Friday 26th, April 2024
canara news

ಸುವರ್ಣ ಮಹೋತ್ಸವ ಪೂಜೆ ನೆರವೇರಿಸಿದ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್

Published On : 30 Jan 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ:30: ಕಲಿಯುಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀ ರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಶ್ರೀ ಶನೈೀಶ್ವರನ ಪರಮ ಭಕ್ತರುಗಳಿಂದ ಕಳೆದ ಸುಮಾರು ಐದು ದಶಕಗಳ ತುಳು ಕನ್ನಡಿಗರ ಸಂಚಾಲಕತ್ವದಲ್ಲಿ ಹಿಂದೆ ಸ್ಥಾಪಿಸಲ್ಪಟ್ಟು ನಿರಂತರ 50 ವರ್ಷಗಳಿಂದ ಸೇವಾ ನಿರತ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಇಂದಿಲ್ಲಿ ಶನಿವಾರ ಸುವರ್ಣ ಸಂಭ್ರಮದ ಪೂಜಾ ಉತ್ಸವ ನಡೆಸಿತು. ಸಮಿತಿ ಅಧ್ಯಕ್ಷ ಶಂಕರ್ ಕೆ. ಸುವರ್ಣ ದೀಪ ಪ್ರಜ್ವಲಿಸಿ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಸುವರ್ಣ ಮಹೋತ್ಸವಕ್ಕೆ ಚಾಲನೆಯನ್ನಿತ್ತರು.

 

ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಸದ್ಯ ಸ್ಥಳೀಯ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಮಂದಿರದಲ್ಲಿ ಗಣಹೋಮ ಮತ್ತು ಮೂಲಸ್ಥಾನದಲ್ಲಿ ಶ್ರೀ ಶನೈೀಶ್ವರನ ಆರಾಧನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 50ನೇ ವಾರ್ಷಿಕ ಉತ್ಸವ ಶ್ರದ್ಧಾಪೂರ್ವಕವಾಗಿ ಆಚರಿಸಲ್ಪಟ್ಟಿತು.

ವಾರ್ಷಿಕೋತ್ಸವದ ಶುಭಾವಸರ ನಿಮಿತ್ತ ಬೆಳಿಗ್ಗೆ ಮುಂಜಾನೆ ಗಣಹೋಮ, ಬೆಳಿಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ, ಭಜನೆ, ಪೂರ್ವಾಹ್ನ ಕಲಶ ಮುಹೂರ್ತ, ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ, ಮಧ್ಯಾಹ್ನ ಅನ್ನಸಂತರ್ಪನೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ರಾತ್ರಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು.

ಪುರೋಹಿತ ಎಸ್.ಜೋಯೀಷ್ ಕಟೀಲು ಮತ್ತು ಮಂದಿರದ ಆರ್ಚಕ ನಾಗೇಶ್ ಸುವರ್ಣ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತರಿಗೆ ಗಂಧ ಪ್ರಸಾದವನ್ನಿತ್ತು ಹರಸಿದರು. ಅನುಗ್ರಹಿಸಿದರು. ಲೀಲಾ ಯೋಗೇಶ್ ಹೆಜ್ಮಾಡಿ, ಗೀತಾ ಲಕ್ಷ್ಮಣ ದೇವಾಡಿಗ ಮತ್ತು ಪ್ರೀತಿ ಆಶೀಶ್ ಸಾಲ್ಯಾನ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಪೂಜಾಧಿಗಳು ಮತ್ತು ಸಾಮೂಹಿಕ ಶನೀಶ್ವರ ಗ್ರಂಥ ಪರಾಯಣದಲ್ಲಿ ಪಾಲ್ಗೊಂಡ ಶ್ರೀ ಶನೈೀಶ್ವರನ ಕೃಪೆಗೆ ಪಾತ್ರರಾದರು.

ಸಂಜೆ ಖಾರ್ ಪೂರ್ವದಲ್ಲಿನ ಲಕ್ಷಿ ್ಮೀ ನಿವಾಸದ ಸಭಾಗೃಹದಲ್ಲಿ ನೃತ್ಯ ವೈಭವ, ಸಭಾ ಕಾರ್ಯಕ್ರಮ ನಂತರ ಗುರು ನಾರಾಯಣ ಯಕ್ಷಗಾನ ಮಂಡಳಿಯಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

ಈ ಶುಭಾವಸರದಲ್ಲಿ ಸಮಿತಿ ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಸಿ.ಎನ್ ಶೆಟ್ಟಿ, ರಮೇಶ್ ಎನ್.ಪೂಜಾರಿ, ಜಯರಾಮ ಶೆಟ್ಟಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಸಮಿತಿ ಮುಖ್ಯಸ್ಥರುಗಳಾದ ಕೇಸರಿ ಬಿ.ಅಮೀನ್, ಶೋಭ ವಿ.ಕೋವಾಮನ್ ಎಸ್.ಸಾಲ್ಯಾನ್, ಆರ್.ಜಿ ಕೋಟ್ಯಾನ್, ನರಸಿಂಹ ಸಾಲ್ಯಾನ್, ನಾರಾಯಣ ಕೋಟ್ಯಾನ್, ಭೋಜ ಸಿ.ಪೂಜಾರಿ, ಕೃಷ್ಣ ಕುಲಾಲ್, ಗಿರೀಶ್ ಪೂಜಾರಿ, ಯುವ ವಿಭಾಗದ ಸದಸ್ಯರು ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಸುವರ್ಣ ಮಹೋತ್ಸವ ನಿಮಿತ್ತ ಬರುವ ಆದಿತ್ಯವಾರ (ಫೆ.05) ರಂದು ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಅಪರಾಹ್ನ 2.00 ಗಂಟೆಯಿಂದ ಸಮಿತಿಯ ಸದಸ್ಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಿರು ನಾಟಕ ಹಾಗೂ ಸುವರ್ಣ ಸಂಭ್ರಮ ನಡೆಸಿ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಗುವುದು ಎಂದು ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here