Friday 26th, April 2024
canara news

`ಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಜೀವನ ಸಾಧನೆ' ಕೃತಿ ಬಿಡುಗಡೆ

Published On : 09 Oct 2022   |  Reported By : Rons Bantwal


ಮುಂಬಯಿಯಲ್ಲಿ ಸೂರಿ ಪರ್ವ ಕನ್ನಡದ ಹಿರಿಮೆಯಾಗಿದೆ : ಡಾ| ಜಿ.ಎಲ್ ಹೆಗಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.08: ಎಲ್ಲರನ್ನೂ ಪ್ರೀತಿಸುವ ಗುಣ ಉಪಾಧ್ಯರಲ್ಲಿದ್ದು ಆದ್ದರಿಂದಲೇ ಕನ್ನಡ ಭಾಷೆಯ ಪ್ರೀತಿಯ ಸೆಳೆ ಈ ವಿಭಾಗ ಮಾಡುತ್ತಿದೆ. ಇವರೆಲ್ಲರ ಪರಿಶ್ರಮದ ಹೊತ್ತಿಗೆಯೇ `ಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಜೀವನ ಸಾಧನೆ' ಕೃತಿಯಾಗಿದೆ. ಆದ್ದರಿಂದಲೇ ಸೂರಿ ಪರ್ವ ಮುಂಬಯಿಯಲ್ಲಿ ಇಂದಿಗೂ ಜೀವಾಳವಾಗಿದ್ದು ಇದೇ ಸೂರಿ ಪರ್ವ (ಹಬ್ಬ)ವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಕೃತಿ ಲೋಕಾರ್ಪಣೆ ಆಗಿರುವುದು ಕನ್ನಡದ ಹಿರಿಮೆಯೇ ಸರಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್ ಹೆಗಡೆ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದೊಂದಿಗೆ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಮುಖವಾಣಿ ಸಂದೇಶ ಮಾಸಿಕದ ಸಂಪಾದಕಿ ಶಶಿಕಲಾ ಹೆಗಡೆ ರಚಿತ `ಸೂರಿ ಪರ್ವ-ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಜೀವನ ಸಾಧನೆ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಜಿ.ಎಲ್ ಹೆಗಡೆ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹವ್ಯಾಕರ ಪಾತ್ರ ಮಹತ್ತರವಾಗಿದೆ. ಅಂತೆಯೇ ನಾಡಿನ ಸಂಸ್ಕೃತಿಯ ಕೆಡಕುಗಳನ್ನು ಬಿಂಬಿಸಲು ಒಳ್ಳೆಯದನ್ನು ನಿರೀಕ್ಷಿಸಿದ ವೆಂಕಟರಮಣ ಶಾಸ್ತ್ರಿ ಸೂರಿ ಮಹತ್ತರವಾದ ಪಾತ್ರ ವಹಿಸಿದ್ದರು. ಇವೆಲ್ಲಾ ಸಾಧನೆಗಳ ಹೆಜ್ಜೆಗುರುತು ಈ ಕೃತಿಯಾಗಿದೆ. ಅಂದು ನಾವು ಕಲಿತದ್ದು ಸರಿಯಿಲ್ಲ ಎಂದು ತಿಳಿದಿದ್ದದ್ದೇ ಕಲಿತು ಮುಗಿದಮೇಲೆ ಅನ್ನೋದು ಈಗ ತಿಳಿಯುತ್ತದೆ. ಇಂದು ಭಾಷಾ ಭೇದಭಾವ ಮನೋರೋಗವಾಗಿದೆ ಅನ್ನೋದೇ ದುರಂತ. ಇನ್ನು ಹಾಗಾಗಬಾರದು. ಮನುಷ್ಯನ ಸಾಧನೆ ಮರ್ಯಾದೆಯಿಂದಲೇ ಗೌರವ್ವಾನಿತನಾ ಗಬೇಕು. ಸಾಧನೆಗೆ ಸರ್ಕಾರದ ಮುದ್ರೆ ಬಿದ್ದಾಗ ಮಾತ್ರ ಜನ ಅದನ್ನು ಒಪ್ಪುತ್ತಾರೆ ಎಂದೂ ಜಿ.ಎಲ್ ಹೆಗಡೆ ಮನವರಿಸಿದರು.

