ಮಹಿಳೆಯರು ಅಬಲೆಯರು ಎಂಬ ಚಿಂತನೆ ಸಲ್ಲದು: ಸುಜತಾ ಜಿ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.31: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವಾರ್ಷಿಕವಾಗಿ ನೆರವೇರಿಸುವ ಅರಸಿನ ಕುಂಕುಮ ಕಾರ್ಯಕ್ರಮ ಇಂದಿಲ್ಲಿ ಮಂಗಳವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಜರುಗುಗಿದ್ದು ಮುಖ್ಯ ಅತಿಥಿಯಾಗಿ ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ಐಕಳ ಸುಜತಾ ಗುಣಪಾಲ ಶೆಟ್ಟಿ ಉಪಸ್ಥಿತರಿದ್ದು ದೀಪ ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಮಾರ್ಗದರ್ಶನದಲ್ಲಿ ನೆರವೇರಿಸಲಾದ ಕಾರ್ಯಕ್ರಮದ ಸಭಾಧ್ಯಕ್ಷತೆ ಮಹಿಳಾ ವಿಭಾಗದ ಸುಧಾ ಎಲ್ವೀ ಅವಿೂನ್ ವಹಿಸಿದ್ದು, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ್ ಶೆಟ್ಟಿ, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಕೈರಬೆಟ್ಟು ಸುಮಾ ವಿಶ್ವನಾಥ್ ಭಟ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಸಮಾಜ ಸೇವಕಿಯರುಗಳಾದ ರತ್ನಾ ಪ್ರಭಾಕರ್ ಶೆಟ್ಟಿ, ಪ್ರಶಾಂತಿ ಡಿ.ಶೆಟ್ಟಿ, ಯಶೋದಾ ಬಿ.ಪೂಂಜ, ಸುಜಾತ ರಮೇಶ್ ಕೋಟ್ಯಾನ್, ಹರಿಣಾಕ್ಷೀ ಎಸ್.ಶೆಟ್ಟಿ ಅತಿಥಿüಗಳಾಗಿ ಉಪಸ್ಥಿತರಿದ್ದರು.
ಸುಜತಾ ಗುಣಪಾಲ ಶೆಟ್ಟಿ ಮಾತನಾಡಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಮಕರ ಸಂಕ್ರಾಂತಿ ಮೊದಲಾಗಿ ಸರ್ವರಲ್ಲೂ ಶಾಂತಿ ರೂಪಿಸಲಿ. ಮಹಿಳೆಯರು ಸಕ್ರೀಯತೆಯಿಂದಲೇ ಮಾತ್ರ ಸಂಸ್ಕೃತಿಗಳ ಉಳಿವು ಸಾಧ್ಯ. ಆದುದರಿಂದ ಅಂತೆಯೇ ಗೃಹಿಣಿಯು ಸಂಸ್ಕಾರಯುತ ಜೀವನದ ಧೀಶಕ್ತಿಯಾಗಿದ್ದಾಳೆ. ಸಂಸ್ಕಾರಕ್ಕೆ ಆಚರಣೆಗಳೇ ಅಡಿಪಾಯವಾಗಿವೆ. ಸಂಸ್ಕೃತಿಯ ಅಲಂಕಾರ ಮಹಿಳೆಯಿಂದ ಸಾಧ್ಯವೋ, ಇಂತಹ ಅರಸಿನ ಕುಂಕುಮ ಆಚರಣೆಗಳಿಂದ ಪಾಶ್ಚತ್ಯ ಸಂಸ್ಕೃತಿಯ ಅಂಧಕಾರ ಹೋಗಲಾಡಿಸಲು ಸಾಧ್ಯ. ಆಧುನಿಕ ಯುಗದ ಮುನ್ನಡೆಯಲ್ಲಿ ಸ್ತ್ರೀಶಕ್ತಿ ಸಮಾನವಾಗಿದ್ದು ಮಹಿಳೆಯರು ಅಬಲೆಯರೆಂಬ ಮನೋಭಾವ ಸಲ್ಲದು ಎಂದÀು ಕರೆಯಿತ್ತರು.
ಲತಾ ಪಿ.ಶೆಟ್ಟಿ ಮಾತನಾಡಿ ಅರಶಿನ ಮತ್ತು ಕುಂಕುಮ ಪವಿತ್ರ್ಯತೆಯ ಸಂಕೇತ. ಕಾರ್ಯಕ್ರಮ ಮಹಿಳೆಯರ ಪಾಲಿಗೆ ಮಹತ್ತರದ್ದಾಗಿದೆ. ಸ್ತ್ರೀಯರು ಸಹಭಾಗಿಗಳಾಗಿ ಪುಣ್ಯತೆ ಪಡೆದುಕೊಳ್ಳಬೇಕು ಎಂದರು.
