Friday 26th, April 2024
canara news

ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ

Published On : 03 Dec 2022   |  Reported By : Rons Bantwal


ಡಾ| ಸುರೇಶ್ ಎಸ್.ರಾವ್‍ಗೆ `ಕಟೀಲು ವಿದ್ಯಾಲಯದ ಸಾಧಕ ಹಿರಿಯ ವಿದ್ಯಾಥಿರ್ü ಪ್ರಶಸ್ತಿ'

ಮುಂಬಯಿ (ಆರ್‍ಬಿಐ), ಡಿ.02: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಇದೇ ಡಿ.02-04ರ ತನಕ ಕಟೀಲು ಪದವೀಪೂರ್ವ ಕಾಲೇಜ್‍ನ ಶ್ರೀವಿದ್ಯಾ ಸಭಾಭವನದಲ್ಲಿ ಆಯೋಜಿಸಲಾದ ಭ್ರಮರ-ಇಂಚರ ನಾಮದ ನುಡಿಹಬ್ಬ ಡಾ| ಪಾದೆಕಲ್ಲು ವಿಷ್ಣು ಭಟ್ಟ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗುತ್ತಿದ್ದು ಭಾನುವಾರ (ಡಿ.4) ಸಮ್ಮೇಳನ ತೆರೆ ಕಾಣಲಿದೆ.

ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೀವನಿ ಟ್ರಸ್ಟ್ ಮುಂ¨ಯಿ ಇದರ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರಿಗೆ `ಕಟೀಲು ವಿದ್ಯಾಲಯದ ಹೆಮ್ಮೆಯ ಸಾಧಕ ಹಿರಿಯ ವಿದ್ಯಾಥಿರ್ü ಪ್ರಶಸ್ತಿ' ಪ್ರದಾನಿಸಲಾಗುವುದು. ಅಂತೆಯೇ ಸಾಧಕ ಹಿರಿಯ ವಿದ್ಯಾಥಿರ್üಗಳಾದ ಮೈಸೂರು ಲ್ಯಾಬ್‍ಲ್ಯಾಂಡ್ ಬಯೋಟೆಕ್ಸ್‍ನ ಡಾ| ಸುಧೀರ್ ಶೆಟ್ಟಿ, ಬೆಂಗಳೂರುನ ಉದ್ಯಮಿ ರಾಮ್‍ಪ್ರಕಾಶ ಹೊಳ್ಳ, ನಂದನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ಜೆ.ಸಿ.ಕುಮಾರ್ ಇವರಿಗೆ ಗೌರವಾರ್ಪಣೆ ನಡೆಯಲಿದೆ.

ಉದ್ಯಮಿಗಳಾದ ಪ್ರದೀಪ್ ಜಿ.ಪೈ (ಹ್ಯಾಂಗ್ಯೋ ಐಸ್ ಕ್ರೀಂ), ಬಜಪೆ ರಾಘವೇಂದ್ರ ಆಚಾರ್ಯ, ಗಿರಿಧರ ಶೆಟ್ಟಿ ಮಂಗಳೂರು, ಚಿತ್ತರಂಜನ್ ರೈ ಪಡು, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ನಮ್ಮ ಕುಡ್ಲ ಮುಖ್ಯಸ್ಥ ಲೀಲಾಕ್ಷ ಕರ್ಕೇರ ಇವರು ಗೌರವ ಅತಿಥಿüಗಳಾಗಿ ಆಗಮಿಸಲಿದ್ದು ಖ್ಯಾತ ಚಿಂತಕ ವೈ.ಎಸ್.ವಿ ದತ್ತ ಸಮಾರೋಪ ಭಾಷಣ ಮಾಡಲಿದ್ದು, ಶ್ರೀ ಕ್ಷೇತ್ರ ಕಟೀಲು ಇದರ ಆನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ.

