Friday 26th, April 2024
canara news

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಮಿಲನ-ವಿದ್ಯಾನಿಧಿಗೆ ಚಾಲನೆ

Published On : 29 Jan 2017   |  Reported By : Rons Bantwal


ಹಳೆ ವಿದ್ಯಾರ್ಥಿಗಳೇ ಶೈಕ್ಷಣಿಕ ಸಂಸ್ಥೆಗಳ ಬೆನ್ನೆಲುಬು : ಶವಿೂನಾ ಆಳ್ವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ. 28: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪೂರ್ವದ ಸಾಕಿನಾಕ ಪೆನ್‍ನ್ಸುಲಾ ಹೊಟೇಲು ಸಭಾಗೃಹದಲ್ಲಿ ಘಟಕದ ಅಧ್ಯಕ್ಷ ಸಿಎ| ಸೋಮನಾಥ ಕುಂದರ್ ಅಧ್ಯಕ್ಷತೆಯಲ್ಲಿ ನೇರವೇರಿತು. ಮುಖ್ಯ ಅತಿಥಿsಯಾಗಿ ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್ ಅಧ್ಯಕ್ಷೆ ಶವಿೂನಾ ಆಳ್ವ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು.

ಗೌರವ ಅತಿಥಿsಗಳಾಗಿ ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ| ಕೆ.ನಾರಾಯಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಗೌರವ ಅಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ಉಪಾಧ್ಯಕ್ಷ ಆನಂದ್ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು. ನಿತ್ಯಾನಂದ ಹೆಗ್ಡೆ ಅವರ ಸೃಜನಶೀಲ ಕಲ್ಪನೆಯಂತೆ ವಿದ್ಯಾಥಿರ್sಗಳಿಗೆ ಸಹಾಯಹಸ್ತವಾಗಿ ರಚಿಸಲಾದ `ವಿದ್ಯಾಥಿರ್ü ವಿದ್ಯಾನಿಧಿ' ಯೋಜನೆಯ ದೇಣಿಗೆ ಚೀಟಿಗಳುಳ್ಳ ಪುಷ್ಪಾಲಂಕೃತ ಬಿಂದಿಗೆ ಮೇಲಿರಿಸಿದ ದೀವಿಗೆಯನ್ನು ಪ್ರಕಾಶಿಸಿ ಕಾಲೇಜ್‍ನ ಹಳೆ ವಿದ್ಯಾಥಿರ್s ಸಂಘದ ಸ್ಥಾಪಕಾಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ ಚಾಲನೆಯ ನ್ನೀಡಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜ್‍ನ ವಿಶ್ರಾಂತ ಪ್ರಾಂಶುಪಾಲ ಪ್ರೊ| ಕೆ.ಆರ್ ಶಂಕರ್ (ಪತ್ನಿ ರಾಜಲಕ್ಷಿ್ಮೀ ಶಂಕರ್, ಮಕ್ಕಳಾದ ಮಾ| ಕಾರ್ತಿಕ್ ಶಂಕರ್ ಹಾಗೂ ಕು| ಪ್ರಿಯಾ ಶಂಕರ್ ಅವರನ್ನೊಳಗೊಂಡು) ಹಾಗೂ ವಿಶ್ರಾಂತ ಪ್ರಾಚಾರ್ಯ ಪ್ರೊ| ಎಸ್.ಗೋವಿಂದ ಭಟ್ ಅವರಿಗೆ ಗುರುವಂದನೆಯನ್ನೂ, ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿ ದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಶಿಮಂತೂರು ಚಂದ್ರಹಾಸ ಶೆಟ್ಟಿ (ಪತ್ನಿ ಚಂದ್ರಕಲಾ ಚಂದ್ರಹಾ ಸ್), ಸಿಎ| ಅಶ್ವಜಿತ್ ಹೆಜ್ಮಾಡಿ ಮತ್ತು ರವೀಂದ್ರ ಪುತ್ರನ್ ಯುಗಾಂಡ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಂಘದ ಸದಸ್ಯರ ಪ್ರತಿಭಾವ್ವಾನಿತ ಎಸ್‍ಎಸ್, ಹೆಚ್‍ಎಸ್‍ಸಿ, ಡಾಕ್ಟರ್'ಸ್ ಮತ್ತು ಇಂಜಿನಿಯರಿಂಗ್ ಮಕ್ಕಳಿಗೆ ಅತಿಥಿsಗಳು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು. ಸಿಎ| ಕಿಶೋರ್ ಸುವರ್ಣ, ಭಾಸ್ಕರ್ ಬಿ.ಶೆಟ್ಟಿ, ವಾಸುದೇವ ಎಂ.ಸಾಲ್ಯಾನ್, ರತ್ನಾಕರ್ ಆರ್.ಸಾಲ್ಯಾನ್ ಸನ್ಮಾನಿತರನ್ನು ಕ್ರಮವಾಗಿ ಪರಿಚಯಿಸಿದರು. ಸನ್ಮಾನಿತರು ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.

