Saturday 8th, May 2021
canara news

ಸ್ವರ್ಗೀಯ ಬಿಲ್ಲವ ಶಿರೋಮಣಿಗೆ ಗೋರೆಗಾವ್‍ನಲ್ಲಿ ಜೈಕಾರದ ಭಾವಪೂರ್ಣ ಶ್ರದ್ಧಾಂಜಲಿ

Published On : 01 Nov 2020   |  Reported By : Rons Bantwal


ಜಯ ಸಿ.ಸುವರ್ಣರ ಪ್ರತಿಮೆ ಸ್ಥಾಪಿಸಲು ಕೇಂದ್ರ ಸಮಿತಿಗೆ ಮನವಿ

ಮುಂಬಯಿ (ಆರ್‍ಬಿಐ),ಅ.31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ರಾಷ್ಟೀಯ ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ, ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ.ಸುವರ್ಣ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೋರೆಗಾಂವ್ ಸ್ಥಳೀಯ ಸಮಿತಿ ವತಿಯಿಂದ ಗೋರೆಗಾಂವ್ ಪಶ್ಚಿಮದ ಲಲಿತ್ ಹೊಟೇಲ್‍ನ ಕ್ರಿಸ್ಟಲ್ ಸಭಾಗೃಹದಲ್ಲಿ ಕಳೆದ ಶುಕ್ರವಾರ ಸಂಜೆ ಸಂತಾಪ ಸೂಚಕ ಸಭೆ ಮತ್ತು ನುಡಿ ನಮನ ಕಾರ್ಯಕ್ರಮ ನೆರವೇರಿಸಿತು.

ಬಿಲ್ಲವರ ಅಸೋಸಿಯೇಶನ್ ಮುಂ¨ಯಿ ಇದರ ಉಪಾಧ್ಯಕ್ಷ ಶಂಕರ್ ಡಿ.ಪೂಜಾರಿ, ಸುಪ್ರೀಂ ಕೋರ್ಟ್‍ನ ವಕೀಲ, ನೋಟರಿ ಅಡ್ವೋಕೇಟ್ ಶಶಿಧರ್ ಯು.ಕಾಪು, ಡಿವೈನ್ ಪಾರ್ಕ್ ಮುಂ¨ಯಿ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಶ್ರೀ ನಿತ್ಯಾನಂದ ಆಶ್ರಮ ಸಹಕಾರವಾಡಿ ಇದರ ಅಧ್ಯಕ್ಷ ರಘು ಮೂಲ್ಯ, ಬಿಜೆಪಿ ಕರ್ನಾಟಕ ಸೆಲ್ ಮುಂಬಯಿ ಅಧ್ಯಕ್ಷ ಸುರೇಶ್ ಅಂಚನ್, ಕರ್ನಾಟಕ ಸಂಘ ಗೋರೆಗಾವ್ ಇದರ ಜೆ.ಕೆ ಹೆಗ್ಡೆ, ಗೋಕುಲ್‍ಧಾಮ್‍ನ ಪ್ರಭಾಕರ್ ಸಸಿಹಿತ್ಲು, ಶ್ರೀ ನಾರಾಯಣಗುರು ಸೇವಾ ಸಂಘ ಮುಂ¨ಯಿ ಸಮಿತಿ ಗೌ| ಪ್ರ| ಕಾರ್ಯದರ್ಶಿ ವಾಸುದೇವ್ ಟಿ.ಸಾಲಿಯಾನ್, ಗೋರೆಗಾಂವ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೆ.ಕೋಟ್ಯಾನ್, ಇತರ ಪದಧಿಕಾರಿಗಳಾದ ಕೆ.ಟಿ ಸುವರ್ಣ, ಮೋಹನ್‍ದಾಸ್ ಪೂಜಾರಿ, ವಿಶ್ವನಾಥ್ ತೋನ್ಸೆ, ಮೋಹನ್ದಾಸ್ ಹೆಜ್ಮಾಡಿ, ಹಿರಿಯ ಧುರಿಣರುಗಳಾದ ಯು.ಕೆ ಸುವರ್ಣ, ಶಂಭು ಸುವರ್ಣ, ಗಿರಿಜಾ ಪೂಜಾರಿ, ಶಶಿಕಲಾ ಎಸ್ ಕೋಟ್ಯಾನ್ ಮಾತನಾಡಿ ಅಗಲಿದ ದಿವ್ಯಚೇತನ ಜಯ ಸುವರ್ಣರಿಗೆ ನುಡಿ ನಮನ ಸಲ್ಲಿಸಿದರು.

