Saturday 27th, April 2024
canara news

ಗಲ್ಫ್‍ನ ಅಬುಧಾಬಿಯಲ್ಲಿ ಕರಾವಳಿಯ ಯುವಕ ಯಶವಂತ್ ಪೂಜಾರಿ ಮೃತ

Published On : 28 Jun 2020   |  Reported By : Rons Bantwal


ಪಾಥಿರ್üೀವ ಶರೀರ ತವರೂರಿಗೆ ರವಾನಿಸಿದ ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡ

ಮುಂಬಯಿ (ದುಬಾಯಿ), ಜೂ.21: ಅಬುಧಾಬಿಯಲ್ಲಿ ಇತ್ತೀಚೆಗೆ ಮೃತರಾಗಿದ್ದ ಕರಾವಳಿಯ ಮಂಗಳೂರು ಅಡ್ಡೂರು (ಪೆÇಳಲಿ) ಮೂಲದ ಯುವಕ ಯಶವಂತ್ ಪೂಜಾರಿ ಅಪಘಾಟದಲ್ಲಿ ಮೃತ್ಯುವಶವಾಗಿದ್ದು, ಕನ್ನಡಿಗಾಸ್ ಹೆಲ್ಪ್‍ಲೈನ್ ಮತ್ತು ಯುಎಇ ಕನ್ನಡಿಗರು ತಂಡ ಪಾಥಿರ್üೀವ ಶರೀರವನ್ನು ತವರೂರಿಗೆ ರವಾನಿಸಿದ್ದು ಕುಟುಂಬಸ್ಥರು ಹುಟ್ಟುರಲ್ಲಿ ಇಂದು ಹಿಂದು ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿ ಕೊರೋನ ಸಂಕಷ್ಟದ ಸಮಯದಲ್ಲೂ ಮಾನವೀಯತೆ ಮೆರೆದು ಸೌಹಾರ್ದತೆ ಎತ್ತಿ ಹಿಡಿಯುವಂತಹ ಶ್ಲಾಘನೀಯ ಕಾರ್ಯಕ್ಕೆ ಸ್ಪಂದಿಸಿದ ಸರ್ವರ ಉಪಕಾರ ಸ್ಮರಿಸಿದರು.

ಯುಎಇ ಕನ್ನಡಿಗರು ಯುಎಇ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಹಲವಾರು ಪರವಾನಗಿಗಳನ್ನು ಪಡೆದು ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು, ಈ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ. ಅಬುಧಾಬಿಯಲ್ಲಿ ನಮ್ಮೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡದ ಹಿದಾಯತ್ ಅಡ್ಡೂರ್ ಅವರಿಗೆ ಮುಂಜಾನೆ ಕರೆಮಾಡಿ ತಿಳಿಸಿದಾಗ, ಅವನ ವಿವರ ನೀಡಿ ಎಂದಾಗ ಯಶವಂತನ ಒಂದು ಫೆÇೀಟೋ ಮತ್ತು ಆಧಾರ್ ಕಾರ್ಡ್ ಮಾತ್ರವಿರುವುದು, ಪಾಸ್‍ಪೆÇೀರ್ಟ್ ಪ್ರತಿ, ಮೊಬೈಲ್ ನಂಬರ್ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲ, ಅಪಘಾತದ ಸುದ್ದಿ ತಿಳಿದು ಅವರ ಕುಟುಂಬದವರ ಸ್ಥಿತಿ ಶೋಚನೀಯವಾಗಿದೆ, ಸ್ವಲ್ಪ ಸಹಾಯ ಮಾಡಿ ಎಂದಾಗ ಇದನ್ನು ಸವಾಲಾಗಿ ಸ್ವೀಕರಿಸಿ ಹಿದಾಯತ್ ಮತ್ತು ತಂಡ ಕಾರ್ಯಪ್ರವೃತ್ತರಾಗಿದ್ದರು.

ಯಶವಂತ್ ಕುರಿತು ಮಾಹಿತಿ ಕಲೆ ಹಾಕಲು ಹೊರಟಾಗ ಆತ ಮೃತಪಟ್ಟಿದ್ದು, ಅನಾಥ ಶವವಾಗಿ ಶವಾಗಾರದಲ್ಲಿ ಇರುವುದು ತಿಳಿದು ಬಂದಾಗ ಮೃತರ ಹೆತ್ತವರು ತಮ್ಮ ಮಗನ ಮುಖವನ್ನು ಕೊನೆಯ ಬಾರಿಗೆ ನೋಡಬೇಕು ಹೇಗಾದರೂ ಮಾಡಿ ಮೃತದೇಹ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೊಂಡಾಗ, ಇದನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಲು ಹಿದಾಯತ್ ಅವರು ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕನ್ನಡಿಗಾಸ್ ಹೆಲ್ಪ್‍ಲೈನ್ ಇದರ ಸಿರಾಜ್ ಪರ್ಲಡ್ಕ, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಅನಿವಾಸಿ ಕನ್ನಡಿಗರ ಒಕ್ಕೂಟದ ರಶೀದ್ ಬಿಜೈ, ಶರೀಫ್ ಸರ್ವೆ, ಬಶೀರ್ ಕೊಡ್ಲಿಪೇಟೆ, ಅಬುಧಾಬಿಯ ಪ್ರದೀಪ್ ಕಿರೋಡಿಯನ್, ಶ್ರೀಧರ್, ದೀಪಾ ಹಾಗೂ ಊರಿನಿಂದ ಆಸಿಫ್, ಮುಝಮ್ಮಿಲ್, ಭಾಗ್ಯರಾಜ್, ದೀಪಕ್, ರಾಜೇಶ್ ಮರೋಳಿ ಮತ್ತಿತರನ್ನು ಸೇರಿಸಿ ಮುನ್ನಡೆದರು.

