Thursday 9th, July 2020
canara news

ಕೊಂಕಣಿ ಸಾಂಸ್ಕ್ರತಿಕ ಕಾರ್ಯಕ್ರದಲ್ಲಿ ಸಂದೀಪನ್ ಪ್ರೌಢ ಶಾಲೆ ಶ್ರೇಷ್ಟ ಸಾಧನ ಪುರಸ್ಕಾರ

Published On : 05 Sep 2016   |  Reported By : Bernard J Costa


ಕುಂದಾಪುರ: ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ "ಜೈಕೊಂಕಣಿ" ಆಶ್ರಯದಲ್ಲಿ ನಡೆದ ಕೊಂಕಣಿ ವಿದ್ಯಾರ್ಥಿ ಸಮ್ಮೇಳನದ ಸಾಂಕ್ರತಿಕ ಪ್ರತಿಭಾ ಸ್ಪರ್ಧೆಯಲ್ಲಿ ಸಂದೀಪನ್ ಪ್ರೌಢ ಶಾಲೆ ಶ್ರೇಷ್ಟ ಸಾಧನ ಪುರಸ್ಕಾರ ಪಡೆಯಿತು.

ಈ ವಿಧ್ಯಾರ್ತಿ ಸಮ್ಮೇಳನದಲ್ಲಿ ಹಲವಾರು ಗೋಷ್ಟಿಗಳು ನೆಡೆದವು "ಜಲಸಂರಕ್ಷಣೆ" ಈಗಿನ ಪರಿಸ್ಥಿತಿಯಲ್ಲಿ ಮಹತ್ವದ್ದಾಗಿದ್ದು ಈ ವಿಚಾರದಲ್ಲಿ ಗಂಭೀರ ಜಾಗೃತಿ ಮೂಡಿಸುವುದು ಅಗತ್ಯ ನೀರಿನ ಉಪಯೋಗ ಅಧಿಕವಾಗುತ್ತಿರುವ ಈ ಕಾಲದಲ್ಲಿ ಮಳೆ ಪ್ರಮಾಣವೂ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಮಳೆ ನೀರು ಪೋಲಾಗದಂತೆ ಕಾಪಾಡುವ ಎಲ್ಲ ಕ್ರಮಗಳೂ ಅನುಷ್ಠಾನಗೊಳ್ಳಬೇಕಾಗಿದೆ ಈ ವಿಚಾರದಲ್ಲಿ ಕೊಂಕಣಿ ವಿದ್ಯಾರ್ಥಿ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸು ಕ್ರಮ ಶ್ಲಾಘನೀಯ" ಎಂದು ಗೋಷ್ಟಿಯ ಅಧ್ಯಕ್ಷತೆ ವಹಿಸಿದ ಅನಿಕೇತ ಶೆಣೈ ಹೇಳಿದರು.

ಟ್ರೈನ್ಸಿಕಾ ಸ್ವೆಡಲ್, ವಿಜೇತಾ ಪ್ರಭು, ಹ್ಯಾನ್ಸಿ, ವಾಣಿಭಟ್, ಜೊಯ್‍ಸ್ಟನ್ ತಮ್ಮ ಅನಿಸಿಕೆ ತಿಳಿಸಿ ಜಲಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ವಿವರ ನೀಡಿದರು. ಸೌಂದರ್ಯ ಡಿ'ಸೋಜಾ , ಅನುಷಾ, ದೀಪಿಕಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷಣ ಗೋಷ್ಟಿಯಲಿ ಶಿಕ್ಷಣದ ಮಹತ್ವ ಅರಿವು ಮೂಡಿಸಲು ಕೇಂದ್ರ ರಾಜ್ಯ ಸರಕಾರಗಳು ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಶಿಕ್ಷಣ ಉದ್ದೇಶ ಕೇವಲ ಅಕ್ಷರ ಜ್ಞಾನ ಸಂಪಾದನೆ ಮಾತ್ರವಲ್ಲ ಒಳ್ಳೆಯ ನಾಗರಿಕರನ್ನು ರೂಪಿಸುವುದೂ ಆಗಬೇಕು. ಈ ದೃಷ್ಠಿಯಲ್ಲಿ ಶಿಕ್ಷಣದ ಮಹತ್ವ ವಿವರಿಸಬೇಕು. ಪ್ರತಿಭೆಗಳು ಎಲ್ಲ ಕ್ಷೇತ್ರದಲ್ಲೂ ಅರಳಲು ಅವಕಾಶವಿರಬೇಕು. ಅವುಗಳಲ್ಲಿ ವೇದಿಕೆಯಲ್ಲಿ ತೋರುವ ವಾಕಟುತ್ವ ಹಾಗೂ ಪ್ರತಿಭಾ ಪ್ರದರ್ಶನಗಳೂ ಸೇರುತ್ತವೆ" ಎಂದು ಶಿಕ್ಷಣ ಗೋಷ್ಟಿಯ ಅಧ್ಯಕ್ಷೆ ದೀಕ್ಷಾ ನಾಯಕ್ ಹೇಳಿದರು. ಲೊಂಜಿನ್, ತೇಜಸ್ವಿನಿ ಜಿ.ಶೆಣೈ , ಪ್ರತೀಕಾ ನೀಶಾ ಖಾರ್ವಿ ವಿಚಾರ ಮಂಡಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಿಯಾಂಕ, ಕೀರ್ತನಾ , ಅನಿಶಾ, ನಿರೂಪಿಸಿದರು.

