Thursday 10th, July 2025
canara news

ನವೋದಯ ಕಲಾರಂಗ ಮುಂಬಯಿ ಸಂಸ್ಥೆಯಿಂದ ಸನ್ಮಾನಿಸಲ್ಪಟ್ಟ

Published On : 30 Jan 2017   |  Reported By : Rons Bantwal


ಅರುಷಾ ಶೆಟ್ಟಿ-ಸುರೇಂದ್ರ ಕುಮಾರ್ ಮಾರ್ನಾಡ್ ಅಪ್ರತಿಮ ಪ್ರತಿಭೆಗಳು
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.30: ನವೋದಯ ಕಲಾ ರಂಗ ಮುಂಬಯಿ ಕಲಾವಿದರು ರವಿ ಶಂಕರ್ ಆಚಾರ್ಯ ರಚಿಸಿ, ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ಲು ನಿರ್ದೇಶಿಸಿದ `ಪಗಡೆದ ಪಂಥ' ತುಳು ಪೌರಾಣಿಕ ನಾಟಕವನ್ನು ಮಾಟುಂಗದಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಪ್ರದರ್ಶಿಸಿತು.

 

ಪ್ರಸಿದ್ಧ ಪುರೋಹಿತ ಪ್ರವೀಣ್ ಭಟ್ ಸಯಾನ್ ಅವರು ಆಶೀರ್ವಚನ ನೀಡಿದರು. ತುಳುಕನ್ನಡ ವೆಲ್ಫೇರ್ ಅಸೋಸಿಯೇಶನ್ ಕಮೋಟೆ ನವಿಮುಂಬಯಿ ಇದರ ಅಧ್ಯಕ್ಷ ಬೋಳ ರವಿ ಕೆ.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಸಭಾಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗಣನಾಥ್ ಬಿ.ಶೆಟ್ಟಿ, ಅನೀಲ್ ಸಾಲ್ಯಾನ್, ಗೌರವ ಅತಿಥಿüಗಳಾಗಿ ಉಪಸ್ಥಿತರಿದ್ದು, ನಾಡಿನ ಹೆಸರಾಂತ ಕಲಾವಿದರೂ, ಅಪ್ರತಿಮ ಪ್ರತಿಭೆಗಳಾದ ಹಿರಿಯ ರಂಗನಟಿ ಅರುಷಾ ಎನ್.ಶೆಟ್ಟಿ (ಅವರಿಗೆ ಕಿರೀಟ ತೊಡಿಸಿ) ಮತ್ತು ಡಬ್ಬಿಂಗ್ ಆರ್ಟಿಸ್ಟ್ ಸುರೇಂದ್ರ ಕುಮಾರ್ ಮಾರ್ನಾಡ್ ಅವರನ್ನು (ಪತ್ನಿ ವಿದ್ಯಾ ಸೂರಿ, ಮಕ್ಕಳಾದ ಸುವಿಧ್ ಹಾಗೂ ಸ್ವರ ಸೂರಿ ಅವರನ್ನೊಳಗೊಂಡು) ಸನ್ಮಾನಿಸಿ ಅಭಿನಂದಿಸಿದರು.

ಗೌ| ಕೋಶಾಧಿಕಾರಿ ಶಿವ ಶ್ರೀಯಾನ್, ಕಿಶೋರ್ ಪಿಲಾರ್, ಗಣೇಶ್ ರಾವ್ ಪಡುಬಿದ್ರಿ, ಚಂದ್ರಕಾಂತ್ ಸಾಲ್ಯಾನ್, ಉಮೇಶ್ ಶೆಟ್ಟಿ ಅಡ್ತಲ, ಶಿವರಾಮ ಸಚ್ಚರಿಪೇಟೆ ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕು| ದೀಕ್ಷಾ ದೇವಾಡಿಗ ಸ್ವಾಗತ ನೃತ್ಯಗೈದರು. ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಟಿ ವಿಜಯಕುಮಾರ್ ತಿಂಗಳಾಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷ ಮನೋಹರ್ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಸುನಂದ ಶೆಟ್ಟಿ ಮತ್ತು ಗಣೇಶ್ ಪಡುಬಿದ್ರಿ ಸನ್ಮಾನಪತ್ರ ವಾಚಿಸಿದರು. ಗೌ| ಪ್ರ| ಕಾರ್ಯದರ್ಶಿ ಸುರೇಶ್ ಇರ್ವತ್ತೂರು ವಂದಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here