Tuesday 15th, July 2025
canara news

ಕನ್ನಡ ಸಂಘ ಸಾಂತಾಕ್ರೂಜ್‍ನಿಂದ 68ನೇ ಗಣರಾಜ್ಯೋತ್ಸ ಸಂಭ್ರಮ

Published On : 29 Jan 2017   |  Reported By : Rons Bantwal


ಸಂವಿಧಾನ ಪ್ರತೀಯೋರ್ವ ಭಾರತಿಯ ಕರ್ತವ್ಯ : ಎಲ್ವೀ ಅವಿೂನ್

ಮುಂಬಯಿ, ಜ.29: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ಆಚರಿಸುವಂತೆ ಈ ಬಾರಿ 68ನೇ ಗಣರಾಜ್ಯೋತ್ಸ ಸಂಭ್ರಮವನ್ನು ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಆಚರಿಸಿದ್ದು, ಅವಿೂನ್ ಸ್ವಕಛೇರಿ ಮುಂಭಾಗದಲ್ಲಿ ಧ್ವಜಾರೋಹನಗದು ರಾಷ್ಟ್ರ ಗೌರವ ನಡೆಸಿ ಹುತಾತ್ಮ ರಾಷ್ಟ್ರ ನಾಯರನ್ನು ಸ್ಮರಸಿದರು.

1950ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ಪಾವಿತ್ಯ್ರತೆವುಳ್ಳದ್ದು. ಅದನ್ನು ಗೌರವಿಸಿ ಅದಕ್ಕೆ ಬದ್ಧವಾಗಿ ನಡೆಯುವ ಜವಾಬ್ದಾರಿ ಪ್ರತೀಯೋರ್ವ ಭಾರತಿಯ ಪ್ರಜೆಯದ್ದಾಗಬೇಕು. ನಮ್ಮ ರಾಷ್ಟ್ರದ ನೇತಾರರು ಅದನ್ನು ಕೂಲಂಕುಷವಾಗಿ ಮನವರಿಸಿ ವಿಮರ್ಶೆ ಮಾಡಿದ್ದೇ ಆದಲ್ಲಿ ನಮ್ಮಲ್ಲಿ ಜಾತಿಧರ್ಮದ ಹೆಸರಲ್ಲಿ ದೇಶ ವಿಭಜಿಸುವ ಷಡ್ಯಂತ್ರ ನಡೆಯುತ್ತಿರಲಿಲ್ಲ. ಮತ ಪಡೆಯುವ ಹುನ್ನಾರದಲ್ಲಿ ಜಾತಿಪಂಥಗಳ ಮುಖೇನ ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ನಿಂದಿಸುತ್ತಿರುವುದು ನಮ್ಮ ದುರಂತ. ಆದುದರಿಂದ ಸಂವಿಧಾನ ಬದ್ಧವಾಗಿ ದೇಶ ಮುನ್ನಡೆಯುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ದೇಶದ ಹಿತ ಕಾಪಾಡುವ ಬದಲಾಗಿ ದೇಶ ವಿಭಜಿಸಿ ಗುದ್ದಾಟಗಳೊಂದಿಗೆ ತಮ್ಮತಮ್ಮ ಪಕ್ಷಗಳನ್ನೇ ಭದ್ರಪಡಿಸುತ್ತಿದ್ದಾರೆ. ಇನ್ನಾದರೂ ನಮ್ಮ ನಾಯಕರು ರಾಷ್ಟ್ರದ ಬಗ್ಗೆ ಚಿಂತಿಸಿ ರಾಷ್ಟ್ರದ ಮೂಲೆಮೂಲೆಗಳ ಜನತೆಗೆ ಮೂಲಸೌಕರ್ಯ ಗಳನ್ನು ಒದಗಿಸುತ್ತ ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕಾಗಿ ಶ್ರಮಿಸುವಂತಾಗಲಿ ಎಂದು ಎಲ್.ವಿ ಅವಿೂನ್ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌ| ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಆರ್.ಪಿ ಹೆಗಡೆ, ಜಿ.ಆರ್ ಬಂಗೇರ, ಶಿವರಾಮ ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಮಹಿಳಾ ವಿಭಾಗದ ಶಕೀಲಾ ಪಿ.ಶೆಟ್ಟಿ, ಶಾರದಾ ಎಸ್. ಪೂಜಾರಿ, ಸುಮಾ ಎಂ.ಪೂಜಾರಿ, ಉತ್ತಮ್ ಉಭಲೆ ಶೋಭಾ ಶೆಟ್ಟಿ, ಜೋತ್ಸಾ ್ನ ಶೆಟ್ಟಿ, ದಿವ್ಯಾ ಶೆಟ್ಟಿ, ಪದಾಧಿಕಾರಿಗಳು, ಸಂಘದ ಮಹಿಳಾ ವಿಭಾಗದ ಸದಸ್ಯೆಯರನೇಕರು ಹಾಜರಿದ್ದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here