Friday 26th, April 2024
canara news

ರಂಗದಿನದಂದು ಪುನಃ ಚಿನ್ಮನದಲ್ಲಿ ನಮ್ಮ ಶತದೀವಿಗೆ (- ಶ್ಯಾಮಲಾ ವಾಧವ)

Published On : 01 Apr 2020   |  Reported By : Rons Bantwal


ಮುಂಬಯಿ, ಎ.01: ಕಳೆದ ನವೆಂಬರ್ ಹದಿನೈದು ಸೋಮೇಶ್ವರ ಉಚ್ಚಿಲದ ನಾಡೇ ಸಂಭ್ರಮಿಸಿದ ದಿನ. ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ಮೂರು ದಿನಗಳ ಸಂಭ್ರಮೋತ್ಸವದ ಆರಂಭದ ದಿನ ಶಾಲಾ ಮೈದಾನದಲ್ಲಿ ಉದ್ಘಾಟನಾ ಸಮಾರಂಭದ ಸಭಾಕಾರ್ಯಕ್ರಮದ ಬಳಿಕ ಅಲ್ಲಿ ತೆರೆದುಕೊಂಡ "ಶತದೀವಿಗೆ" ಧ್ವನಿ ಬೆಳಕಿನ ರೂಪಕ, ಆ ಸುವಿಸ್ತಾರದ ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮವನ್ನು ರಂಜಿಸಿ, ಸೂಜಿಗಲ್ಲಿನಂತೆ ಸೆಳೆದಿಟ್ಟು, ಪ್ರದರ್ಶನ ಮುಗಿದ ಮೇಲೂ ನೆರೆದ ಜನರು ಆ ಅಪರಾತ್ರಿಯಲ್ಲೂ ಕದಲದೆ ನಿಂತು, ಕಲಾಕಾರರ ಪರಿಚಯವನ್ನೂ ಕಣ್ತುಂಬಿಕೊಂಡ ಅಪೂರ್ವ ಅನುಭವ.

