Friday 9th, May 2025
canara news

ಮುಂಬಯಿ ವಿವಿ ಕನ್ನಡ ವಿಭಾಗ- ಮೈಸೂರು ಅಸೋಸಿಯೇಶನ್ ಮುಂಬಯಿ ಸಂಯುಕ್ತ ಆಶ್ರಯದಲ್ಲಿ

Published On : 30 Jan 2017   |  Reported By : Rons Bantwal


ಡಾ| ಭರತ್‍ಕುಮಾರ್ ಪೊಲಿಪು ರಚಿತ `ಸಾಹಿತಿ, ಚಿಂತಕ ವಿಶ್ವನಾಥ್ ಕಾರ್ನಾಡ್' ಕೃತಿ ಬಿಡುಗಡೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.30: ಮುಂಬಯಿ ವಿವಿ ಕನ್ನಡ ವಿಭಾಗ- ಮೈಸೂರು ಅಸೋಸಿಯೇಶನ್ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಟುಂಗದಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಪ್ರಶಸ್ತಿ ಪುರಸ್ಕೃತ ನಾಟಕಕರ್ಮಿ, ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು ರಚಿತ `ಸಾಹಿತಿ, ಚಿಂತಕ ವಿಶ್ವನಾಥ್ ಕಾರ್ನಾಡ್' ಕೃತಿ ಅನಾವರಣ ಗೊಳಿಸಲ್ಪಟ್ಟಿತು.

ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ್ ಕಾರ್ನಾಡ್ ಸಮ್ಮುಖದಲ್ಲಿ ಮೈಸೂರು ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯ, ಟ್ರಸ್ಟಿ ಕೆ.ಮಂಜುನಾಥಯ್ಯ ಕೃತಿ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಜಸ್ಟೀಸ್ ಬಿ.ಎನ್ ಶ್ರೀಕೃಷ್ಣ, ವಿಮರ್ಶಕಿ ಡಾ| ಮಮತಾ ರಾವ್, ಕನ್ನಡ ವಿಭಾಗ ಮುಂಬಯಿ ವಿವಿ ಇದರ ಸಂಶೋಧನ ಸಹಾಯಕ ವೈ.ವಿ.ಮಧುಸೂದನ ರಾವ್, ಡಾ| ಮಂಜುನಾಥಯ್ಯ, ಡಾ| ಜಿ.ವಿ.ಕುಲಕರ್ಣಿ, ನ್ಯಾ| ವಸಂತ್ ಕಲಕೋಟಿ, ಓಂದಾಸ್ ಕಣ್ಣಂಗಾರ್, ಎಸ್.ಕೆ ಸುಂದರ್, ಸುರೇಂದ್ರಕುಮಾರ್ ಮಾರ್ನಾಡ್, ಅವಿನಾಶ್ ಕಾಮತ್, ಮತ್ತಿತರ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು, ಡಾ| ವಿಶ್ವನಾಥ ಕಾರ್ನಾಡ್ ಅವರು ಡಾ| ಪೆÇಲಿಪು ಅವರಿಗೆ ಕೃತಿಗೌರವ ಪುಷ್ಪಗುಚ್ಛ ಸಲ್ಲಿಸಿ ಅಭಿವಂದಿಸಿದರು.

ಶೈಲಜಾ ಮದುಸೂಧನ್ ಪ್ರಾರ್ಥನೆಯನ್ನಾಡಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕ್ರಮವಾಗಿ ಕೃತಿ ಪರಿಚಯ ಗೈದರು. ಡಾ| ಜ್ಯೋತಿ ಸತೀಶ್ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here