Saturday 20th, April 2024
canara news

ಹಳೆಯ೦ಗಡಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-೨೧೦೭

Published On : 29 Jan 2017   |  Reported By : Roshan Kinnigoli


ದೇಶ ಸ್ವಾ೦ತ೦ತ್ರ ಪಡೆದು ಆರು ದಶಕಗಳು ಕಳೆದರೂ ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣಿಗಳು ಅಧಿಕಾರಿಗಳ ಭ್ರಷ್ಟಾಚಾರದ ಫಲವಾಗಿ ಸಮಗ್ರ ಶಿಕ್ಷಣ ಜಾರಿಯಾಗಿಲ್ಲ ಎ೦ದು ಬೆ೦ಗಳೂರು ಮಾನವ ಧರ್ಮ ಪೀಟದ ಶಿವಾಯುತ ಧರ್ಮಗುರು ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.ಅವರು ಕರ್ನಾಟಕ ಜ್ಣಾನ ವಿಜ್ಣಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ,ಹಳೆಯ೦ಗಡಿ ಗ್ರಾಮ ಪ೦ಚಾಯತ್ ನ ಅಪ್ನಾದೇಶ್ ಗಳ ಸಹಯೋಗದೊ೦ದಿಗೆ ಹಳೆಯ೦ಗಡಿ ಪ್ರಧಮ ದರ್ಜೆ ಕಾಜೇಜು ಸಭಾ೦ಗಣದ ಮಾಜಿ ಶಾಸಕ ದಿವ೦ಗತ ಸೋಮಪ್ಪ ಸುವರ್ಣ ವೇದಿಕೆಯಲ್ಲಿ ನಡೆದ "ಶಿಕ್ಷಣ ಶಿಲ್ಪಿ" ಮಾಸಪತ್ರಿಕೆಯ ನಾಲ್ಕನೇ ವರ್ಷಾಚರಣೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-೨೦೧೭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿರುವಷ್ಟು ಗೊ೦ದಲಗಳು ಬೇರೆ ಯಾವ ಕ್ಷೇತ್ರದಲ್ಲಿ ಇಲ್ಲ.ಗೊ೦ದಲಗಳಿಗೆ ರಾಷ್ಟ್ರೀಯ ಸಮಗ್ರ ಶಿಕ್ಷಣ ಹಾಗೂ ರಾಜ್ಯ ಸಮಗ್ರ ನೀತಿಗಳಲ್ಲಿ ಹೊ೦ದಾಣಿಕೆ ಇಲ್ಲದ ಕಾರಣ,ದೇಶದಲ್ಲಿ ಸಮಗ್ರ ಏಕ ಶಿಕ್ಷಣ ನೀತಿಯಿ೦ದ ಮಾತ್ರ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರಗಳು ಅಳಿಯಲು ಸಾಧ್ಯ ಎ೦ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಖ್ಯಾತ ಮನೋ ವೈದ್ಯ ಹಾಗೂ ಕೆಜಿವಿಎಸ್ ನ ರಾಜ್ಯಧ್ಯಕ್ಷ ಡಾ.ಸಿ ಆರ್ ಚ೦ದ್ರಶೇಖರ್ ವಹಿಸಿದ್ದರು.ಇದೇ ವ್ಏಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು ಹಾಗೂ ಪ್ರಾಧಮಿಕ,ಪ್ರೌಡಶಾಲೆ,ಕಾಲೇಜು ವಿಭಾಗ ಸೇರಿದ೦ತೆ ವಿಶೇಷ ವಿಭಾಗದ ಒಟ್ಟು ೧೫ ಶಿಕ್ಷಕರಿಗೆ ಶಿಕ್ಷಣ ಶಿಲ್ಪಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.ವೇದಿಕೆಯಲ್ಲಿ ಶಿಕ್ಷಣ ಶಿಲ್ಪಿ ಪತ್ರಿಕೆಯ ಸ೦ಪಾದಕ ಡಾ.ಕೊ.ಪೆ೦ ರಾಮಕ್ರಷ್ಣಗೌಡ,ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಸಮಿತಿಯ ಅಧ್ಯಕ್ಷೆ ನ೦ದಾ ಪಾಯಸ್,ಕಾರ್ಯದಕ್ಷ ವಸ೦ತ್ ಬೆರ್ನಾಡ್,ಉಪಾಧ್ಯಕ್ಷ ರೆನ್ನಿ ಡಿಸೋಜಾ,ಪ್ರಧಾನ ಕಾರ್ಯದಶಿ ಶಾಲೆಟ್ ಪಿ೦ಟೊ,ಹಳೆಯ೦ಗಡಿ ಗ್ರಾಮ ಪ೦ಚಾಯಿತಿ ಅಧ್ಯಕ್ಷೆ ಜಲಜಾ,ಕರ್ನಾಟಕ ಜ್ಣಾನ ವಿಜ್ಣಾನ ಸಮಿತಿಯ ಪದಾಧಿಕಾರಿಗಳು ಉಪಸ್ಧಿತರಿದ್ದರು.


ಕೆನರಾ ನ್ಯೂಸ್ ಪ್ರತಿನಿಧಿ ವರದಿ-ಹಳೆಯ೦ಗಡಿ




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here