ಸ್ವತಂತ್ರ್ಯ ಪೂರ್ವದಲ್ಲೇ ಸೇವಾ ಸಂಘವನ್ನು ಅಸ್ತಿತ್ವಕ್ಕೆತಂದ ಸ್ಥಾಪಕರನ್ನು ಸ್ಮರಣೆ ಮಾಡುವ ಅಗತ್ಯವಿದೆ. ಇದೇ ಯುವಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದೆ. ಸಫಲಿಗರಲ್ಲಿನ ಇನ್ನಷ್ಟು ಪ್ರತಿಭೆಗಳು ಹೊರ ಹೊಮ್ಮಲಿ. ಹೊಸಶಕ್ತಿ ಚೈತನ್ಯಕ್ಕೆ ಇಂತಹ ಸ್ಪರ್ಧೆಗಳು ಆತ್ಮವಿಶ್ವಾಸ ಭರಿಸುವಂತಾಗಲಿ ಎಂದು ತಿಳಿಸುತ್ತಾ ಅಷ್ಟೊಂದು ಒತ್ತಡದ ಮಧ್ಯೆಯೂ ಸಫಲಿಗ ಯುವಕಜನತೆಯಲ್ಲಿ ಬಲ ತುಂಬಿ ಆಶೀರ್ವಾದಿಸಲೆಂದೇ ಇಲ್ಲಿ ಬಂದಿರುವೆ. ಈ ಮೂಲಕ ನಮ್ಮೆಲ್ಲರಲ್ಲಿ ಮತ್ತಷ್ಟು ಅನ್ಯೋನತಾ ಬಾಳು ರೂಪುಗೊಳ್ಳಲಿ ಎಂದು ವಿೂರಾರೋಡ್ ಡಾಹಣು ಬಂಟ್ಸ್ ಅಸೋಸಿಯೇಶನ್‍ನ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ತಿಳಿಸಿದರು.

ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಸಾಫಲ್ಯ ಸೇವಾ ಸಂಘದ ಯುವ ವಿಭಾಗವು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಇಲ್ಲಿನ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಭಾಗೃಹದಲ್ಲಿ ನಾಡಿನ ತುಳು ಕನ್ನಡಿಗರಿಗಾಗಿ ಆಯೋಜಿಸಿದ್ದ ನೃತ್ಯ ವೈಭವ-2020 ಮುಕ್ತ ನೃತ್ಯ ಸಮರ್ಥಕ (ಓಪನ್ ಡ್ಯಾನ್ಸ್ ಚಾಂಪಿಯನ್) ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ನೃತ್ಯ ವೈಭವದ ವಿಜೇತರಿಗೆ ಟ್ರೋಫಿಗಳನ್ನು ಪ್ರದಾನಿಸಿ ವಿರಾರ್ ಶಂಕರ್ ಮಾತಮಾಡಿದರು.