ಶವಿೂನಾ ಆಳ್ವ ಮಾತನಾಡಿ ಹಳೆ ವಿದ್ಯಾರ್ಥಿ ಸಂಘಗಳು ಶೈಕ್ಷಣಿಕ ಸಂಸ್ಥೆಗಳ ಬೆನ್ನೆಲುಬು ಇದ್ದಂತೆ. ಅದರಲ್ಲೂ ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕ ಮಾದರಿ ಸಂಘಟನೆ ಆಗಿದ್ದು ಇವರಲ್ಲಿ ಸಾಂಘಿಕತೆ ಮತ್ತು ಸಮಾನಮನಸ್ಕ ಒಗ್ಗಟ್ಟು ಅನನ್ಯವಾದದ್ದು. ಈ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಇನ್ನೂ ತಮ್ಮ ವಿದ್ಯಾಥಿರ್üಜೀವನವನ್ನು ಜೀವಂತವಾಗಿರಿಸಿರುವುದೇ ಇವರಲ್ಲಿನ ದೊಡ್ಡತನ. ವಿದ್ಯಾರ್ಥಿ ಜೀವನದ ಸುವರ್ಣಕಾಲದ ಬದುಕಿನ ನೆನಪಿನಂಗಳದಿ ಒಟ್ಟಾಗಿ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಶೈಕ್ಷಣಿಕ ಗುಣಮಟ್ಟದ ಕಾಳಜಿ, ಭವಿಷ್ಯತ್ತಿನ ಶಿಕ್ಷಣಕ್ಕೆ ಪ್ರೊರೀತ್ಸಹಿಸುವ ಉದಾರ ಮನೋಭಾವ ಶ್ಲಾಘನೀಯ ಎಂದರು.

ಹಳೆ ವಿದ್ಯಾಥಿರ್sಗಳ ಸಕ್ರೀಯತೆ, ಸಹನೆ, ಆತ್ಮೀಯತೆ ಮತ್ತು ಸಮಾನಮನಸ್ಕರಾಗಿ ಕೆಲಸ ಮಾಡುವ ಪರಿ ಇಂತಹ ವೇದಿಕೆಗೆ ಸಾಕ್ಷಿಯಾಗಿದೆ. ತಮ್ಮಲ್ಲಿನ ಒಳಿತಿನ ಸದ್ಗುಣಗಳಿಂದ ಇಂದು ಸಮಾಜದ ಉನ್ನತಿ ಸಾಧ್ಯವಾಗಿದೆ. ಇದು ವಿಜಯ ಕಾಲೇಜು ಮೂಲ್ಕಿ ಇದರ ಅಭಿವೃದ್ಧಿಗೂ ಪೂರಕವಾಗಿದೆ. ನಮ್ಮನ್ನು ಗುರುವಂದನೆಗೈದು ಆತ್ಮೀಯತೆಯ ಆಶೀರ್ವಾಚನಕ್ಕೆ ಪಾತ್ರರಾಗಿದ್ದೀರಿ. ನೀವೆಲ್ಲರೂ ಹಣವಂತರಿಕ್ಕಿಂತ ಹೃದಯವಂತರಾಗಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಒಳ್ಳೆಯ ಮನಸ್ಸಿನ ಕೆಲಸ ಯಾವೋತ್ತೂ ಫಲಪ್ರದವಾಗುತ್ತದೆ. ಆದುದರಿಂದ ನಿಮ್ಮ ಈ ಸಂಘಟನೆಯನ್ನು ಸಮರ್ಥವಾಗಿ ಮುನ್ನಡಿಸಿ ಶಿಕ್ಷಣ ಸಂಸ್ಥೆ ಸಮಾಜದ ಋಣ ಪೂರೈಸಿರಿ. ತಮ್ಮಂತಹ ಶ್ರದ್ಧಾವುಳವರಿಂದ ವಿದ್ಯೆಪಡೆದವರು ಬುದ್ಧಿವಂತರಾಗಿ ತಮ್ಮದೇ ಸೇವಾ ಮನೋಭಾವಕ್ಕೆ ಬದ್ಧರಾಗುವಂತಾಗಲಿ ಎಂದು ಗುರುವಂದನೆ ಸ್ವೀಕರಿಸಿ ಪ್ರೊ| ಶಂಕರ್ ನುಡಿದರು.