ಕಟೀಲು ದೇವಸ್ಥಾನವು ನರ್ಸರಿಯಿಂದ ಸಂಸ್ಕøತ ಸ್ನಾತಕೋತ್ತರ ಪದವಿ ಶಿಕ್ಷಣದ ವರೆಗೆ ಆರು ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳು ಸುಮಾರು ಎರಡೂವರೆ ಸಾವಿರ ವಿದ್ಯಾಥಿರ್üಗಳಿಗೆ ವಿದ್ಯಾಭ್ಯಾಸ ಮಾಡಿತ್ತಿವೆ. ಕಟೀಲಿನಲ್ಲಿ ವಿದ್ಯಾಥಿರ್üಗಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅವಕಾಶ ಕಲ್ಪಿಸುತ್ತಿದ್ದು ಜೊತೆಗೆ ಕ್ರೀಡೆ, ಯಕ್ಷಗಾನ, ಸಾಹಿತ್ಯ, ಚಿತ್ರಕಲೆ ಹೀಗೆ ನಾನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಬೆಳೆಸುತ್ತಿದೆ. ಆ ನಿಟ್ಟಿನಲ್ಲಿ ಕಳೆದ ವರ್ಷದಿಂದ ಮುಖ್ಯವಾಗಿ ವಿದ್ಯಾಥಿರ್üಗಳನ್ನು ಮುಂದಿಟ್ಟುಕೊಂಡು ಭ್ರಮರ-ಇಂಚರ ನಾಮದಲ್ಲಿ ನುಡಿಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತೆಯೇ ಈ ವರುಷ 3 ದಿನಗಳ ಕಾಲ ಕನ್ನಡ ನುಡಿಹಬ್ಬ ಹಾಗೂ ತುಳು ಉಚ್ಚಯೊ ಸಂಪನ್ನಗೊಳಿಸಲಿದ್ದು ನಾಡಿನ ವಿದ್ವಾಂಸರು, ಸಾಧಕರು ಭಾಗವಹಿಸಲಿದ್ದಾರೆ.

ನುಡಿಹಬ್ಬದಲ್ಲಿ ಜಾನಪದ ವಸ್ತುಗಳು, ಚಿತ್ರಗಳು, ರಂಗೋಲಿ, ಗೂಡುದೀಪ, ಹೂವುಗಳು, ಪತ್ರಿಕೆಗಳು, ಪುಸ್ತಕಗಳು, ಕರಕುಶಲ ವಸ್ತುಗಳು, ಛಾಯಾಚಿತ್ರ ಇತ್ಯಾದಿಗಳ ಪ್ರದರ್ಶನವಿದ್ದು, ಸ್ವದೇಶೀ, ಪರಿಸರಪೂರಕ ವಸ್ತುಗಳ ಮಾರಾಟವಿದೆ. ವಿದ್ಯಾಥಿರ್üಗಳ ಪ್ರತಿಭಾಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳ ಸಂಭ್ರಮವಿದೆ ಎಂದು ಕಟೀಲು ಶಿಕ್ಷಣ ಸಂಸ್ಥೆಗಳ ಸಚಾಲಕರು ತಿಳಿಸಿದ್ದಾರೆ.

ಡಾ| ಸುರೇಶ್ ರಾವ್ ಕಟೀಲು ಇವರು ಮುಂಬಯಿಯಲ್ಲಿ ಸಂಜೀವನಿ ಆಸ್ಪತ್ರೆ ಕಟ್ಟಿದ ವೈದ್ಯರು ತನ್ನ ಹುಟ್ಟೂರು ಕಟೀಲಿನಲ್ಲಿ ರೂಪಾಯಿ 25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿ ಸಮರ್ಪಿಸಿದವರು. ಸಾರ್ವಜನಿಕರಿಗಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟವರು. ಸಂಜೀವನಿ ಟ್ರಸ್ಟ್ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಿರುವವರು. ಕಟೀಲು ವಿದ್ಯಾ ಸಂಸ್ಥೆಗಳಿಗೂ ಇವರ ಕೊಡುಗೆ ಅನನ್ಯವಾದುದು. ಸಂಸ್ಕøತ ಸ್ನಾತಕೋತ್ತರ ಕೇಂದ್ರಕ್ಕೆ ಕಟ್ಟಡ, ಹಾಸ್ಟೆಲ್ ಕಟ್ಟಿಕೊಟ್ಟವರು. ಕರ್ನಾಟಕ ರಾಜ್ಯೋತ್ಸವ-2021 ಪ್ರಶಸ್ತಿ ಅಲ್ಲದೆ ನಾನಾ ಪ್ರಶಸ್ತಿ ಪುರಸ್ಕøತರಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಶಿಕ್ಷಣ ಸಂಸ್ಥೆಗಳ ಕೊಡುಗೈದಾನಿ, ಕಟೀಲು ವಿದ್ಯಾಸಂಸ್ಥೆಗಳ ಹೆಮ್ಮೆಯ ವಿದ್ಯಾಥಿರ್ü ಆಗಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here