ಸಾಫಲ್ಯ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಕರ್ಕೇರ ಇವರ ಸಾರಥ್ಯ ಹಾಗೂ ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಸಾಫಲ್ಯ ಸಮುದಾಯದ ಧುರೀಣ, ಹೊಟೇಲು ಉದ್ಯಮಿ ಸದಾನಂದ ಸಫಲಿಗ (ರಾಜ್‍ಯೋಗ್), ಮುಂಬಯಿ ಉಚ್ಛ ನ್ಯಾಯಲಯದ ವಕೀಲ ನ್ಯಾಯವಾದಿ ರಾಘವ ಮರುವಂಗೋಡಿ (ದಹಿಸರ್), ಹೆಸರಾಂತ ಕೋರಿಯೋಗ್ರಾಫರ್ ತುಷಾರ್ ಶೆಟ್ಟಿ ಹಾಗೂ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಟಿ.ಸಫಲಿಗ, ಗೌ| ಕೋಶಾಧಿಕಾರಿ ಹೇಮಂತ್ ಬಿ.ಸಫಲಿಗ, ಮಹಿಳಾಧ್ಯಕ್ಷೆ ಶೋಭಾ ಬಂಗೇರ, ಯುವ ವಿಭಾಗಧ್ಯಕ್ಷ ಪ್ರತೀಕ್ ಕರ್ಕೇರ, ಉಪಕಾರ್ಯಾಧ್ಯಕ್ಷೆ ಕು| ಅಶ್ವಿನಿ ಸಫಲಿಗ, ವೇದಿಕೆಯಲ್ಲಿದ್ದು ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಸದಾನಂದ ಸಫಲಿಗ ಮಾತನಾಡಿ ಇದು ಸಫಲಿಗ ಸಮುದಾಯದ ಮುನ್ನಡೆಯ ಧ್ಯೋತಕವಾಗಿದೆ. ತುಳು ಕನ್ನಡಿಗರೆಲ್ಲರನ್ನೂ ಒಗ್ಗೂಡಿ ಮುನ್ನಡೆಯಲು ಪ್ರೇರಕವಾದ ಕಾರ್ಯಕ್ರಮ. ಹಳೆಬೇರು ಹೊಸಚಿಗುರು ಅನ್ನುವಂತೆ ಹಿರಿಕಿರಿಯರ ಸಂಬಂಧದ ಬೆಸುಗೆಯಾಗಿ ಆಯೋಜಿಸಲ್ಪಟ್ಟ ಈ ವೈಭವ ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಂತಿದೆ ಎಂದರು.

ಹಗಲು ಹೊತ್ತಿನಲ್ಲಿ ನಕ್ಷತ್ರಗಳನ್ನು ಶೋಭಿಸಿದ ಸಫಲಿಗ ಸೇವಾ ಸಂಘದ ವೈಭವೋತ್ಸವ ಸ್ತುತ್ಯರ್ಹ. ನೂರಾರು ಪ್ರತಿಭಾನ್ವಿತ ತಾರೆಗಳನ್ನು ಈ ಕಾರ್ಯಕ್ರಮದಲ್ಲಿ ಬೆಳಗಿಸಿದ್ದಾರೆ. ಯಾವಾಗ ಯುವ ಜನತೆಯನ್ನು ಆರೋಪ ಮುಕ್ತಗೊಳಿಸಿ ಅವಕಾಶ ಕಲ್ಪಿಸುತ್ತೇವೆಯೋ ಆವಾಗಲೇ ಯುವ, ಹೊಸತಲೆಮಾರು ಸ್ವಸಮುದಾಯದಲ್ಲಿ ಸಕ್ರೀಯ ಗೊಳ್ಳುತ್ತದೆ. ಇಂತಹ ವೇದಿಕೆ ನಿರ್ಮಾಣದಿಂದ ಯುವ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತವೆ. ಇದು ಜಾಗತಿಕ ಕಾಲಘಟ್ಟವಾಗಿದ್ದು ಹಳೆಯದ್ದನ್ನೇ ವಸ್ತುಸ್ಥಿತಿಯಾಗಿಸಿ ಆಪಾದನೆ ಮಾಡಿದ್ದಲ್ಲಿ ಯುವಜನಾಂಗ ತಮ್ಮಷ್ಟಕ್ಕೆ ಮುನ್ನಡೆಯುತ್ತಾರೆ. ಇದರಿಂದ ಸ್ವಸಮಾಜಕ್ಕೆನೇ ನಷ್ಟವಾಗುವುದು. ಅಪವಾದಮುಕ್ತತೆಗೆ ಇಂತಹ ವೇದಿಕೆಗಳೇ ಉತ್ತರ ಎಂದು ವಕೀಲ ರಾಘವ ಅಭಿಪ್ರಾಯ ಪಟ್ಟರು.

ಶ್ರೀನಿವಾಸ ಸಾಫಲ್ಯ ಅಧ್ಯಕ್ಷೀಯ ಭಾಷಣಗೈದು ಸಫಲಿಗರ ಸಮನ್ವಯತೆಯೊಂದಿಗೆ ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶವಾಗಿ ಆಯೋಜಿಸಲಾದ ಈ ಕಾರ್ಯಕ್ರಮ ಸಫಲತೆ ಸಾಧಿಸಿದೆ ಅನ್ನುವುದಕ್ಕೆ ತಾವೆಲ್ಲರೂ ಸಾಕ್ಷಿ. ಇಂತಹ ಕಾರ್ಯಕ್ರಮಗಳಿಂದ ಸಮಭಾವನೆಗಳು ಹುಟ್ಟಿ ಸೌಹಾರ್ದತಾ ಬಾಳಿಗೆ ಪ್ರೇರಕವಾಗುತ್ತವೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರವಿತ್ತ ಸರ್ವರಿಗೂ ಅಭಿವಂದನೆಗಳು ಎಂದÀರು.

