Wednesday 18th, May 2022
canara news

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ `ಸಾಹಿತ್ಯ ಸಹವಾಸ-2017ಸಂಭ್ರಮ'

Published On : 31 Jan 2017   |  Reported By : Rons Bantwal


ಸಾಮಾನ್ಯ ವಿದ್ಯಾಥಿ೯ಗಳ ಶ್ರೇಷ್ಠ ಸಾಧನೆಯೇ ನಿಜವಾದ ಫಲಿತಾಂಶ : ಜಸ್ಟೀಸ್ ಶಿವರಾಜ್ ಪಾಟೀಲ್

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.31: ಉತ್ತಮ ಅಥವಾ ಅತ್ಯುತ್ತಮ ವಿದ್ಯಾಥಿ೯ಗಳನ್ನು ಅತ್ಯಂತ ಶ್ರೇಷ್ಠ ಶ್ರೇಣಿಗಳಲ್ಲಿ ಪಾಸು ಮಾಡಿಸುವ ವಿದ್ಯಾಸಂಸ್ಥೆಗಲನ್ನು ಶ್ರೇಷ್ಠ ಸಂಸ್ಥೆಗಳು ಎನ್ನಲಾಗದು. ಕನಿಷ್ಠ ಮತ್ತು ಏನೂವಿಲ್ಲದ ಕಡು ಬಡತನದ ಹಿನ್ನಲೆಯ ವಿದ್ಯಾಥಿರ್üಗಳನ್ನು ಉತ್ತಮ ಮಟ್ಟದಲ್ಲಿ ತಯಾರು ಮಾಡುವ ವಿದ್ಯಾಲಯಗಳೇ ನಿಜವಾದ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು. ಸಾಮಾನ್ಯ ವಿದ್ಯಾಥಿರ್üಗಳನ್ನು ಅಸಮಾನ್ಯರಾಗಿ ಪರಿವರ್ತಿಸುವುದೇ ಶ್ರೇಷ್ಠ ವಿದ್ಯಾಸಂಸ್ಥೆಗಳ ಅರ್ಹತೆ ಆಗಬೇಕು. ಸಾಮಾನ್ಯ ವಿದ್ಯಾಥಿರ್üಗಳಿಂದ ಶ್ರೇಷ್ಠ ಫಲಿತಾಂಶವೇ ನಿಜವಾದ ಸಾಧನೆ ಇದಕ್ಕೆ ಅತ್ಯುತ್ತಮ ಮಾದರಿ ಚೆಂಬೂರು ಕರ್ನಾಟಕ ಸಂಘದ ವಿದ್ಯಾಸಂಕುಲ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ, ಭಾರತ ರಾಷ್ಟ್ರದ ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಡಾ| ಜಸ್ಟೀಸ್ ಶಿವರಾಜ್ ವಿ.ಪಾಟೀಲ್ ಪ್ರಶಂಸಿಸಿದರು.

ಕಳೆದ ಶನಿವಾರ ಸಂಜೆ ಚೆಂಬೂರು ಘಾಟ್ಲಾ ವಿಲೇಜ್‍ನಲ್ಲಿನ ಚೆಂಬೂರು ಕರ್ನಾಟಕ ಹೈಸ್ಕೂಲ್ ಸಂಕುಲದಲ್ಲಿ ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯವು ತನ್ನ ವಾರ್ಷಿಕ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ `ಸಾಹಿತ್ಯ ಸಹವಾಸ-2017 ಸಂಭ್ರಮ' ವನ್ನು ಸಂಭ್ರಮಿಸಿದ್ದು, ಸಂಘದ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಅಧ್ಯಕ್ಷತೆಯಲ್ಲಿ ನಡೆಸಲ್ಪ ಟ್ಟ ಕಾರ್ಯಕ್ರಮವನ್ನು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಜಸ್ಟೀಸ್ ಪಾಟೀಲ್ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.