ನಂತರ ನೆಡೆದಸಮಾರೋಪ ಸಮಾರಂಭದಲ್ಲಿ ಸಾಂಸ್ಕ್ರತಿಕ ಸ್ಪಧೆಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಸಂದೀಪನ್ ಪ್ರೌಢ ಶಾಲೆ ಅತೀ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಶ್ರೇಷ್ಟ ಸಾಧನ ಪುರಸ್ಕಾರ ಪಡೆದುಕೊಂಡಿತು. ಕಾಲೇಜು ವಿಭಾಗದಲ್ಲಿ ಡಾ|ಬಿ.ಬಿ.ಹೆಗ್ಡೆ ಕಾಲೇಜು ಪ್ರಥಮ ಸ್ಥಾನ ಪಡೇಯಿತು. ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜು, ಪ್ರಥಮ , ಸರಕಾರಿ ಪ.ಪೂ. ಕಾಲೇಜು ದ್ವೀತಿಯ ಸ್ಥಾನ ಪಡೆದವು.

ಪ್ರೌಢ ಶಾಲಾ ವಿಭಾಗದಲ್ಲಿ ಶ್ರೀ ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ ದ್ವೀತಿಯ ಬಹುಮಾನ ಪಡೆಯಿತು. ಸಂತ ಮೇರಿಸ್ ಪ.ಪೂ. ಕಾಲೇಜು, ಎಸ್.ವಿ. ಫ್ರೌಡ ಶಾಲೆ, ವಿ.ಕೆ ಆಚಾರ್ಯ ಆಂಗ್ಲಾ ಮಾಧ್ಯಮ ಶಾಲೆ ಸಮಾಧಾನಕರ ಬಹುಮಾನ ಪಡೆದವು. ಸಾಹಿತಿ ಬರ್ನಾಡ್ ಡಿ’ಕೋಸ್ತಾ, ಜಿ. ಭಾಸ್ಕರ ಕಲೈಕಾರ್, ಪ್ರಕಾಶ್ ನಾಯಕ್ ಮತ್ತು ಪುರುಷೋತ್ತಮ ಶೇಟ್ ಪ್ರತಿಭಾ ಪ್ರದರ್ಶನಗಳ ವಿಮರ್ಶೆ ಮಾಡಿದರು.

ಯು.ಸುಷ್ಮಾ ಶೆಣೈ, ಮೇಘಾ ಆರುಂಧತಿ ನಾಯಕ್, ಮೇಘನಾ ಕಿಣಿ. ಕಾರ್ಯಕ್ರಮ ನಿರೂಪಿಸಿದರು. ಉದಯ್ ಜ್ಯುವೆಲರ್ಸನ ಮ್ಹಾಲಕ ಉದಯ ಕುಮಾರ್ ಶೇಟ್, ಉದ್ಯಮಿ ಆರ್ಚಿಬಲ್ಡ್ ಕ್ವಾಡರ್ಸ್ ಹಾಗೂ ಜೆ. ಸೀತಾರಾಮ ಮಡಿವಾಳ ಬಹುಮಾನ ವಿತರಿಸಿದರು.
More News

ಶರದ್ ಪವಾರ್-ಲಕ್ಷ ್ಮಣ ಪೂಜಾರಿ ಗುರುಭ್ಯೋ ನಮಃ
ಶರದ್ ಪವಾರ್-ಲಕ್ಷ ್ಮಣ ಪೂಜಾರಿ ಗುರುಭ್ಯೋ ನಮಃ
ಡಾ| ಪಿ.ಎಸ್‍ಶಂಕರ್ : ಕೋವಿಡ್-19 ಆಕಾಶವಾಣಿ ಜಾಗೃತಿ ಸಂದರ್ಶನ
ಡಾ| ಪಿ.ಎಸ್‍ಶಂಕರ್ : ಕೋವಿಡ್-19 ಆಕಾಶವಾಣಿ ಜಾಗೃತಿ ಸಂದರ್ಶನ
ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಟ್ಟ ಗುರುವಂದನಾ ಕಾರ್ಯಕ್ರಮ
ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಟ್ಟ ಗುರುವಂದನಾ ಕಾರ್ಯಕ್ರಮ

Comment Here