ಕು| ಆದ್ಯ ಅಶ್ವಿನ್ ಮಠದಕಣಿ, ಕು| ಅನು ಚವ್ಹಾಣ್ ಇವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ದೇವಾಡಿಗ ಸಂಘದ ಹರೀಶ್ ದೇವಾಡಿಗ, ರಜಕ್ ಸಂಘದ ರೋನಕ್ ಕುಂದರ್, ನಾಟ್ಯ ನಿಲಯ ಉಳ್ಳಾಲ ಇದರ ನಿರ್ದೇಶಕಿ ನಾಟ್ಯವಿದುಷಿ ಸುನೀತಾ ಜಯಂತ್ ದಂಪತಿಗೆ, ವಿಜಯ ಸಫಲಿಗ, ಸಂಧ್ಯಾ ಪುತ್ರನ್, ಶೋಧನ್ ಸಫಲಿಗ, ಚೈತ್ರೇಶ್ ಕಾಂಚನ್ ಇವರಿಗೆ `ಪ್ರೈಡ್ ಆಫ್ ಯೂತ್' ಗೌರವÉ, ಸಂತೋಷ್ ಕುಂದರ್, ರಿತೇಶ್ ಕರ್ಕೇರ, ಶ್ವೇತಾ ಬಂಗೇರ, ಶ್ವೇತಾ ಸಫಲಿಗ ಇವರಿಗೆ `ಪಿಲ್ಲರ್ ಆಫ್ ಯೂತ್' ಗೌರವ, ಹಲವಾರು ಯುವಕ ಯುವತಿಯರಿಗೆ `ಎನರ್ಜಿಕ್ ಯೂತ್' ಗೌರವದೊಂದಿಗೆ ಮತ್ತು ಉಪಸ್ಥಿತ ಹಿರಿಯ ಸಫಲಿಗ ಬಂಧುಗಳು, ಪ್ರಾಯೋಜಕರಿಗೆ ಸತ್ಕಾರಿಸಲಾಯಿತು. ಲಕ್ಕಿಡಿಪ್‍ಡ್ರಾಗೈದು ಚಿನ್ನದ ಹಾಗೂ ರಜತ ನಾಣ್ಯ, ಲಕ್ಮೇ ಕೊಡುಗೆಗಳನ್ನಿತ್ತು ಅಭಿನಂದಿಸಿದರು.

ಕುಲದೇವರಾದ ಗೋಪಾಲಕೃಷ್ಣ ದೇವರನ್ನು ಸ್ತುತಿಸಿ ಸಮಾರಂಭ ಆರಂಭಿಸಲಾಯಿತು. ಪ್ರತೀಕ್ ಕರ್ಕೇರ ಅವರು ಸಾಫಲ್ಯ ಸಂಘದ ಯುವ ವಿಭಾಗದ ಕಾರ್ಯ ಚಟುವಟಿಕೆಗಳ ಸ್ಥೂಲವಾಗಿ ಮಾಹಿತಿ ನೀಡಿದರು. ಶಾಲಿನಿ ಸಾಲ್ಯಾನ್, ಶ್ವೇತಾ ಪುತ್ರನ್, ಕಿರಣ್ ಸಫಲಿಗ, ಕೃತಿ ಕಾಂಚನ್, ರಿತೇಶ್ ಕರ್ಕೇರ ಅತಿಥಿüಗಳನ್ನು ಪರಿಚಯಿಸಿದರು. ಉಷಾ ಸಫಲಿಗ ಕಾರ್ಯಕ್ರಮ ನಿರೂಪಿಸಿದರು.