ಚೆಂಬೂರು ಮಹಾನಗರದಲ್ಲಿನ ಮುಖ್ಯಪ್ರದೇಶದಲ್ಲಿದ್ದರೂ ಸುತ್ತಲಿನ ಕಡುಬಡತನದ ಹಿನ್ನಲೆಯ ಉಪೇಕ್ಷಿತ ವರ್ಗದ ವಿದ್ಯಾಥಿ೯ಗಳನ್ನು ಹೊಂದಿರುವ ಈ ಶಾಲೆ ಶೇಕಡಾ ನೂರರಷ್ಟು ತೇರ್ಗಡೆ ಸಾಧಿಸುವುದು ಎಂದರೆ ಅದು ಚೆಂಬೂರು ಕರ್ನಾಟಕ ಸಂಘದ ಆಡಳಿತ ಮಂಡಳಿ, ಶಿಕ್ಷಕವರ್ಗದ ಬದ್ಧತೆ ಮತ್ತು ಕಠಿಣ ಪರಿಶ್ರಮದ ಸತ್ಫಲ ಎಂದು ಪಾಟೀಲ್ ಮುಕ್ತಕಂಠದಿಂದ ಶ್ಲಾಘಿಸಿದರು. ಕರ್ನಾಟಕದ ಹಲವೆಡೆಯ ವಿದ್ಯಾಸಂಸ್ಥೆಗಳನ್ನು ತಿಳಿದರೂ ಈ ಸಂಸ್ಥೆಯ ವೈಶಿಷ್ಟ ್ಯತೆಯನ್ನು ಮೆಚ್ಚಿ ನನ್ನದಾದ ಕಿಂಚಿತ್ತು ಸೇವೆಯ ಅವಕಾಶವಿರಲಿ ಎಂದು ನುಡಿದ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ವಿಜೆತÀ, `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2016'ಕ್ಕೆ ಭಾಜನರಾದ ಜಸ್ಟೀಸ್ ಪಾಟೀಲ್ ಒಂದು ಲಕ್ಷ ದೇಣಿಗೆಯನ್ನು ಚೆಂಬೂರು ಕರ್ನಾಟಕ ಸಂಘಕ್ಕೆ ತನ್ನ ಪರವಾಗಿ ನೀಡಿದರು.

ಸಂಘದ ಉಪಾಧ್ಯಕ್ಷ ಪ್ರಭಾಕರ್ ಟಿ.ಬೋಳಾರ್, ಮಾಜಿ ಅಧ್ಯಕ್ಷ ಜಯ ಎನ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಉಪಸ್ಥಿತ ಪದಾಧಿಕಾರಿಗಳನ್ನೊಂಳಗೊಂಡು ಜಸ್ಟೀಸ್ ಪಾಟೀಲ್ ಸಂಘವು ವಾರ್ಷಿಕವಾಗಿ ಕೊಡಮಾಡುವ `ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2017' ಪುರಸ್ಕಾರವನ್ನು ಬೆಂಗಳೂರು ದೂರದರ್ಶನ ಕೇಂದ್ರದ ದಕ್ಷಿಣ ವಿಭಾ ಗೀಯ ಹೆಚ್ಚುವರಿ ಪ್ರಧಾನ ನಿರ್ದೇಶಕ ನಾಡೋಜ ಡಾ| ಮಹೇಶ್ ಜೋಶಿ ಅವರಿಗೆ, ಸಂಘದ ವಾರ್ಷಿಕ `ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ'ಯನ್ನು ಶೈಕ್ಷಣಿಕ ಕ್ಷೇತ್ರದ ನಿಷ್ಠಾವಂತ ಶಿಕ್ಷಕಿಯಾಗಿರುವ ನಿವೃತ್ತ ಶಿಕ್ಷಕಿ ಶುಭಾಸಿನಿ ಎಸ್.ಹೆಗ್ಡೆ ಅವರಿಗೆ, `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ'ಯನ್ನು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಪ್ರಸಿದ್ಧ ಸಾಹಿತಿ, ಪ್ರಕಾಶಕ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಹಾಗೂ ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನ ಮಾಜಿ ಆಡಳಿತ ಮುಖ್ಯಸ್ಥ ಜಿ.ಟಿ ಆಚಾರ್ಯ ಅವರಿಗೆ (ಪತ್ನಿ ಉಷಾ ಗೋಪಾಲಕೃಷ್ಣ ಅವರನ್ನೊಳಗೊಂಡು) `ಸುಬ್ಬಯ್ಯ ಶೆಟ್ಟಿ ದತ್ತಿ' ಗೌರವ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಚೆಂಬೂರು ಕರ್ನಾಟಕ ಸಂಘದ ಸೇವಾ ವೈಖರಿ ಅವಲೋಕಿಸಿದಾಗ ಇಲ್ಲಿನ ಕನ್ನಡಿಗರ ಸೇವೆ ನಿಜವಾದ ಕನ್ನಡಮಾತೆ ಮೆಚ್ಚುವ ಸೇವೆಯಾಗಿದೆ. ಎಲ್ಲಿವರೇಗೆ ಕನ್ನಡತನ, ಕನ್ನಡದ ಮನಸ್ಸುಗಳು ಇವೆಯೋ ಅವೇ ಕನ್ನಡದ ಊರು ಮತ್ತು ಕನ್ನಡಿಗರ ಊರು. ಹಾಗೆ ನೋಡಿದರೆ ಚೆಂಬೂರು ಹೆಸರೇ ತಿಳಿಸುವಂತೆ ಇದು ಕನ್ನಡದ ಊರು ಎಂದು ಡಾ| ಮಹೇಶ್ ಜೋಶಿ ಭಾವುಕರಾಗಿ ಬಣ್ಣಿಸಿದರು.

