Saturday 27th, April 2024
canara news

ಸ್ವಾತಂತ್ರ ್ಯಕ್ಕಾಗಿನ ಪೂರ್ವಜರ ತ್ಯಾಗ ಬಲಿದಾನ ತಿಳಿದು ಬಾಳುವ ಅಗತ್ಯವಿದೆ

Published On : 18 Aug 2021   |  Reported By : Rons Bantwal


ಬಿಎಸ್‍ಕೆಬಿಎ ಆಚರಿಸಿದ ಸ್ವಾತಂತ್ರೊ ್ಯೀತ್ಸವದಲ್ಲಿ ಡಾ| ಸುರೇಶ್ ರಾವ್ ಕಟೀಲು

ಮುಂಬಯಿ (ಆರ್‍ಬಿಐ), ಆ.17: ಪೂರ್ವಜರ ದೂರದೃಷ್ಠಿಯ ಮನೋಭಾವ, ಚಳಿವಳಿಗಳೇ ಈ ರಾಷ್ಟ್ರಕ್ಕೆ ಸ್ವಾತಂತ್ರ ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಆದ್ದರಿಂದಲೇ ನಾವು ಇಂದು ಸ್ವತಂತ್ರರಾಗಿ ಬಾಳುವಲ್ಲಿ ಅವರ ತ್ಯಾಗ ಬಲಿದಾನ ಮಹತ್ತರವಾಗಿದ್ದು ಇದನ್ನೆಲ್ಲಾ ತಿಳಿದು ಬಾಳುವ ಅಗತ್ಯವಿದೆ ಎಂದು ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ನಾಡಿನ ಜನತೆಗೆ ಅಮೃತ ಸ್ವಾತಂತ್ರೊ ್ಯೀತ್ಸವದ ಸÀಂದೇಶವನ್ನಿತ್ತು ಶುಭಾರೈಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಸಂಸ್ಥೆಯು ಭಾರತದ 75ನೆಯ ಸ್ವಾತಂತ್ರ ್ಯ ದಿನಾಚರಣೆಯನ್ನು ಕಳೆದ ರವಿವಾರ ನೇರೂಲ್ ಅಲ್ಲಿನ ಗೋಕುಲದ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ'ದಲ್ಲಿ ಸರಳವಾಗಿ ಆಚರಿಸಿದ್ದು ಡಾ| ಸುರೇಶ್ ರಾವ್ ಪದಾಧಿಕಾರಿಗಳನ್ನು ಒಳಗೊಂಡು ಧ್ವಜಾರೋಹಣ ನೆರವೇರಿಸಿ ಸರ್ವರಿಗೂ ಅಮೃತ ಸ್ವಾತಂತ್ರ ್ಯ ದಿನದ ಶುಭಾಶಯ ಕೋರಿದರು.

ಗೋಕುಲ ಕಟ್ಟಡ ಪುನ:ರ್ ನಿರ್ಮಾಣದ ಸದ್ಯದ ಪ್ರಗತಿ ಬಗ್ಗೆ ತಿಳಿಸಿದ ಡಾ| ರಾವ್ ಗೋಕುಲದ ಆರಾಧ್ಯಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮುಂಬರುವ ಜನವರಿಯಲ್ಲಿ ನೆರವೇರಿಸಲು ಸಿದ್ಧತೆ ನಡೆಸಿದ್ದು ಈ ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸದಸ್ಯರೆಲ್ಲರ ಪೂರ್ಣ ಸಹಕಾರ ಅಗತ್ಯವಿದೆ ಎಂದರು.

ಪ್ರಾತಃಕಾಲ ಬಿಎಸ್‍ಕೆಬಿಎ ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ನೆರೆದವರಿಗೆ ಸುಖಾಗಮನ ಬಯಸಿದ್ದು ಉಪಾಧ್ಯಕ್ಷ ವಾಮನ್ ಹೊಳ್ಳ ರವರು, ಉಪಾಧ್ಯಕ್ಷೆ ಶೈಲಿನಿ ರಾವ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಮುಂತಾದವರು ಉಪಸ್ಥಿತರಿದ್ದು ಧ್ವಜವಂದನೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶ್ರಯ ಸಭಾಗೃಹದಲ್ಲಿ ಹಂಸಾ ಭಾರದ್ವಾಜ್ ಮತ್ತು ಕಾರ್ತಿಕ್ ರಾವ್ ನಿರೂಪಣೆಯಲ್ಲಿ, ಆಶ್ರಯದ ಹಿರಿಯ ನಾಗರಿಕರು ಹಾಗೂ ಸಂಘದ ಸದಸ್ಯರು ದೇಶ ಭಕ್ತಿ ಗೀತೆಗಳನ್ನು, ನೃತ್ಯ ಮತ್ತು ಶೈಲಿನಿ ರಾವ್ ನಿರೂಪಣೆಯಲ್ಲಿ ಮಹಿಳೆಯರು ಫ್ಯಾಷನ್ ಶೋ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಆನ್‍ಲೈನ್ (ಯು ಟ್ಯೂಬ್ ಮಾಧ್ಯಮದ) ಮೂಲಕ ಭಿತ್ತರಿಸಲಾದ ಈ ರಾಷ್ಟ್ರಪ್ರೇಮದ ಕಾರ್ಯಕ್ರಮವನ್ನು ದೇಶ-ವಿದೇಶಗಳಲ್ಲಿ ನೆಲೆಸಿದ ಸಂಘದ ಸದಸ್ಯರು ಕೂಡಾ ಜಾಲತಾಣದ ಮೂಲಕ ವೀಕ್ಷಿಸಿದ್ದು ಅವರೂ ದೇಶ ಭಕ್ತಿಗೀತೆಗಳ ಗಾಯನ, ನೃತ್ಯ ಇತ್ಯಾದಿಗಳನ್ನು ಪ್ರಸ್ತುತಪಡಿಸಿದರು.

ಗೋಕುಲ ಕಲಾವೃಂದ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದವರ ಆಯೋಜನೆಯಲ್ಲಿ ಜರಗಿದ ಕಾರ್ಯಕ್ರಮದ ಕೊನೆಯಲ್ಲಿ ಪ್ರಶಾಂತ್ ಹೆರ್ಲೆ ಧನ್ಯವಾದ ಸಮರ್ಪಿಸಿದರು. ಸೀಮಿತ ಸದಸ್ಯರ ಉಪಸ್ಥಿತಿಯಲ್ಲಿ ಕೋವಿಡ್ ನಿಯಮಾವಳಿಗಳೊಂದಿಗೆ ದಿನಪೂರ್ತಿಯಾಗಿಸಿ ನೆರೆವೇರಿಸಿದ್ದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊಳಿಸಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here