Friday 26th, April 2024
canara news

ಸುಂದರ್‍ಲಾಲ್ ಬಹುಗುಣ ನಿಧನದಿಂದ ರಾಷ್ಟ್ರದ ಪರಿಸರಪ್ರೇಮಿ ಜಗತ್ತು ಬಡವಾಗಿದೆ

Published On : 22 May 2021   |  Reported By : Rons Bantwal


ಜೈನಕಾಶಿ ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಸಂತಾಪ

ಮುಂಬಯಿ (ಆರ್‍ಬಿಐ), ಮೇ.22: ರಾಷ್ಟ್ರದ ಸರ್ವೋತ್ಕೃಷ್ಟ ಪರಿಸರಪ್ರೇಮಿ ಸುಂದರ್‍ಲಾಲ್ ಬಹುಗುಣ ಇತ್ತೀಚೆಗೆ ನಿಧನರಾಗಿದ್ದು, 1970-80ರ ದಶಕದಲ್ಲಿ ಪರಿಸರ ಕಾಳಜಿಯ ಕ್ರಾಂತಿ ಮಾಡಿದ್ದು ಅವರ ಅಗಲಿಕೆಯಿಂದ ದೇಶವು ಉನ್ನತ ಪರಿಸರ ನಾಯಕನನ್ನು ಕಳೆದು ಕೊಂಡಿದೆ ಎಂದು ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸುಂದರಲಾಲ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸುಂದರಲಾಲ್ ಬಹುಗುಣ ಅವರು ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿನ ಮಠಕ್ಕೆ ಭೇಟಿ ನೀಡಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀ ಗಳೊಂದಿಗೆ ಪರಿಸರ ಸಂಬಂಧಪಟ್ಟ ಪಶ್ಚಿಮ ಘಟ್ಟ ಉಳಿಸಿ ವಿಚಾರವಾಗಿ ಚರ್ಚಿಸಿದ್ದರು ತಮ್ಮ ಗತ ಕಾಲದ ಚಳುವಳಿಯನ್ನು ಶ್ರೀ ಗಳೊಂದಿಗೆ ಮೆಲುಕು ಹಾಕಿದ ಬಹುಗುಣ ಮಹಾನ್ ಪರಿಸರ ವಾದಿಯಾಗಿದ್ದರು. ತಮ್ಮೊಂದಿಗೆ ಉತ್ತಮ ಬಾಂದವ್ಯ ಇರಿಸಿದ್ದರು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಸುಂದರಲಾಲ್ ದಂಪತಿಯನ್ನು 31.01.2011ರಲ್ಲಿ ಮೂಡುಬಿದಿರೆ ಶ್ರೀ ಮಠದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಸನ್ಮಾನ ಮಾಡಿ ಗೌರವಿಸಿ ಹರಸಿ ಆಶೀರ್ವದಿಸಿದ್ದರು. ಪರಿಸರ ವಾದಿ ಮತ್ತು ಚಿಪೆÇ್ಕ ಚಳುವಳಿಯ ನಾಯಕ. ಅಪ್ಪಿಕೋ ಚಳುವಳಿ ಎಂದು ಪ್ರಸಿದ್ದವಾದ ಇದು ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು. ದಟ್ಟಾರಣ್ಯದ ಹಿಮಾಲಯದ ತಪ್ಪಲಿನ ಉತ್ತರಖಂಡದ ತೇಹ್ರಿ ಸಮಿಪದ ಮರೋಡ ಹಳ್ಳಿಯಲ್ಲಿ ಜನಿಸಿದ ಸುಂದರ್‍ಲಾಲ್ ದೇಶದ ಆರಂಭಿಕ ಹಂತದ ಪರಿಸರವಾದಿಗಳಲ್ಲಿ ಒಬ್ಬರು.

13ರ ವಯಸ್ಸಿನಲ್ಲೆ ಶ್ರೀದೇವಿ ಸುಮನ್ ರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದ ಬಹುಗುಣ ತನ್ನ ಜೀವನದಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿ ಕೊಂಡಿದ್ದರು. ಗಾಂಧೀ ಜೀವನದಿಂದ ಪ್ರೇರಿತರಾಗಿ ಸ್ವಾತಂತ್ರ ್ಯ ಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು.

ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದರ್ ಲಾಲ್ ಬಹುಗುಣ ಬೆಟ್ಟಗಳು-ಹಳ್ಳಿಗಳ.ನಡುವೆ ಸುಮಾರು 4,700 ಕಿ.ಮೀಟರ್ ಗಳಷ್ಟು ದೂರ ಪಾದಯಾತ್ರೆ ಮಾಡಿ ಜನರನ್ನು ಎಚ್ಚರಿಸಿ ಹೋರಾಟ ನಡೆಸಿದರು. ಚಿಪೆÇ್ಕೀ ಚಳವಳಿಯ ನೇತೃತ್ವ ವಹಿಸಿ ಹೆಚ್ಚು ಜನಪ್ರಿಯರಾದರು. ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಒಳಿತಿಗಾಗಿ ಪ್ರಮುಖ ಕಾರ್ಯ ಮಾಡಿದವರು ಹಾಗೂ ದೇಶದ ಪ್ರಕೃತಿ ಪ್ರಿಯರ ಪಾಲಿಗೆ ಮಹಾ ನಾಯಕರಾಗಿದ್ದ ಶ್ರೀಯುತರಿಗೆ ಪದ್ಮಶ್ರೀ ಪ್ರಶಸ್ತಿ ಇತ್ತು ಸರಕಾರ ಗೌರವಿಸಿತ್ತು ತಮ್ಮ ನಿಲುವಿಗೆ ಬದ್ದರಾಗಿದ್ದ ಸುಂದರ ಲಾಲ್ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು

ಸುಂದರ್‍ಲಾಲ್ ಅವರ ಅಗಲುವಿಕೆಯಿಂದ ಓರ್ವ ಹಿರಿಯ ನೈಜ ಪರಿಸರ ಪ್ರೇಮಿಯನ್ನು ಕಳಕೊಂಡು ಪರಿಸರ ಪ್ರಿಯರ ಜಗತ್ತು ಬಡವಾಗಿದೆ. ಸರಳ ಸಜ್ಜನಿಕೆಯ ನಾಯಕನಾಗಿ ನಮ್ಮನ್ನಗಲಿದ ಸುಂದರ್‍ಲಾಲ್ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬ ಇಷ್ಟ ಮಿತ್ರ ಬಂಧುು ಬಾಂಧವರಿಗೆ ಸಿಗಲಿ ಎಂದು ಮನಸಾ ಪ್ರಾಥಿರ್üಸುತ್ತೆವೆ ಎಂದು ಚಾರುಕೀರ್ತಿ ಭಟ್ಟಾರಕ ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here