ಶುಭಾಸಿನಿ ಹೆಗ್ಡೆ ಪ್ರಶಸ್ತಿಗೆ ಉತ್ತರಿಸಿ ಬಹುಭಾಷೀಯ ರಾಷ್ಟ್ರದಲ್ಲಿ ಶಿಕ್ಷಣ ಮಾದ್ಯಮದಲ್ಲಿನ ಭಾಷಾ ಕೀಳರಿಮೆ ಸಲ್ಲದು. ಭವಿಷ್ಯ ರೂಪಿಸುವ ವಿದ್ಯಾಲಯಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಹಿಸಬೇಕೇ ಹೊರತು ಭಾಷಾವೈಷಮ್ಯ ಭಿತ್ತಬಾರದು. ಪಾಲಕರಾಗಲೀ, ಶಿಕ್ಷಕರಾಗಲೀ ಮುನ್ಸಿಪಾಲಿಟಿ, ಸರಕಾರಿ, ಖಾಸಾಗಿ ವಿದ್ಯಾಲಯಗಳೆಂಬ ತಾರತಮ್ಯದ ವ್ಯವಸ್ಥೆಯಿಂದ ಮುಕ್ತರಾಗಿ ಸಾಮರಸ್ಯದ ಬದುಕಿಗೆ ಪ್ರೇರಕರಾಗಬೇಕು. ಅಂತಹ ಸೇವಾ ಪ್ರಯತ್ನಕ್ಕೆ ಸ್ಪಂದಿಸಿದ ಫಲವೇ ಈ ಗೌರವ ಎಂದು ಭಾವಿಸುತ್ತೇನೆ ಎಂದರು.

ರಾಷ್ಟ್ರದ ರಾಜಧಾನಿಯಿಂದ ದೇಶದ ಆಥಿ೯ಕ ರಾಜಧಾನಿಗೆ ಬರಮಾಡಿಸಿ ಕೊಂಡು ನೀಡಿದ ಗೌರವಕ್ಕೆ ಋಣಿಯಾಗಿದ್ದೇನೆ. ಇದು ನನ್ನಪಾಲಿನ ನಿಜರ್ಥದ ಸತ್ಕಾರವೇ ಸರಿ. ಪ್ರಶಸ್ತಿಗೆ ಆಯ್ಕೆಗೊಳಿಸಿದ ಸರ್ವರಿಗೂ ಅಭಾರಿಯಾಗಿದ್ದೇನೆ ಎಂದು ಪ್ರಶಸ್ತಿ ಆದರಿಸಿ ವಸಂತ ಬೆಳ್ಳಾರೆ ಉತ್ತರಿಸಿದರು.

ಯಕ್ಷಗಾನ ಎನ್ನುವುದು ಆರಾಧನಾ ಕಲೆ. ರಾಮಾಯಣ, ಮಹಾಭಾರತ ಮುಂತಾದ ನಮ್ಮ ಮೂಲ ಗ್ರಂಥಗಳನ್ನು ಶಾಲಾ ಮೆಟ್ಟಲೇರದ ಕಲಾವಿದರು ಇಂತಹ ಕಲೆಯ ಮುಖೇನ ಧರ್ಮಜಾಗೃತಿ ಮೂಡಿಸಿದ್ದಾರೆ. ಆದುದರಿಂದ ಯಕ್ಷಗಾನದ ಪ್ರತೀಯೊಂದು ಪಾತ್ರಕ್ಕೂ ತನ್ನದೇಯಾದ ಮಹತ್ತರವಾದ ವಿಶೇಷತೆವಿದೆ. ತನ್ನದೇ ಆದ ಭಾಷಾ ಗೌರವ, ಸಂಸ್ಕಾರವಿದೆ. ಆದುದರಿಂದ ಯಕ್ಷಗಾನದ ಪೆÇೀಷಣೆ ಪ್ರತೀಯೋರ್ವ ಭಾರತೀಯರ ಕರ್ತವ್ಯವಾಗಬೇಕು. ಈ ಕಲೆಯೇ ಈ ನನ್ನ ಗೌರವಕ್ಕೆ ಅಡಿಪಾಯವಾಗಿದೆ ಎಂದು ಜಿ.ಟಿ ಆಚಾರ್ಯ `ಸುಬ್ಬಯ್ಯ ಶೆಟ್ಟಿ ದತ್ತಿ' ಗೌರವ ಸ್ವೀಕರಿಸಿ ನುಡಿದರು.