ಕೊರೋನ ಸಂಕಷ್ಟದ ಈ ಸೂಕ್ಷ್ಮ ಸಮಯದಲ್ಲಿ ಪೆÇೀಸ್ಟ್‍ಮಾರ್ಟಂ ನಡೆಸಿ ಸಹಜ ಸಾವು ಎಂದು ಖಚಿತಪಡಿಸಿ, ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ನಂತರವೂ ಯಶವಂತರ ಪಾಸ್‍ಪೆÇೀರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇರದೇ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಪರವಾನಗಿ ಪಡೆಯುವುದು ಅಸಾಧ್ಯ ಎಂಬಂತಿದ್ದಾಗ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್‍ಪೆÇೀರ್ಟ್ ಮತ್ತು ಎಲ್ಲಾ ಪರವಾನಗಿ ಕೆಲಸ ತ್ವರಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಕನ್ನಡಿಗಾಸ್ ಹೆಲ್ಪ್‍ಲೈನ್ ತಂಡ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರವೀಣ್ ಶೆಟ್ಟಿ ವಕ್ವಾಡಿ ಅವರೂ ಭರವಸೆ ನೀಡಿದ್ದರು. ಅದೇ ರೀತಿ ಊರಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸವನ್ನು ನ್ಯಾಯವಾದಿ ಉಲ್ಲಾಸ್ ಪಿಂಟೋ ಮಾಡಿದರೆ, ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಅವರಿಂದ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಸಹಕರಿಸಿದ ಅಥಾವುಲ್ಲಾ ಜೋಕಟ್ಟೆ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸಹಕರಿಸಿದ ಅಧಿಕಾರಿಗಳಾದ ಯತೀಶ್ ಉಳ್ಳಾಲ, ಪ್ರವೀಣ್ ಕುಮಾರ್ ಸರ್ ಸೇವೆ ಅನನ್ಯ.

ಯಶವಂತ್ ಕುಟುಂಬದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ದೈನಂದಿನ ಚಟುವಟಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿದಾಯತ್ ಅವರು ಮೃತದೇಹ ರವಾನಿಸಲು ಉಂಟಾಗುವ ಖರ್ಚುನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದರು, ಅಬುಧಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೆÇಲೀಸ್ ಮತ್ತು ಇತರ ಪರವಾನಗಿ ಕೆಲಸವನ್ನು ಹಮೀದ್ ಸತ್ತಿಕಲ್ಲ್ ನಡೆಸಿಕೊಟ್ಟು ಪೂರ್ತಿಗೊಂಡ ನಂತರ ಮೃತದೇಹದೊಂದಿಗೆ ಅಂಬ್ಯುಲೆನ್ಸ್‍ನಲ್ಲಿ ಸಿರಾಜ್ ಪರ್ಲಡ್ಕ, ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾರವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು. ಅದೇರೀತಿ ಮೃತದೇಹ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಸ್ವೀಕರಿಸಲು ಸಹಕರಿಸಿದ ಖಲೀಲ್ ತಂಡದ ಸೇವೆ ಸ್ತುತ್ಯರ್ಹ.

ಈ ಕುರಿತು ಕನ್ನಡಿಗಾಸ್ ಹೆಲ್ಪ್‍ಲೈನ್ ಇದರ ಹಿದಾಯತ್ ಅಡ್ಡೂರ್ ಮಾತನಾಡಿ ಈ ಸೇವೆಯ ಹಿಂದೆ ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವಧರ್ಮ, ಯಶವಂತ್ ನಮ್ಮೂರ ಹುಡುಗ ಮತ್ತು ಕನ್ನಡಿಗ ಹಾಗಾಗಿ ಇದು ನಮ್ಮ ಕರ್ತವ್ಯ, ಕೊನೆಗೂ ಯಶವಂತನ ತಾಯಿಗೆ ಆತನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿದೆ ಎಂಬ ಖುಷಿ ಇದೆ. ಈ ಕೆಲಸದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಸಹೃದಯಿ ಸಹೋದರರು ಸಹಕಾರ ನೀಡಿದ್ದಾರೆ, ವಿಶೇಷವಾಗಿ ರಶೀದ್ ಬಿಜೈ ಹಾಗೂ ಇತರ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಅಲ್ಲದೇ ಯಶವಂತ್ ಕುಟುಂಬಕ್ಕೆ ಆಥಿರ್üಕವಾಗಿ ಸಹಾಯ ಮಾಡಲು ಅನಿವಾಸಿ ಕನ್ನಡಿಗರು ಮುಂದೆಬಂದಿದ್ದು, ಅದನ್ನೂ ಶೀಘ್ರದಲ್ಲೇ ತಲುಪಿಸಲಾಗುವುದು ಎಂದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here