ಬರೇ ಕಷ್ಟಗಳನ್ನು ಬಂದಾಗ ದೇವರನ್ನು ಮೊರೆ ಹೋಗದೆ ದೈನಂದಿನವಾಗಿ ದೇವರನ್ನು ಕೀರ್ತನೆ, ಭಜನೆ, ಪೂಜಾಧಿಗಳೊಂದಿಗೆ ಸ್ತುತಿಸಬೇಕು. ಇವೆಲ್ಲವನ್ನೂ ಮಕ್ಕಳಲ್ಲೂ ಬೋಧಿಸಿ ಅವರಲ್ಲೂ ಭಕ್ತಿಯ ಜೀವನ ರೂಪಿಸುವ ಪ್ರಯತ್ನ ಮಾತೆಯರ ಪರಮ ಕರ್ತವ್ಯ ಆಗಬೇಕು. ಆವಾಗಲೇ ನಮ್ಮ ಮಕ್ಕಳೂ ಸಂಸ್ಕಾರದ ಬದುಕನ್ನು ಅವಲಂಬಿಸಲು ಸಾಧ್ಯ ಎಂದು ಶಕುಂತಳಾ ಕೋಟ್ಯಾನ್ ನುಡಿದರು.
ಎಲ್.ವಿ ಅವಿೂನ್ ಮಾತನಾಡಿ ಸಂಸಾರಿಕ ಬದುಕಿಗೆ ಅರಿವು ಮೂಡಿಸುವ ಶಾಸ್ತ್ರವೇ ಸಂಸ್ಕೃತಿಗಳಾಗಿವೆ. ಇಂತಹ ಸಂಸ್ಕೃತಿ ಸಾರುವ ಕಾರ್ಯಕ್ರಮ ಸಂಘವು ವಾರ್ಷಿಕವಾಗಿ ಹಮ್ಮಿಕೊಳ್ಳುತ್ತಿದೆ. ಈ ಸಂಘದ ನೂರಾರು ಮಹಿಳೆಯರು ಮತ್ತು ಭಗಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅಭಿನಂದನೀಯ. ಇಂತಹ ಆಚರಣೆಗಳು ಮಾನವ ಬದುಕಿನ ಸಂಸ್ಕಾರಕ್ಕೆ ಪೂರಕವಾಗಿದೆ. ನೆರದ ಸರ್ವ ಸ್ತ್ರೀಶಕ್ತಿಗೆ ನನ್ನ ಶುಭೇಚ್ಛಗಳು. ಸುಖಶಾಂತಿ, ನೆಮ್ಮದಿ ನೀಡಿ ಸನ್ಮಂಗಳವನ್ನುಂಟು ಮಾಡಲಿ ಎಂದÀು ಆಶಯವ್ಯಕ್ತ ಪಡಿಸಿದರು.
ಸುಧಾ ಎಲ್ವೀ ಅವಿೂನ್ ಅಧ್ಯಕ್ಷೀಯ ನುಡಿಗಳನ್ನಾಡಿ ಈ ಸಂಘದ ಮಹಿಳಾ ವಿಭಾಗವು ಉತ್ಸಹೀ ಸಂಸ್ಥೆಯಾಗಿದೆ. ಸಾಂಸ್ಕೃತಿಕ ವಿಧಿಗಳು ನೆಮ್ಮದಿಯ ಬಾಳಿಗೆ ಶಕ್ತಿ ನೀಡಬಲ್ಲವು. ಆದುದರಿಂದ ಅರಸಿನ ಕುಂಕುಮದಂತಹ ಕಾರ್ಯಕ್ರಮದ ಮಹತ್ವ ಮಹಿಳೆಯರು ಅರಿಯಬೇಕು. ಇಂತಹ ಪರಂಪರಿಕ ವಿಧಿಗಳನ್ನು ಆಚರಿಸಿದಾಗ ಸರ್ವರಿಗೂ ಆರೋಗ್ಯದಾಯಕ ನೆಮ್ಮದಿಯ ಬಾಳು ಕರುಣಿಸುವುದು. ಇದಕ್ಕಾಗಿ ಮಹಿಳೆಯರು ತಮ್ಮ ಮನೆಮಂದಿ, ಸಾಮಾಜಿಕ ಚಿಂತನೆಯೊಡನೆ ಸಂಸ್ಕೃತಿಯುತ ಬದುಕನ್ನು ರೂಪಿಸಿ ಧನ್ಯರೆಣಿಸಿ ಕೊಳ್ಳಬೇಕು. ಇದಕ್ಕೆ ಇಂತಹ ಕಾರ್ಯಕ್ರಮಗಳು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ವಿದ್ಯಾ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮ ಕೋಟ್ಯಾನ್, ಪ್ರಸನ್ನ ಶೆಟ್ಟಿ, ಲಿಂಗಪ್ಪ ಅವಿೂನ್, ಮಹಿಳಾ ವಿಭಾಗದ ಶಕೀಲಾ ಪಿ.ಶೆಟ್ಟಿ, ಸುಮಾ ಎಂ. ಪೂಜಾರಿ, ವನಿತಾ ವೈ.ನೊಂದಾ, ಶಾಲಿನಿ ಜಿ.ಶೆಟ್ಟಿ, ಉಷಾ ವಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಾರದಾ ಎಸ್.ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿ ದರು. ಹಾಗೂ ಹಾಸ್ಯ ಪ್ರಹಸನ ಮತ್ತು ಬಳಗವನ್ನೊಳಗೊಂಡು ಭಜನೆ ನಡೆಸಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.