Saturday 27th, April 2024
canara news

ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ

Published On : 26 Feb 2020   |  Reported By : Rons Bantwal


ಉಚಿತ ಸಾಮೂಹಿಕ ವಿವಾಹ-ಸ್ವಸ್ತಿಸಿರಿ ಪ್ರಶಸ್ತಿ-ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ

ಮುಂಬಯಿ (ಬಂಟ್ವಾಳ), ಫೆ.25: ಕಳೆದ ಸುಮಾರು ಮೂರುವರೆ ದಶಕಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 36ನೇ ಸಂಭ್ರಮಾಚರಣೆ ಮತ್ತು ಹನ್ನೆರಡನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭ ಇದೇ ಮಾ.8ರ ಭಾನುವಾರ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.

ಮುನ್ನಲಾಯಿಗುತ್ತು ಸಚ್ಚಿದಾನಂದ ಎಂ.ಶೆಟ್ಟಿ (ವಿೂರರೋಡ್) ಹಾಗೂ ಸುಂದರ್‍ರಾಜ್ ಹೆಗ್ಡೆ ಮುಂಬಯಿ ಇವರುಗಳ ಮಹಾ ಪೆÇೀಷಕತ್ವದಲ್ಲಿ 12ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ನಿಮಿತ್ತ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾ.01ನೇ ರವಿವಾರ ಪುಂಜಾಲಕಟ್ಟೆ ಅಲ್ಲಿನ ನಂದಗೋಕುಲ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬಂಟ್ವಾಳ ತಹಶೀಲ್ದಾರ ಕೆ.ರಶ್ಮೀ ಅಧ್ಯಕ್ಷತೆಯಲ್ಲಿ ಜರುಗಲಿದೆ. ಇಂಜಿನೀಯರ್ ಎಸ್.ಮಂಜ ಪ್ಪ, ಮಲ್ಲಿಕಾ ಶೆಟ್ಟಿ, ವಿನ್ಸೆಂಟ ಸೆರಾ, ರಾಜಶೇಖರ್ ರೈ, ವಜ್ರಾ ಪೂಜಾರಿ ರಮೇಶ್ ಶೆಟ್ಟಿ ಮಜಲೋಡಿ ಮತ್ತಿತರ ಗಣ್ಯರು ಆಗಮಿಸಿ ವಧೂವರರಿಗೆ ಧಾರಾ ವಸ್ತ್ರವಿತರಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಪ್ರಧಾನ ಸಂಘಟಕ ತುಂಗಪ್ಪ ಬಂಗೇರ ವಿವರ ತಿಳಿಸಿದÀರು.