ನಿರ್ದೇಶಕ ವಿದ್ದೂ ಉಚ್ಚಿಲ್ ಅವರ ನಿರ್ದೇಶನದ ಈ ರೂಪಕ ಪ್ರದರ್ಶನವನ್ನು ಕಂಡ ಶಾಲಾ ಹಳೆ ವಿದ್ಯಾರ್ಥಿ, ಬೆಂಗಳೂರಿನ ರಾಜೇಶ್ ಎಂ.ಉಚ್ಚಿಲ್ ಅವರು, ಈ ಪ್ರದರ್ಶನವನ್ನು ಮೆಚ್ಚಿ ಬರೆದ ನಲ್ವಾತುಗಳನ್ನು ಇಂದಿನ ರಂಗದಿನ ಪ್ರಯುಕ್ತ ನೆನಪಿಸಿಕೊಂಡು ಅವಧಿಗಾಗಿ ಇಂಗ್ಲಿಷ್‍ನಿಂದ ಕನ್ನಡಕ್ಕೆ "ನವೆಂಬರ್ ಹದಿನೈದರಿಂದ ಹದಿನೇಳು, ಮೂರು ದಿನಗಳ ಕಾಲ ಸೋಮೇಶ್ವರ ಉಚ್ಚಿಲದ ನನ್ನ ಶಾಲೆಯ ಶತಮಾನೋತ್ಸವದ ಸಂಭ್ರಮ ಸವಿಯುವ ಭಾಗ್ಯ ನನ್ನದಾಯ್ತು. ಅದು ಬರಿಯ ಆಚರಣೆಯಾಗಿರಲಿಲ್ಲ; ಅದೊಂದು ಹಬ್ಬವೇ ಆಗಿತ್ತು. ಊರರಸ್ತೆಗಳೂ, ಶಾಲಾ ಕಟ್ಟಡಗಳೂ ವಿದ್ಯುದ್ದೀಪಮಾಲೆಗಳಿಂದ ಶೋಭಿತ -ವಾಗಿದ್ದುವು. ಮೂರು ದಿನಗಳ ಪ್ರತಿಯೊಂದು ಕಾರ್ಯಕ್ರಮವೂ, ಆಚರಣಾ ಸಮಿತಿ ಮೇಲ್ವಿಚಾರಣೆಯಲ್ಲಿ ಸಮರ್ಪಕವಾಗಿ ಅತ್ಯುತ್ತಮವಾಗಿ ಮೂಡಿ ಬಂದಿತು. ಎಲ್ಲಕ್ಕಿಂತ ಪ್ರಭಾವಪೂರ್ಣವಾಗಿ ಪ್ರದರ್ಶಿತವಾದುದು, ಶಾಲೆ ನಡೆದು ಬಂದ ದಾರಿಯನ್ನು ತೆರೆದಿಡುವ ಧ್ವನಿ ಬೆಳಕಿನ ಕಾರ್ಯಕ್ರಮ, "ಶತದೀವಿಗೆ". ನೋಡಿದ ಎಲ್ಲರೂ ಸ್ತಂಭೀಭೂತರಾಗಿ ಮೈಮರೆತು ನಿಲ್ಲುವಂತೆ ಪ್ರಭಾವ ಬೀರಿದ ರಂಗ ಪ್ರದರ್ಶನ. ಆರಂಭದ ಶತಮಾನೋತ್ಸವ ಗೀತೆಯಿಂದಲೇ ಆರಂಭಿಸುವೆ. ಶತದೀವಿಗೆ ಸಾಹಿತ್ಯ ರಚಿಸಿದ ಸಾಹಿತಿ ಶ್ಯಾಮಲಾ ಮಾಧವ ಅವರ ಈ ಗೀತೆಗೆ ಸಂಗೀತ ನೀಡಿದ ಗುರುರಾಜ ಎಂ.ಬಿ ಹಾಗೂ ಹಿನ್ನೆಲೆ ಗಾಯನದಲ್ಲಿ ಸಂಗೀತಾ ಬಾಲಚಂದ್ರ ಈ ಗೀತೆಯನ್ನು ಕೇಳಿದಷ್ಟೂ ತಣಿಯದ ಅಮರಗೀತೆಯಾಗಿಸಿದರು. ಮೂರುದಿನಗಳೂ ಕಾರ್ಯಕ್ರಮದ ಮುಖ್ಯ ಕಾಲಘಟ್ಟಗಳಲ್ಲಿ ಅನುರಣಿಸಿದ ಈ ಗೀತೆ ಜನಮನದಲ್ಲಿ ಸ್ಥಾಯಿಯಾಯ್ತು. ರೂಪಕದ ಇತರ ಹಾಡುಗಳಿಗೆ ಧ್ವನಿಯಾದವರು, ಗುರುರಾಜ ಎಂ.ಬಿ,. ಚಿನ್ಮಯಿ ವಿ,ಭಟ್ ಹಾಗೂ ತೃಪ್ತಿ ಉಚ್ಚಿಲ್.

