Friday 26th, April 2024
canara news

ಬೃಹನ್ಮುಂಬಯಿನಲ್ಲಿ ಮತ್ತೆ ಕಾರ್ಯಾರಂಭಿಸಿದ ಸಲೂನುಗಳು

Published On : 04 Jul 2020   |  Reported By : Rons Bantwal


ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸೇವೆಗೈಯೋಣ : ಶಿವರಾಮ ಕೆ.ಭಂಡಾರಿ

ಮುಂಬಯಿ, ಜೂ.29: ಜಾಗತಿಕ ಮಹಾಮಾರಿ ಕೋವಿಡ್-19 ಭೀತಿಯಿಂದ ಸುಮಾರು ಮೂರುವರೆ ತಿಂಗಳುಗಳಿಂದ (ನೂರು ದಿನಗಳಿಂದ) ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿ ಮುಚ್ಚಲ್ಪಟ್ಟ ಕೇಶವೃತ್ತಿ ಸಲೂನುಗಳು ಪುನಾರಂಭಿಸಿವೆ. ಅಂತೆಯೇ ಓರ್ವ ಕನ್ನಡಿಗನಾಗಿದ್ದು ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ ಡಾ| ಶಿವರಾಮ ಕೃಷ್ಣ ಭಂಡಾರಿ ತನ್ನ ಆಡಳಿತ ನಿರ್ದೇಶಕತ್ವದಲ್ಲಿ ಕಾರ್ಯಚರಿಸುತ್ತಿರುವ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ನಾಮಾಂಕಿತ ಸಲೂನುಗಳನ್ನು ಸೇವೆಗೆ ಸನ್ನದ್ಧಗೊಳಿಸಿದ್ದಾರೆ.

ನೌಕರರು ಮತ್ತು ಗ್ರಾಹಕರ ಆರೋಗ್ಯ ಕಾಳಜಿಯನ್ನು ಪ್ರಧಾನವಾಗಿಸಿ ಉಭಯ ಸರಕಾರಗಳ ಆದೇಶನುಸಾರ, ಎಲ್ಲಾ ಕಾನೂನು ಕಾಯ್ದೆಗಳನ್ನು ಪಾಲಿಸಿ ನಮ್ಮ ಕೆಲವೊಂದು ಮಳಿಗೆಗಳನ್ನು ಕೊನೆಗೂ ಕಳೆದ ಭಾನುವಾರ ತೆರೆದಿದ್ದೇವೆ. ಮಹಾನಗರದಲ್ಲಿನ ಸಲೂನು ಮಾಲೀಕರ ಒಕ್ಕೂಟ ಇಲ್ಲಿನ ಸಲೂನುಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಕೊಡುವಂತೆ ಕಳೆದ ಎರಡು ತಿಂಗಳುಗಳಿಂದ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದು ಇದೀಗ ಬೇಡಿಕೆ ಈಡೇರಿದೆ. ಆದರೆ ಸರಕಾರವು ಕೆಲವೊಂದು ಆದೇಶಗಳನ್ನು ನೀಡಿದ್ದು ಅದರಂತೆ ಸಲೂನುಗಳನ್ನು ನಡೆಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇದಕ್ಕೆ ಎಲ್ಲಾ ಸಲೂನು ಮಾಲೀಕರು, ನೌಕರರೂ ಮತ್ತು ಗ್ರಾಹಕರು ಸ್ಪಂದಿಸಲೇ ಬೇಕು ಎಂದು ಅಂಧೇರಿ ಪಶ್ಚಿಮದ ಮಳಿಗೆಯಲ್ಲಿ ಸಂದರ್ಶನಗೈದ ಪತ್ರಕರ್ತರನ್ನುದ್ದೇಶಿಸಿ ಶಿವರಾಮ ಭಂಡಾರಿ ತಿಳಿಸಿದರು.

