Saturday 5th, July 2025
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಕಾರ್ಯಕ್ರಮ

Published On : 01 Feb 2017   |  Reported By : Rons Bantwal


ಮುಂಬಯಿ, ಜ.31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಕಾರ್ಯಕ್ರಮ ಕಳೆದ ರವಿವಾರ ಸ್ಥಳೀಯ ಕಚೇರಿಯ ಸಭಾಗ್ರಹದಲ್ಲಿ ಬಹಳ ಸಂಭ್ರಮದಲ್ಲಿ ಜರುಗಿತು. ಪ್ರಾರಂಭದಲ್ಲಿ ಪುರೋಹಿತ ಐತಪ್ಪ ಸುವರ್ಣರವರು ಗುರು ಪೂಜೆಯನ್ನು ನೆರವೇರಿಸಿತು.

ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮುಖ್ಯ ಅಥಿತಿಯಾಗಿ ಶೈಲಾ ರಾಜ್ (ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್, ಭಾರತಿ ಅಕ್ಷ್), ಗೌರವ ಅಥಿತಿಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ.ಬಂಗೇರ , ಗೌರವ ಕಾರ್ಯದರ್ಶಿ ಸುಮಿತ್ರಾ ಬಂಗೇರ ಹಾಗೂ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಕರ್ತೆಯರಾದ ಪ್ರೇಮ ಕೆ. ಪೂಜಾರಿ, ಯಶೋದ ಕೆ. ಕರ್ಕೇರ, ದೇವಕಿ ಸಾಲ್ಯಾನ್, ಹೇಮಲತಾ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತದನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದೇವರಾಜ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇವಕಿ ಸಾಲ್ಯಾನ್ ಸ್ವಾಗತಿಸಿದರು. ಪ್ರೇಮ ಕೆ.ಪೂಜಾರಿ ವ್ಯಕ್ತಿ ಪರಿಚಯ ನೀಡುತ್ತಾ ಫುಷ್ಪಗುಚ್ಚವಿತ್ತು ಗೌರವಿಸಿದರು.

ಹಿರಿಯ ಕಾರ್ಯಕರ್ತೆ ಗುಲಾಬಿ ಬಾಬು ಪೂಜಾರಿಯರು ಹರಸಿನ ಕುಂಕುಮದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.

ಶಕುಂತಲಾ ಕೋಟ್ಯಾನ್ ಮಾತನಾಡುತ್ತಾ ಡೊಂಬಿವಲಿ ಸ್ಥಳೀಯ ಸಮಿತಿಯು ಎಲ್ಲದರಲ್ಲಿಯೂ ಮುಂದೆ ಇದ್ದು ಇನ್ನೂ ಮುಂದೆಯೂ ಸಹ ಎಲ್ಲರೂ ಒಟ್ಟಾಗಿ ಒಂದೇ ಮನಸ್ಸಿನಿಂದ ಸಮಾಜ ಪರ ಕೆಲಸ ಮಾಡಬೇಕೆಂದು ಕರೆ ಕೊಟ್ಟರು. ಪ್ರಭಾ ಬಂಗೇರ ಅವರು ಗ್ರಹಿಣಿಯರಿಗೆ ಕೆಲವು ಮಹತ್ವದ ಸೂಚನೆಯನ್ನು ತಿಳಿಸಿದರು. ಸುಮಿತ್ರಾ ಬಂಗೇರ ಹಾಗೂ ಶೈಲಾ ರಾಜ್ ಬಿಲ್ಲವರ ಅಸೋಸಿಯೇಶನ್‍ಮಹಿಳೆಯರಿಗೆ ಮಕರ ಸಂಕ್ರಾತಿಯ ಶುಭಾಶಯ ನೀಡಿದರು

ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಿದ ದಾನಿಗಳಾದ ಚಾಂದಿನಿ ಜೆ.ಬಂಗೇರ, ವೀಣಾ ಚಂದ್ರಹಾಸ್ ಪಾಲನ್, ಕುಶಾ ರವಿ ಸನಿಲ್, ಗುಲಾಬಿ ಬಾಬು ಪೂಜಾರಿ, ಲೀಲಾವತಿ ಎ.ಸಾಲ್ಯಾನ್, ಹೇಮಾ ದೇವರಾಜ್ ಪೂಜಾರಿ, ಪ್ರೇಮ ಕೆ. ಪೂಜಾರಿ, ದೇವಿಕಾ ಸಾಲ್ಯಾನ್ ಹಾಗೂ ಇತರರಿಗೆ ಹಾಗೂ ಕಲ್ವಾ, ಭಿವಂಡಿ ಮತ್ತು ಕಲ್ಯಾಣ್‍ನಿಂದ ಆಗಮಿಸಿದ್ದ ಸ್ಥಳೀಯ ಸಮಿತಿಯ ಮಹಿಳೆಯರಿಗೆ ಫುಷ್ಪಗುಚ್ಚ ನೀಡಿ ಗೌರವಿಸಲಾಯಿತು.

ದೇವರಾಜ್ ಪೂಜಾರಿ ಮಾತನಾಡಿ ಸಂಖ್ಯೆಯಲ್ಲಿ ಸುಮಂಗಲೆಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗುವಂತೆ ಮಾಡಿದುದಕ್ಕೆ ಕೃತಜ್ಞತೆ ಸಲ್ಲಿಸಿದರು. ಹೇಮಲತಾ ಸುವರ್ಣ ಹರಸಿನ ಕುಂಕುಮ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ನೀಡಿದರು. ಯಶೋಧ ಕೆ. ಕರ್ಕೇರರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಮಹಿಳೆಯರು ಹರಸಿನ ಕುಂಕುಮ ನೀಡಿ ಸಂಭ್ರಮಿಸಿದರು. ಎಲ್ಲರಿಗೂ ನೆನಪಿನ ಬಾಗಿನ , ಎಳ್ಳಿನ ಉಂಡೆ ಹಾಗೂ ಸಿಹಿತಿಂಡಿ ನೀಡಲಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here