ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
Published On : 01 Sep 2024 | Reported By : Rons Bantwal
ಮುಂಬಯಿ, (ಆರ್‌ಬಿಐ) ಸೆ.೦೧: ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿsಗಳ ಸಂಘ,ಮುಂಬಯಿ ಇದರ ೩ನೆಯ ವಾರ್ಷಿಕ ಮಹಾಸಭೆಯು ಕಳೆದ ಶನಿವಾರ (ಆ.೩೧)ರಂದು ಬೋರಿವಲಿ ಪಶ್ಚಿಮದ ಮೆಜೆಸ್ಟಿಕ್ ಎನೆಕ್ಸ್ ಹೋಟೆಲ್ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ವಾಸುದೇವ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನೇರವೇರಿತು.
ವಾಸುದೇವ ಸಾಲ್ಯಾನ್ ಅವರು ಮಾತನಾಡಿ ಹಳೇ ವಿದ್ಯಾಥಿs ಸಂಘ ವಿಜಯ ಕಾಲೇಜಿನ ಉನ್ನತಿಗೆ ಕೆಲಸ ಮಾಡುತ್ತಿದೆ. ಬಡ ವಿದ್ಯಾಥಿsಗಳಿಗೆ ಪ್ರತಿ ವರ್ಷವೂ ೪ ಲಕ್ಷ ಅನುದಾನ ನೀಡುತ್ತಾ ಇದೆ. ಮುಂಬಯಿ ಮತ್ತು ಪರದೇಶದಲ್ಲಿ ನೆಲೆಸಿರುವ ಹಳೇವಿದ್ಯಾಥಿsಗಳ ಉದಾರ ಸಹಕಾರದಿಂದ ಇಂತಹ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು.
ಹಳೇವಿದ್ಯಾಥಿsಗಳಾದ ಕೆ.ಎನ್ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಪ್ರಸಾದ್ ಭಂಡಾರಿ, ಸಿಎ| ಸೋಮನಾಥ್ ಕುಂದರ್, ಸಿಎ| ಕಿಶೋರ್ ಸುವರ್ಣ, ದಿನೇಶ್ ಸಿ. ಸಾಲ್ಯಾನ್ ಮಾತನಾಡಿ ತಮ್ಮ ಅನಿಸಿಕೆ, ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಹಳೇವಿದ್ಯಾಥಿsಗಳಾದ ಕಾಶ್ಮೀರ ಭಾಸ್ಕರ್ ಶೆಟ್ಟಿ, ಕಿಶೋರ್ ಕುತ್ಯಾರ್, ರಂಜನ್ ಶೆಟ್ಟಿ, ಮೋಹನ್ ಶೆಟ್ಟಿ, ನವೀನಚಂದ್ರ ಬಂಗೇರ, ಅಶೋಕ್ ಕೊಲ್ನಾಡ್, ರೀಟಾ ಡೆಸಾ, ಸರಿತಾ ರಾವ್, ಸ್ವರ್ಣಜ್ಯೋತಿ ಶೆಟ್ಟಿ , ಉಷಾ ಶೇಖರ್, ಶಂಕರ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸಿಎ| ರೋಹಿತಾಕ್ಷ ದೇವಡಿಗ ಲೆಕ್ಕ ಪತ್ರಗಳನ್ನು ಮಂಡಿಸಿದರು. ಉಪಾಧ್ಯಕ್ಷ ನ್ಯಾಯವಾದಿ ಶೇಖರ್ ಭಂಡಾರಿ ಅವರು ಸಂಘದ ಮುಂದಿನ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ನೀಡಿದರು. ಭಾಸ್ಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
More News
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ಭೋಜ ಎನ್. ಪೂಜಾರಿ ನಿಧನ
ನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ೭೮ನೇ ಸ್ವಾತಂತ್ರ‍್ಯ ದಿನಾಚರಣೆ