ಸಂಘವು ಆಯೋಜಿಸುತ್ತಿರುವ ವಾರ್ಷಿಕ ಸಾಹಿತ್ಯ ಸಹವಾಸ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ಪ್ರದಾನಿಸುವ ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ, ದತ್ತಿ ಗೌರವ ಅಥವ ಉಪನ್ಯಾಸ ಇತ್ಯಾದಿಗಳು ಕನ್ನಡಾಂಭೆಯ ಮಕ್ಕಳನ್ನು ಒಗ್ಗೂಡಿಸುವ ಪ್ರಯತ್ನ ಮಾತ್ರವಲ್ಲ ನಮ್ಮಲ್ಲಿನ ಏಕತೆ ಸಾರುವ ಕಾರ್ಯಕ್ರಮಗಳಾಗಿವೆ. ಅರ್ಹ ಗಣ್ಯರನ್ನು ಪುರಸ್ಕರಿಸುವ ಈ ಸಂಘವು ದೂರದೃಷ್ಠಿತ್ವವನ್ನು ಹೊಂದಿಗೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ರೂಪಿಸುವಲ್ಲಿ ಶ್ರಮಿಸುವ ಸಂಘವು ತನ್ನದೇ ಆದ ಪ್ರತಿಷ್ಠೆಯನ್ನು ರೂಪಿಸಿಕೊಂಡಿದೆ. ನಮ್ಮ ಸಾಧನೆಗೆ ಈ ವೇದಿಕೆಯೇ ಸಾಕ್ಷಿಯಾಗಿದೆ ಎಂದು ಅಧ್ಯಕ್ಷೀಯ ನುಡಿಗಳನಾಡಿ ಸುಧಾಕರ್ ಅರಾಟೆ ತಿಳಿಸಿದರು.

ವಿದ್ಯಾಥಿರ್ü ಮಾ| ಮನೀಷ್ ಗೌಡ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆದಿಗೊಂಡಿತು. ಸಂಘದ ಉಪಾಧ್ಯಕ್ಷ ಪ್ರಭಾಕರ್ ಟಿ. ಬೋಳಾರ್, ಗೌ| ಪ್ರ| ಕಾರ್ಯದರ್ಶಿ ರಂಜನ್‍ಕುಮಾರ್ ಅಮೀನ್ ಸ್ವಾಗತಿಸಿದರು. ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ದಯಸಾಗರ್ ಚೌಟ ಅತಿಥಿ, ಸನ್ಮಾನಿತರÀನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಟಿ.ಆರ್ ಶೆಟ್ಟಿ ಅಭಾರ ಮನ್ನಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜತೆ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಜತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ್ ಸಾಲ್ಯಾನ್, ವಿಶ್ವನಾಥ ಶೇಣವ, ಗುಣಾಕರ ಹೆಚ್.ಹೆಗ್ಡೆ, ಸುಧೀರ್ ಪುತ್ರನ್, ಯೋಗೇಶ್ ಗುಜರನ್, ಮಧುಕರ್ ಜಿ.ಬೈಲೂರು, ರಾಮ ಪೂಜಾರಿ, ಸುಧಾಕರ ಅಂಚನ್, ಮೋಹನ್ ಕೆ.ಕಾಂಚನ್, ಚಂದ್ರಶೇಖರ ಎ.ಅಂಚನ್, ಜಯ ಎಂ.ಶೆಟ್ಟಿ, ಸುಧೀರ್ ಪುತ್ರನ್, ಸಂಜೀವ ಎನ್.ಶೆಟ್ಟಿ ಸೇರಿದಂತೆ ನೂರಾರು ಶಿಕ್ಷಣಾಭಿಮಾನಿಗಳು, ತುಳು-ಕನ್ನಡಿಗ ಬಾಂಧÀುಗಳು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾಥಿರ್üಗಳು ಮತ್ತು ವಿವಿಧ ವಿನೋದಾವಳಿಗಳನ್ನು, ಶಿಕ್ಷಕಿ ವಿಜೇತ ಸುವರ್ಣ ಮತ್ತು ಬಳಗವು ಕರ್ನಾಟಕ ವೈಭವ ಕಾರ್ಯಕ್ರಮವನ್ನು, ವಿದ್ವಾನ್ ಕೋಲಾರ ರಮೇಶ್, ಪದ್ಮನಾಭ ಸಹಿಹಿತ್ಲು ಮತ್ತು ತಂಡವು ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಸಾರುವ ಸಂಸ್ಕೃತಿ ಉತ್ಸವ ಪ್ರಸ್ತುತ ಪಡಿಸಿದರು.

 

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here