ರಂಗವಿನ್ಯಾಸ, ಧ್ವನಿಗ್ರಹಣ, ಬೆಳಕಿನ ಸಂಯೋಜನೆ ಅದ್ಭುತವಾಗಿತ್ತು. ರೂಪಕವನ್ನು ನಿರ್ದೇಶಿಸಿದ ವಿದ್ವಾನ್ ಉಚ್ಚಿಲ್, ನಗರದಲ್ಲಿ ವಿದ್ದೂ ಉಚ್ಚಿಲ್ ಎಂದೇ ಹೆಸರಾದ ಅದ್ಭುತ ಪ್ರತಿಭೆಯ ನಿರ್ದೇಶಕ. ನೂರೈವತ್ತು ಶಾಲಾ ಮಕ್ಕಳು ರೂಪಕದ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಯಾವುದೇ ನಟನಾ ಅನುಭವವಿರದ ಊರಿನ ಹೆಂಗಳೆಯರೂ, ಪುರುಷರೂ ಪಾತ್ರಗಳಿಗೆ ನಟರಾಗಿ ಒದಗಿದರು. ರಂಗ ಪರಿಕರಗಳ ತಯಾರಿಯಲ್ಲಿ ವಿದ್ದೂ ತಂಡದ ಶರತ್ ಮೈಸೂರು, ಶಿವರಾಮ್ ಕಲ್ಲಡ್ಕ, ಕಿರಣ್ ಮಂಜೇಶ್ವರ, ಮೇಘನಾ ಕುಂದಾಪುರ, ಮೇಘನಾ ಸೋಮೇಶ್ವರ, ಬೃಜೇಶ್ ಬಟ್ಟಪ್ಪಾಡಿ, ರೋಹನ್, ಸತ್ಯ ಜೀವನ್, ಸಚಿನ್, ಜಿತೇಂದ್ರ ಪಿಲಿಕೂರು, ಯೋಗೀಶ ಜಪ್ಪಿನ ಮೊಗರು ಮೊದಲಾದವರು ತಿಂಗಳಿಗೂ ಹೆಚ್ಚು ಅವಿರತವಾಗಿ ದುಡಿದರು. ಪ್ರವೀಣ್ ಕೊಡವೂರು ಅವರ ಬೆಳಕಿನ ವಿನ್ಯಾಸ ಅಮೋಘವಾಗಿತ್ತು. ಮಧ್ಯದಲ್ಲಿ ಒಂದರ ಮೇಲೊಂದು ಮೂರು ಸ್ಟೇಜ್‍ಗಳಲ್ಲೂ, ಅತ್ತಿತ್ತ ಎರಡು ಸ್ಟೇಜ್‍ಗಳಲ್ಲೂ, ಹೀಗೆ ಐದು ಹಂತದ ಸ್ಟೇಜ್‍ಗಳಲ್ಲಿ ನಡೆದ ಪ್ರದರ್ಶನವಿದು. ಪುನಪ್ರ್ರದರ್ಶನವಾಗಬೇಕೆಂಬ ಸತತ ಬೇಡಿಕೆ ಬಂದುದರಲ್ಲಿ ಆಶ್ಚರ್ಯವಿಲ್ಲ."

ರಾಜೇಶ್ ಎಂ.ಉಚ್ಚಿಲ್: ಶತಮಾನದ ಹಿಂದೆ ಪ್ರಥಮ ಮಹಾಯುಧ್ಧ ಕಾಲದ ಅಜ್ಞಾನ, ದಾರಿದ್ರ್ಯದ ಸಂಕಷ್ಟದ ದಿನಗಳಲ್ಲಿ ವಿದ್ಯೆಯ ಗಂಧವಿರದ ಜನಾಂಗಕ್ಕೆ ಅಕ್ಷರ ಜ್ಞಾನವನ್ನಿತ್ತು, ವಿದ್ಯೆಯ ಹೊಂಬೆಳಕಿನಿಂದ ಬೆಳಗಿದ ನಾಡ ಹಿರಿಯರ ಸೇವಾದೀಪ್ತಿಯ ಹಿರಿಮೆ ಹಾಗೂ ಶಾಲೆ ನಡೆದು ಬಂದ ದಾರಿಯನ್ನು ಚಿತ್ರಿಸಿದ ಅಮೋಘ ಧ್ವನಿ ಬೆಳಕಿನ ರೂಪಕವಿದು. ಹಿರಿಯರಾದ ಡಾ| ಅಮೃತ ಸೋಮೇಶ್ವರರೂ, ಶಾಲೆಯೊಡನೇ ಜನಿಸಿದ ನೂರೊಂದರ ಹರೆಯದ ನಮ್ಮಜ್ಜ ನಾರಾಯಣ ಉಚ್ಚಿಲರೂ ಆ ರಾತ್ರಿಯಲ್ಲೂ ಕೊನೆವರೆಗೂ ಅಲುಗದೆ ಕುಳಿತು ವೀಕ್ಷಿಸಿದ ಭಾಗ್ಯ ನಮ್ಮದು. ರಂಗಪ್ರದರ್ಶನಗಳಲ್ಲಿ ನಾಡಲ್ಲಿ ಈಗಾಗಲೇ ಹೆಸರಾಗಿ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ರಂಗ ತರಬೇತಿ ನೀಡುತ್ತಿರುವ ನಿರ್ದೇಶಕ ವಿದ್ದೂ ಉಚ್ಚಿಲ್ ಅವರ ಪ್ರತಿಭೆಗೆ ಹಿಡಿದ ಕನ್ನಡಿ, ಈ ಶತದೀವಿಗೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here