ನಾನು ಕಲಿಸಿದ ವಿದ್ಯಾಥಿರ್üಗಳು ಇಷ್ಟೊಂದು ಎತ್ತರಕ್ಕೆ ಬೆಳೆದಿರುವುದನ್ನು ಕಂಡ ನನಗೆ ನನ್ನ ಪ್ರಾಧ್ಯಾಪಕಾ ಬದುಕು ಸಾರ್ಥಕವಾಯಿತು ಎಂದಂತಾಯಿತು. ಗುರುಗಳಿಗೆ ವಿದ್ಯಾಥಿರ್üಗಳ ಸನ್ಮಾನಕ್ಕಿಂತ ಮಿಗಿಲಾದ ಗೌರವ ಮತ್ತೊಂದಿಲ್ಲ. ನಿಮ್ಮೆಲ್ಲರ ಪ್ರೀತಿವಿಶ್ವಾಸದ ಈ ಬದುಕು ನನಗೆ ಆಶ್ಚರ್ಯಕರವೆಣಿಸಿದೆ. ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಪ್ರೊ| ಗೋವಿಂದ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಎ| ಶಂಕರ ಶೆಟ್ಟಿ ಮಾತನಾಡಿ ಇದು ನಾವು ನೀಡಿದ ಸನ್ಮಾನವಲ್ಲ. ನಮ್ಮನ್ನು ವಿದ್ಯಾವಂತರನ್ನಾಗಿಸಿದ ಸಂಸ್ಥೆಗೆ ಹೆಸರುತಂದ ಗಣ್ಯರಿಗೆ ಸಂದ ಒಲವಿನ ಉಡುಗೊರೆ ಅಷ್ಟೇ. ನಾವು ವಿದ್ಯಾಥಿರ್üಗಳ ಶಿಕ್ಷಣಮಟ್ಟ, ಭಿನ್ನತೆಯನ್ನು ಪರಿಗಣಿಸದೆ ಅವರ ಆರ್ಥಿಕ ಮಟ್ಟವನ್ನು ಗಮನಿಸಿ ಪ್ರೊರೀತ್ಸಹಿಸಬೇಕು. ಇದೇ ಉದ್ದೇಶ `ವಿದ್ಯಾರ್ಥಿ ವಿದ್ಯಾನಿಧಿ' ಯೋಜನೆಯದ್ದಾಗಿದೆ ಎಂದರು.

ಈ ಹಳೆ ವಿದ್ಯಾಥಿರ್s ಸಂಘಟನೆಯ ಲವಲವಿಕೆಯ ಪಾದರಸದಂತಹ ಚಟುವಟಿಕೆ ಕಂಡು ನಾನೂ ಉತ್ಸಾಹ ಭರಿತನಾಗಿದ್ದೇನೆ. ಹಳೆ ವಿದ್ಯಾರ್ಥಿಗಳ ಒಗ್ಗಟ್ಟೆ ವಿದ್ಯಾಲಯದ ತಾಕತ್ತು. ಮೈದಾನವಿಲ್ಲದ ಕಾಲೇಜಿಯ ಮುಂದಿನ ಗದ್ದೆಯಲ್ಲಿ ಒದ್ದೆಯಾಗಿ, ನಿದ್ದೆಮಾಡಿ ಶ್ರದ್ಧೆಯೊಂದಿಗೆ ಕಲಿತ ವಿದ್ಯಾಥಿರ್sಗಳಲ್ಲಿ ಕಂಡ ಈ ಏಕತೆಯನ್ನು ವರ್ಣಿಸಲಸಾಧ್ಯ. ಇವರ ವಿಶ್ವಾಸನೀಯ ಸಂಬಂಧಗಳು ಪ್ರಸಕ್ತ ಮಕ್ಕಳಿಗೆ ಮಾದರಿ ಆಗಲಿ ಎಂದು ಪ್ರಾಂಶುಪಾಲ ನಾರಾಯಣ ಆಶಯ ವ್ಯಕ್ತಪಡಿಸಿದರು.