ಮಾ.08ನೇ ಭಾನುವಾರ ಪುಂಜಾಲಕಟ್ಟೆ ಅಲ್ಲಿನ ಬಸವನಗುಡಿ ಬಸವೇಶ್ವರ ದೇವಾಲಯದಿಂದ ವಧೂವರರನ್ನು ಲಗ್ನೋತ್ಸವಕ್ಕೆ ಶಾಸ್ತ್ರೋಕ್ತವಾಗಿ ಸಿದ್ಧಪಡಿಸಿ ಕರ್ನಾಟಕ ಕರಾವಳಿಯ ತುಳುನಾಡ ಸಂಸ್ಕಾರ, ಸಂಸ್ಕøತಿ ಧಾರ್ಮಿಕ ಪರಂಪರೆ, ಹಿನ್ನೆಲೆಗಳನ್ನು ಭಿತ್ತರಿಸುವ ವೇಷಭೂಷಣ, ಚೆಂಡೆ, ಬ್ಯಾಂಡ್, ಕೊಂಬು ಕಹಳೆ, ಡೋಲು ವಾದ್ಯ ವಾದನಗಳ ನೀನಾದÀ, ಸಾಂಸ್ಕøತಿಕ ವೈಭವ, ಜಾನಪದ ನೃತ್ಯಗಳ ಪ್ರಾತ್ಯಕ್ಷಿಕೆಗಳ ಮೇಳೈಕೆ, ಸಾಂಪ್ರ್ರದಾಯಿಕ ಉಡುಪು ಧರಿತ ಕಲಶ ಹೊತ್ತ ಸುವಾಸಿನಿಯರ ಸ್ವಾಗತ, ವೈವಿಧ್ಯತಾ ವೈಭವ,À ಉತ್ಸವದ ಸಡಗರದ ವೈಭವೋಪೇತ ದಿಬ್ಬಣ ಮೆರವಣಿಗೆಯಲ್ಲಿ ಮದುವೆ ಮಂಟಪದ ವರೆಗೆ ಬರಮಾಡಿ ಕೊಳ್ಳಲಾಗುವುದು. ನಂತರ ಬಂಗ್ಲೆ ಮೈದಾನದಲ್ಲಿ ನಿರ್ಮಿತ ಮದುವೆ ಮಂಟಪದಲ್ಲಿ ಪೂರ್ವಾಹ್ನ 11.33ರ ಶುಭ ಮುಹೂರ್ತದಲ್ಲಿ 10 ಜೋಡಿ ವಧು-ವರರಿಗೆ ವೇದಮೂರ್ತಿ ಕೃಷ್ಣಭಟ್ ಗುರುವಾಯನಕೆರೆ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಗುವು ದು. ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯ ಜಿ. ಅವರು ದಿಬ್ಬಣ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆ ಪಡೆಯಲಿರುವ ನವಮಧುವರರಿಗೆ ಕರ್ನಾಟಕ ಸರಕಾರದ ಆದರ್ಶ ವಿವಾಹ ಯೋಜನೆಯಡಿ ರೂ.50,000/- ಅಧುವಿನ ಖಾತೆಗೆ ಜಮಾ ಮಾಡಲಾಗುವುದು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ 2020 ಪ್ರದಾನಿಸಲಾಗುವುದು. ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಶಶಿಕಿರಣ್ ಬೊಮ್ಮಸಂದ್ರ ಬೆಂಗಳೂರು (ಉದ್ಯಮ), ಸತೀಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಬೋಳದಗುತ್ತು (ಕಂಬಳ ಕ್ಷೇತ್ರ), ಎ.ಕೆ ಸುಂದರ್ ಸಾಲ್ಯಾನ್ ಬೆಂಗಳೂರು (ಸಮಾಜ ಸೇವೆ), ಮೋಹನದಾಸ್ ಕೊಟ್ಟಾರಿ (ಸಾಂಸ್ಕೃತಿಕ) ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಗೌರವಕ್ಕೆ ಲಿಯೋ ಬಾಸಿಲ್ ಫೆರ್ನಾಂಡಿಸ್ (ಮುದ್ರಣ-ಉದ್ಯಮ), ಕು| ಭ್ರಾಹ್ಮಿ ಮಯ್ಯ (ಸಾಂಸ್ಕೃತಿಕ), ಕು| ಆರಾಧನಾ ಭಟ್ ನಿಡ್ಡೋಡಿ (ಕಲೆ), ಸ್ವರ್ಣ ಸಂಜೀವಿನಿ ಮಡವು ಪಾಂಡವರಕಲ್ಲು (ಅತ್ಯುತ್ತಮ ಯುವ ಸಂಘಟನೆ) ಅವರನ್ನು ಆಯ್ಕೆ ಗೊಳಿಸಲಾಗಿದೆ.

ಬಂಟ್ವಾಳ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗುವ ಭವ್ಯ ಸಮಾರಂಭವನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಂಸದ, ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಸಾಧಕರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿüಗಳಾಗಿ ಭಾಗವಹಿಸುವರು ಎಂದು ಕ್ಲಬ್ ಅಧ್ಯಕ್ಷ ಪ್ರಶಾಂತ್‍ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಮಾಜಿ ಅಧ್ಯಕ್ಷ ಪಿ.ಎಂ ಪ್ರಭಾಕರ, ಕಾರ್ಯದರ್ಶಿ ಜಯರಾಜ ಅತ್ತಾಜೆ, ಸಂಚಾಲಕ ರಾಜೇಶ್ ಪಿ.ಪುಂಜಲಕಟ್ಟೆ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here