Tuesday 17th, May 2022
canara news

ದಹಿಸರ್‍ನ ಕಾಶೀ ಮಠದಲ್ಲಿ ನೆರವೇರಿದ ರಾಜಾಪುರ ಸಾರಸ್ವತ ಉತ್ಸವ

Published On : 30 Jan 2017   |  Reported By : Rons Bantwal


ಸಾರಸ್ವತರೆಲ್ಲ ಒಂದಾಗೋಣ ಓಟ್ಟಾಗಿ ಇರೋಣ-ಮೋಹನದಾಸ್ ಮಲ್ಯ

ಮುಂಬಯಿ, ಜ.30: ಸಾರಸ್ವತರೆಲ್ಲರೂ ಒಂದಾಗಿ ಇರುವುದು ಮಾತ್ರವಲ್ಲದೆ ಓಟ್ಟಾಗಿ ಇರಬೇಕು ಮತ್ತು ಸಮಾಜದ ಪ್ರಗತಿಗಾಗಿ ಒಂದಾಗಿ ದುಡಿಯಬೇಕು ಆವಾಗಲೇ ಮಹತ್ತರವಾದ ಕಾರ್ಯಗಳನ್ನೂ ಸಾಧಿಸ ಬಹುದು ಎಂದು ದಹಿಸರ್‍ನ ಕಾಶೀ ಮಠದ ಶ್ರೀ ವಿಠ್ಠಲ ರಖುಮಾಯಿ ಮಂದಿರದ ಅಧ್ಯಕ್ಷ ಮೋಹನದಾಸ್ ಪಿ.ಮಲ್ಯ ಅವರು ಕಾಶೀ ಮಠದಲ್ಲಿ ಜರಗಿದ ರಾಜಾಪುರ ಸಾರಸ್ವತ ಉತ್ಸವ ಸಮಾರಂಭದಲ್ಲಿ ಸನ್ಮಾನಕ್ಕೆ ಪ್ರತಿಕ್ರಿಯೆಯಾಗಿ ನುಡಿದರು. ಮಾತ್ರವಲ್ಲೆದೆ ಹಲವಾರು ರಿಯಾಯಿತಿಗಳನ್ನೂ ರಾಜಾಪುರ ಸಾರಸ್ವತ ಸಮಾಜಕ್ಕೆ ಘೋಷಿಸಿದರು.

ಸಂಘದ ಅಧ್ಯಕ್ಷ ಪ್ರಭಾಕರ್ ಡಿ.ಬೋರ್ಕರ್ ಅವರು ಸಂಘದ ವತಿಯಿಂದ ಮಲ್ಯ ಅವರನ್ನು, ಸಮಾಜ ಸೇವಕ ಹಾಗೂ ಪತ್ರಕರ್ತ ಪಿ.ಆರ್ ರವಿಶಂಕರ್ ಡಹಾಣು, ಸಿಡ್ಕೋ ಸೂಪರಿಂಟೆಂಡೆಂಟ್ ಇಂಜಿನಿಯರ್ ರಾಜಾರಾಮ್ ಎಸ್.ನಾಯಕ್ ಮುಲುಂಡ್, ಮ್ಯಾರಥಾನ್ ಪ್ರಸಿದ್ದಿ ಸುಧಾಕರ್ ಸಾಲವಂಕರ್ ಡಹಾಣು ಹಾಗೂ ನ್ಯಾಶನಲ್ ಪಂದ್ಯ ಪದಕ ವಿಜೇತೆ ಕುಮಾರಿ ಕಾಡತಾಲ ಕೃಪಾ ಕೆ.ನಾಯಕ್ ಕಲ್ಯಾಣ್ ಅವರನ್ನೂ ಶಾಲು ಹೊದಿಸಿ ಪುಷ್ಪಗುಚ್ಛ ಹಾಗೂ ಸ್ಮ್ರಿತಿಚಿನ್ನೆಹೊಂದಿಗೆ ಸತ್ಕರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸುಮಾರು 206 ವಿದ್ಯಾಥಿರ್üಗಳಿಗೆ ವಿದ್ಯಾಥಿರ್üವೇತನ ವಿತರಿಸಲಾಯಿತು. ಸಂಘದ ಮಹಿಳಾ ಮಂಡಳಿ ಭಜನಾ ಕಾರ್ಯಕ್ರಮ, ಯುವವೃಂದ ಸದಸ್ಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಜರಗಿದಲ್ಲದೆ ರಕ್ತ ಶಿಬಿರವನ್ನೂ ಆಯೋಜಿಸಲಾಗಿತ್ತು. ಸಂಘದ ಕಾರ್ಯಾದರ್ಶಿ ಪೂಜಾ ಜೆ.ಕಾಮತ್ ಕಾರ್ಯಕ್ರಮ ನಿರೂಪಣೆಗೈದು ವಂದಿಸಿದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here