ಹವ್ಯಕ ಟ್ರಸ್ಟ್‍ನ ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಪಿ.ಭಾಗವತ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದ ಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಕೃತಿ ಬಿಡುಗಡೆಗೈದರು. ಹವ್ಯಕ ಸಂದೇಶ ಮಾಸಿಕದ ಗೌರವ ಸಂಪಾದಕಿ ನ್ಯಾ| ಅಮಿತಾ ಎಸ್.ಭಾಗವತ್ ಕೃತಿ ಪರಿಚಯಿಸಿದರು. ಕೃತಿಕರ್ತೆ ಶಶಿಕಲಾ ಹೆಗಡೆ ಮಾತನಾಡಿ ಈ ಕೃತಿಯನ್ನು ಪ್ರಕಾಶಿಸಲು ಸಹಯೋಗವನ್ನಿತ್ತ ಎಲ್ಲರಿಗೂ ಅಭಿವಂದಿಸಿದರು.

ಡಾ| ಉಪಾಧ್ಯ ಮಾತನಾಡಿ ಸುಮಾರು 140 ವರ್ಷಗಳ ಹಿಂದೆ ಮುಂಬಯಿಯಲ್ಲಿ ಕನ್ನಡ ಸಂದಿಗ್ಧ ಕಾಲ ಘಟ್ಟದಲ್ಲಿದ್ದಂತಹ ಸಂದರ್ಭದಲ್ಲಿ ಸ್ಥಿತ್ಯಾಂತರದ ಕಾಲಘಟ್ಟದಲ್ಲಿ ಕನ್ನಡವನ್ನು ಬಿತ್ತಿ ಬೆಳಸಿಸುವಂತೆ ಮಾಡಿದಂತಹ ಮಹಾನ್ ಶಕ್ತಿಯೇ ವೆಂಕಟರಮಣ ಶಾಸ್ತ್ರಿ. ಇವತ್ತು ಮುಂಬಯಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ, ಕಿವಿಗಳಲ್ಲಿ ಕೇಳಿಸುತ್ತಿದ್ದಾರೆ ಅದಕ್ಕೆ ಕಾರಣವೇ ಪುಣ್ಯಪುರುಷರಲ್ಲಿನ ಕರ್ಕಿಯವರೂ ಒಬ್ಬರಾಗಿದ್ದಾರೆ ಎಂದು ಅಭಿಮಾನದಿಂದ ಹೇಳಬೇಕು. ಸೂರಿ ಅವರು 19ನೇ ಶತಮಾನದಲ್ಲಿ ಮಾಡಿದಂತ ಸಾಂಸ್ಕೃತಿಕ ಪರಿಚಾರಿಕೆ ಅತ್ಯಂತ ಮಹತ್ವದ್ದು ಎಂದರು.
ಉಪಾಧ್ಯಕ್ಷ ಸಂಜಯ ಭಟ್, ಗೌರವ ಕಾರ್ಯದರ್ಶಿ ನಾರಾಯಣ ಅಕದಾಸ, ಕೆ.ಸಿ ಹೆಗಡೆ, ಗಣಪತಿ ವಿ.ಹೆಗಡೆ, ಮಾಯಾ ಜಿ.ಎಲ್ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಹೆಗಡೆ ಹೆಗಡೆ ಮತ್ತು ಶಶಿಕಲಾ ಹೆಗಡೆ ದಂಪತಿ ಜಿ.ಎಲ್ ಹೆಗಡೆ ಅವರನ್ನು ಸನ್ಮಾನಿಸಿದರು.

ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ತನುಜಾ ಹೆಗಡೆ ಧನ್ಯವದಿಸಿದರು.

ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಸೂರಿ ನಮನವಾಗಿಸಿ ಕಲಾ ಭಾಗವತ್ ಅವರು ತುರಂಗ ಭಾರತದ ಆಯ್ದ ಪದ್ಯಗಳನ್ನು ಗಮಕ ವಾಚನದಲ್ಲಿ, ಶೈಲಜಾ ಹೆಗಡೆ ಅವರು ಶಂಕರ ಸಂಹಿತೆಯ ಆಯ್ದ ಭಾಗಗಳನ್ನು ಕಾವ್ಯ ವಾಚನದಲ್ಲಿ ಮತ್ತು ಶಶಿಕಲಾ ಹೆಗಡೆ ಅವರು ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ನಾಟಕದ ಆಯ್ದ ಭಾಗವನ್ನು ಓದಾಣ ಮೂಲಕ ಪ್ರಸ್ತುತ ಪಡಿಸಿದರು.

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here