ತನ್ನ ಜೀವನದ ಸುಮಾರು ಐದು ದಶಕಗಳನ್ನು ಬಿಲ್ಲವ ಸಮುದಾಯದ ಮಾತ್ರವಲ್ಲದೆ ಅಖಂಡ ಸಮಾಜದ ಉನ್ನತಿ, ಸರ್ವಾಂಗೀಣ ಏಳಿಗೆಗಾಗಿ ಮೀಸಲಾಗಿಸಿದ್ದ ಜಯ ಸಿ.ಸುವರ್ಣ ಅವರ ಶಾಸ್ವತ ಪ್ರತಿಮೆಗಳನ್ನು ಬಿಲ್ಲವರ ಅಸೋಸಿಯೇಶÀನ್ ಮುಂಬಯಿ ಇದರ ಸಾಂತಕ್ರೂಜ್ ಪೂರ್ವದಲ್ಲಿನ ಕೇಂದ್ರ ಕಚೇರಿ ಬಿಲ್ಲವ ಭವನದಲ್ಲಿ ಮತ್ತು ಲಲಿತ ರುಕ್ಕರಾಮ ಸಾಲ್ಯಾನ್ ಚಾರಿಟೇಬಲ್ ಟ್ರಸ್ಟ್ ಮೂಲ್ಕಿ ಇಲ್ಲಿನ ಶಿಕ್ಷಣ ಕೇಂದ್ರದÀಲ್ಲಿ ಸ್ಥಾಪಿಸ ಬೇಕಾಗಿ ಗೋರೆಗಾವ್ ಸ್ಥಳೀಯ ಕಚೇರಿ ಗೌರವ ಕಾರ್ಯಾಧ್ಯಕ್ಷ ಜೆ.ವಿ ಕೋಟ್ಯಾನ್ ಅವರು ಲಿಖಿತವಾಗಿ ಮನವಿ ಮಾಡಿದ್ದು ಅದನ್ನು ಶ್ರದ್ಧಾಂಜಲಿ ಸಭೆಯು ಐಕ್ಯಮತದಿಂದ ಅನುಮೋಸಿದ್ದು ಅಂತೆಯೇ ಮನವಿಯನ್ನು ಬಿಲ್ಲವರ ಅಸೋಸಿಯೇಶÀನ್‍ನ ಕೇಂದ್ರ ಕಚೇರಿಗೆ ನೀಡುವಂತೆ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ರಮೇಶ್ ಸುವರ್ಣ, ನವೀನ್ ಪೂಜಾರಿ, ಚಂದ್ರಶೇಖರ್ ಕುಕ್ಯಾನ್, ವಿಠ್ಠಲ್ ಅಮೀನ್, ಕೇಶವ್ ಪೂಜಾರಿ, ಸದಾನಂದ್ ಕೋಟ್ಯಾನ್, ಪುಷ್ಪ ಅಮೀನ್, ಪದ್ಮಾವತಿ ಪೂಜಾರಿ, ವಿಠ್ಠಲ್ ಪೂಜಾರಿ ಹಾಗೂ ಜಯ ಸಿ ಸುವರ್ಣರ ನೂರಾರು ಹಿತೈಷಿಗಳು, ಅಭಿಮಾನಿಗಳು ಮತ್ತು ವಿವಿಧ ಸಮಾಜದ ಬಂಧುಗಳು ಹಾಜರಿದ್ದು ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಅರ್ಪಿಸಿದರು. ಗೋರೆಗಾವ್ ಸ್ಥಳೀಯ ಕಚೇರಿ ಕಾರ್ಯದರ್ಶಿ ಶಶಿಧರ್ ಆರ್.ಬಂಗೇರ ಸಭಾ ಕಲಾಪ ನೆರವೇರಿಸಿದರು.
More News

ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಎನ್‍ಕೌಂಟರ್ ಪ್ರಸಿದ್ಧ ಪೆÇೀಲಿಸ್ ದಯಾ ನಾಯಕ್ ಮುಂ¨ಯಿನಿಂದ ವರ್ಗಾವಣೆ
ಎನ್‍ಕೌಂಟರ್ ಪ್ರಸಿದ್ಧ ಪೆÇೀಲಿಸ್ ದಯಾ ನಾಯಕ್ ಮುಂ¨ಯಿನಿಂದ ವರ್ಗಾವಣೆ
ತುಷಾರ್ ಜಯರಾಮ ಶೆಟ್ಟಿ ನಿಧನ
ತುಷಾರ್ ಜಯರಾಮ ಶೆಟ್ಟಿ ನಿಧನ

Comment Here