ಮೂಲ್ಕಿಯ ವಿಜಯ ಕಾಲೇಜ್‍ನಲ್ಲಿ ಓದಿದವರೆಲ್ಲರೂ ಶ್ರೀಮಂತೆರೇ ಆಗಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕೇತರ ವರ್ಗದ ಸಂಬಂಧಗಳೇ ಇದಕ್ಕೆ ಕಾರಣ. ಇಂದಿಗೂ ನಮ್ಮಲ್ಲಿನ ಒಡನಾಟವನ್ನಿರಿಸಿ ಒಗ್ಗೂಡಿಸುವ ವಾಸುದೇವ ಸಾಲ್ಯಾನ್ ಅವರಿಗೆ ಈ ಕಾರ್ಯಕ್ರಮದ ಕೀರ್ತಿ ಸಲ್ಲಬೇಕು. ಮುಂದಕ್ಕೂ ನಾವೆಲ್ಲ ಒಂದಾಗಿ ಜನರಿಗೆ ನೆರವಾಗೋಣ. ಶಿಕ್ಷಣ ಸಂಸ್ಥೆಗಳು ಶಿಸ್ತುಬದ್ಧ ಬೋಧನೆ ನೀಡಿದ ಫಲ ಇದಾಗಿದೆ. ಇದೇ ಶಿಕ್ಷಣ ಮತ್ತು ಸಾಮರಸ್ಯದ ವಿದ್ಯಾರ್ಥಿ ಜೀವನ ಎಂದು ಕರ್ನಿರೆ ವಿಶ್ವನಾಥ್ ನುಡಿದರು.

ಕಾರ್ಯಕ್ರಮದಲ್ಲಿ ಸಂಘದ ಮುಂಬಯಿ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನ್ಯಾಯವಾದಿ ಶೇಖರ್ ಎಸ್.ಭಂಡಾರಿ, ಸಿಎ| ಕಿಶೋರ್ ಕುಮಾರ್, ಭಾಸ್ಕರ್ ಎಂ.ಸಾಲ್ಯಾನ್, ಅಶೋಕ್ ದೇವಾಡಿಗ, ಸಿಎ| ಸುಂದರ್ ಎಸ್.ಭಂಡಾರಿ, ಸಲಹಾ ಸಮಿತಿ ಸದಸ್ಯರುಗಳಾದ ಐಕಳ ಹರೀಶ್ ಶೆಟ್ಟಿ, ಡಾ| ರತ್ನಾಕರ್ ಶೆಟ್ಟಿ, ಕಿಶೋರ್‍ಕು ಮಾರ್ ಕುತ್ಯಾರ್, ಮೋಹನ್ ಕೆ.ಶೆಟ್ಟಿ, ರಂಜನ್‍ಕುಮಾರ್ ಶೆಟ್ಟಿ, ನವೀನ್ಚಂದ್ರ ಬಂಗೇರ, ಸತೀಶ್ ಶೆಟ್ಟಿ (ಪೆನಿನ್ಸೂಲಾ), ಸಿ.ಆರ್ ಮೂಲ್ಕಿ, ಐಕಳ ಗುಣಪಾಲ್ ಶೆಟ್ಟಿ, ರಾಜೇಂದ್ರ ಕೆ.ಶೆಟ್ಟಿ, ನಿತ್ಯಾನಂದ ಪ್ರಭು, ಸಿಎ| ಎನ್.ಲೀಲಾಧರ್, ಅರುಣ್‍ಕುಮಾರ್ ಕೋಟ್ಯಾನ್, ಮೋಹನ್‍ದಾಸ್ ಹೆಜ್ಮಾಡಿ, ಸುನೀಲ್ ಶೆಟ್ಟಿ ಹಾಗೂ ಸಿಎ| ದಯಾನಂದ್ ಶೆಟ್ಟಿ, ಡಾ| ಹರೀಶ್ ಕುಮಾರ್, ಕಿಶೋರ್ ರಾವ್ ಸೇರಿದಂತೆ ವಿಜಯ ಕಾಲೇಜ್‍ನ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಗುರುವಂದನೆ ನಡೆಸಿದರು.

ಕು| ತನ್ವಿ ಆನಂದ್ ದೇವಾಡಿಗ ಸ್ವಾಗತನೃತ್ಯಗೈದರು. ನಿತ್ಯಾನಂದ ಹೆಗ್ಡೆ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ವಾಸುದೇವ ಎಂ.ಸಾಲ್ಯಾನ್ ಸ್ವಾಗತಿಸಿ ವಂದಿಸಿದರು. ಕೋಶಾಧಿಕಾರಿ ಹರೀಶ್ ಕೆ. ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಕು| ಸೌಜನ್ಯ ಮತ್ತು ಕು| ಅಂಕಿತ ಪೂಜಾರಿ ಭರತನಾಟ್ಯ, ಲವಣಿ ಮತ್ತು ಫಿಲ್ಮೀನೃತ್ಯಗಳನ್ನು ಪ್ರಸ್ತುತ ಪಡಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here