ನಮ್ಮಲ್ಲಿ ಸರಕಾರದ ಆದೇಶಗಳ ಪಟ್ಟಿಯನ್ನು ಮುಖ್ಯದ್ವಾರದಲ್ಲಿ ಲಗತ್ತಿಸಲಾಗಿ ಅದನ್ನು ಪ್ರತೀಯೋರ್ವ ಗ್ರಾಹಕರಲ್ಲೂ ಮನವರಿಸಿ ಆರೋಗ್ಯಸೇತು ಆ್ಯಪ್ ಮೂಲಕ ತಮ್ಮ ವಿವರಗಳನ್ನು ನೊಂದಾಯಿಸಿದ ಬಳಿಕವಷ್ಟೇ ಒಳ ಸೇರಿಸಲಾಗುವುದು. ನಂತರ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ತಪಾಸನೆ ನಡೆಸಲಾಗುವುದು. ನಂತರ ಹ್ಯಾಂಡ್ ಸ್ಯಾನಿಟೈಸರ್ ಗನ್ ಮೂಲಕ ಕರಗಳ ನಿರ್ಮಲೀಕಾರಕಗೈದು ಗ್ರಾಹಕರಿಗೆ ಒಳಗೆ ಬಿಡುವ ಪದ್ಧತಿ ಅನುಸರಿಸಲಾಗಿದೆ. ನೌಕರರು ಮತ್ತು ಗ್ರಾಹಕರಿಗೂ ಔಷಧಲಯಗಳಲ್ಲಿನ ಉತ್ತಮ ದರ್ಜೆಯ ಮಾಸ್ಕ್ ಒದಗಿಸಿ, ಬೆರಳುಗಳ ಮೂಲಕ ಹಾರ್ಟ್‍ರೇಟ್ ತಪಾಸನೆ ನಡೆಸಿದ ಬಳಿಕ ಗ್ರಾಹಕರಿಗೆ ಕರ, ಪಾದಗಳ ಗ್ಲೌಸ್ ಧರಿಸಲಾಗುವುದು. ಪ್ಲಾಸ್ಟಿಕ್ ಕೋಟ್ ಮತ್ತು ಶುದ್ಧ ಬಟ್ಟೆಯನ್ನು ಹೊದಿಸಿ ಕೇಶವೃತ್ತಿ ನಡೆಸಲಾಗುವುದು ಎಂದೂ ಶಿವರಾಮ ಭಂಡಾರಿ ತಮ್ಮ ಸೇವಾ ವೈಶಿಷ್ಟ ್ಯತೆ ಭಿತ್ತರಿಸಿದರು.

ಎಲ್ಲಾ ಸಲೂನು ಮಾಲೀಕರು ಮತ್ತು ನೌಕರರೂ ಗ್ರಾಹಕರ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಸರ್ವೋತ್ಕೃಷ್ಟ ಸೇವೆಗೈಯಬೇಕು. ಮುಂದೆ ಯಾವೊತ್ತೂ ನಮ್ಮ ಉದ್ಯಮ ಮತ್ತೆ ತಟಸ್ಥವಾಗದಂತೆ ಜಾಗೃತರಾಗುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಮುನ್ನಚ್ಚರಿಕಾ ಕ್ರಮ ವಹಿಸುವ ಅಗತ್ಯವಿದೆ. ಗ್ರಾಹಕರ ನೆಮ್ಮದಿಯೇ ನಮ್ಮ ಸಮೃದ್ಧಿಯಾಗಲಿ ಎಂದೂ ಶಿವರಾಮ ಭಂಡಾರಿ ಮನವರಿಸಿದರು.

ಸಲೂನು ಹೋಗಿ ಕ್ಷೌರ್ಯಕೆಲಸ ಮಾಡಿಸಿ ಕೊಳ್ಳುವಲ್ಲಿ ನನ್ನಲ್ಲೂ ಬಾರೀ ಭಯ ಕಾಡುತ್ತಿತ್ತು. ಆದರೆ ಕಳೆದ ಮೂರುವರೆ ತಿಂಗಳುಗಳಿಂದ ಕೇಶವಿನ್ಯಾಸ ಮಾಡದೆ ತಲೆ ಹರಾಟೆಯಾಗುಉತ್ತಿತ್ತು. ಶಿವಾ'ಸ್‍ನಂತಹ ಸಲೂನುಗಳಿಗೆ ಬರುವ ಗ್ರಾಹಕರು ಯಾವುದೇ ಭಯ ಪಡುವ ಅಗತ್ಯವಿಲ್ಲ. ದೈನಂದಿನವಾಗಿ ಸ್ಯಾನಿಟೈಸರ್ ಮೂಲಕ ಸಲೂನುವಿಡೀ ಶುದ್ಧಿ ಮಾಡುತ್ತಾ, ಸಾಮಾಜಿಕ ಅಂತರಕ್ಕಾಗಿ ಗ್ರಾಹಕರ ಬಳಕೆಯ ಚೇರ್‍ಗಳ ಮಧ್ಯೆ ಸಾಕಷ್ಟು ಎಡೆ ಕಾಪಾಡಿ ಸಾಮಾಜಿಕ ಅಂತರ ಕಾಪಾಡಿ ಕೊಂಡಿದ್ದಾರೆ. ಸಲೂನಲ್ಲಿ ಎಲ್ಲವೂ ಸುರಕ್ಷಿತ ವ್ಯವಸ್ಥೆಯಿದೆ. ಸುರಕ್ಷಿತ ಮತ್ತು ಆರೋಗ್ಯಕರ ಸೇವೆಗೆ ಇಲ್ಲಿ ಪ್ರಾಧನ್ಯತೆಯಿದ್ದು ಗ್ರಾಹಕರಲ್ಲಿ ಯಾವುದೇ ಉದ್ವೇಗ ಬೇಡ ಎಂದು ಬಾಲಿವುಡ್ ನಟಿಯೋರ್ವರು ಪ್ರತಿಕ್ರಿಯಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here