ಅಸ್ವಸ್ಥತೆಯಿಂದ ಬಳಲುವವರ ಅಭಿವೃದ್ಧಿಗಾಗಿ ಸೇವಾನಿರತ ಸಂಗೋಪತ ಚಾರಿಟೇಬಲ್ ಟ್ರಸ್ಟ್‍ಗೆ ಸಾಫಲ್ಯ ಸೇವಾ ಸಂಘದ ಯುವ ವಿಭಾಗವು ರೂಪಾಯಿ 3 ಲಕ್ಷ ಮೊತ್ತವನ್ನು ದೇಣಿಗೆಯಾಗಿ ಹಸ್ತಾಂತರಿಸಿದ್ದು ಸರಕರೇತರ ಸಂಗೋಪತ (ಎನ್‍ಜಿಒ) ಸಂಸ್ಥೆಯ ಸುಜತಾ ರವೀಂದ್ರ ಸುಗ್ವೇಕರ್ ದಂಪತಿ ಸ್ವೀಕರಿಸಿದರು. ಅಂತೆಯೇ ಮಂಗಳೂರು ವಾಮಂಜೂರುನ ವಿಕಲಚೇತನ ಚಿರಾಗ್ ಗಾಣಿಗ ಇವರ ಇಲೆಕ್ಟ್ರಾನಿಕ್ ಚೇರ್‍ಗೆ ರೂಪಾಯಿ 50ಸಾವಿರ ಮೊತ್ತ ವಂತಿಗೆಯಾಗಿ (ಗೌತಮ್ ಬಂಗೇರ ಸ್ವೀಕರಿಸಿದರು) ನೀಡಿ ಮಾನವೀಯತೆ ಮೆರೆದರು.

ಸಮೂಹ ನೃತ್ಯ ಸ್ಪರ್ಧೆ ನಾಟ್ಯ ನಿಲಯ ಉಳ್ಳಾಲ ಮಂಗಳೂರು ತಂಡ ಐಕಳ ಹರೀಶ್ ಶೆಟ್ಟಿ ಪ್ರಾಯೋಜಕತ್ವದ ಪ್ರಥಮ ಸ್ಥಾನ ಮುಡಿಗೇರಿಸಿದ್ದು, ದೇವಾಡಿಗ ಕಲಾವಿದರು ದ್ವಿತೀಯ ಮತ್ತು ಕರ್ನಾಟಕ ಮಹಾ ಮಂಡಳ ತೃತೀಯ ಸ್ಥಾನಕ್ಕೆ ಭಾಜನವಾಯಿತು. ಕಿರಿಯ ವಿಭಾಗದ ಸೋಲೋ ನೃತ್ಯ ಸ್ಪರ್ಧೆಯಲ್ಲಿ ಕು| ನವ್ಯ ಶೆಟ್ಟಿ (ಪ್ರಥಮ) ಮಾ| ಕಾರ್ತಿಕ್ ಎಂ.ಮೊಗವೀರ (ದ್ವಿತೀಯ) ಕು| ವೃಷ್ಠಿ ಆರ್.ನಾಯರ್ (ತೃತೀಯ), ಕಿರಿಯ ವಿಭಾಗದ ಸೋಲೋ ವಿಭಾಗದಲ್ಲಿ ಕು| ನಿಖಿತಾ ಸದಾನಂದ್ ಅವಿೂನ್ (ಪ್ರಥಮ) ಕು| ಮಯೂರಿ ಬಂಗೇರ (ದ್ವಿತೀಯ) ಕು| ಸಾಕ್ಷಿ ಪಿ.ಶೆಟ್ಟಿ (ತೃತೀಯ) ಬಹುಮಾನಕ್ಕೆ ಪಾತ್ರರಾದರು. ಸುಧೀರ್ ಸುವರ್ಣ ಪಾರಿತೋಷಕ ವಿತರಣಾ ನಿರೂಪನೆ ಗೈದರು. ಯುವ ಉಪ ಕಾರ್ಯಾಧ್ಯಕ್ಷೆ ಅಶ್ವಿನಿ ಸಫಲಿಗ ಉಪಕಾರ ಸ್ಮರಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here