Friday 26th, April 2024
canara news

ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ ಎಲ್.ಶೆಟ್ಟಿ ನಿಧನ

Published On : 01 Jul 2020   |  Reported By : Rons Bantwal


ಮುಂಬಯಿ, ಜು.01: ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಶಿಕ್ಷಕ (ನಿವೃತ್ತ), ಹಿರಿಯ ಹೊಟೇಲು ಉದ್ಯಮಿ, ಹೊಟೇಲ್ ಕೀರ್ತಿ ಮಾಲೀಕ, ಕಡಂದಲೆ ಪರಾರಿ ಪ್ರಭಾಕರ ಎಲ್.ಶೆಟ್ಟಿ (83.) ಇಂದಿಲ್ಲಿ ಬುಧವಾರ ಬೆಳಿಗ್ಗೆ ವೃದ್ಧಾಪ್ಯ ಸಹಜತೆಯಲ್ಲಿ ನಿಧನರಾದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕು ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮೂಲತಃ ಇವರು ಮುಂಬಯಿನಲ್ಲಿನ ಕರ್ನಾಟಕ ಧರ್ಮಾರ್ಥ ರಾತ್ರಿ ಹೈಸ್ಕೂಲು, ಅಗರ್ವಾಲ್ ವಿದ್ಯಾ ಸಂಸ್ಥೆ ವಡಲಾ, ಗುರುನಾನಕ್ ವಿದ್ಯಾಲಯ ಸಯಾನ್, ಕರ್ನಾಟಕ ಪೆÇ್ರಗ್ರೆಸಿವ್ ರಾತ್ರಿ ಫ್ರೀ ಹೈಸ್ಕೂಲು ಪರೇಲ್ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಲವು ದಶಕಗಳಿಂದ ಶಿಕ್ಷಕರಾಗಿ ದುಡಿದಿದ್ದರು. ಡಿವೈನ್ ಸ್ಪಾರ್ಕ್ ಧಾರ್ಮಿಕ ಸಂಸ್ಥೆಯಲ್ಲೂ ಸೇವಾ ನಿರತರಾಗಿದ್ದರು. ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಭಿವಂಡಿ ಹೊಟೇಲ್ ಎಂಡ್ ರೆಸ್ಟೋರೆಂಟ್ ಓನರ್ಸ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷರಾಗಿ, ಮುಂಬಯಿನ ಅನೇಕ ಸಂಘ ಸಂಸ್ಥೆಗಳಲ್ಲೂ ಸಕ್ರೀಯರಾಗಿದ್ದು ಜನಾನುರೆಣಿಸಿದ್ದರು.

ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು, ಇಬ್ಬರು ಸಹೋದರರು (ಹೊಟೇಲ್ ಧೀರಜ್ ಸಮೂಹದ ನಿರ್ದೇಶಕ ಕಡಂದಲೆ ಪರಾರಿ ಶೇಖರ್ ಎಲ್.ಶೆಟ್ಟಿ ಭಿವಂಡಿ ಮತ್ತು ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಮಹಾರಾಷ್ಟ್ರ ಸರಕಾರದ ಎನ್‍ಐಎ ಸಂಸ್ಥೆಯ ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ), ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ, ವಿದ್ಯಾಥಿರ್ü ಸಮೂಹ ಅಗಲಿದ್ದಾರೆ.

ಮೃತರ ಸ್ವನಿವಾಸ ದಹಿಸರ್ ಪಶ್ಚಿಮದ ಕಾಂದರ್‍ಪಾಡಾ ಇಲ್ಲಿನ ಗಲಾಸಿಯಾ ನಿವಾಸದಲ್ಲಿ ಇಂದಿಲ್ಲಿ ಸಂಜೆ ಪಾಥಿರ್üೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here