Wednesday 18th, May 2022
canara news

ನಮ್ಮ ಸಂವಿಧಾನ ಮಾನವೀಯತೆಯ ಸಿದ್ಧಾಂತಕ್ಕೆ ಬದ್ಧವಾಗಿದೆ ಸಾಹಿತಿ ಕುಲಕರ್ಣಿ

Published On : 01 Feb 2017   |  Reported By : Rons Bantwal


ದೀರ್ಘವಾದ ಚಿಂತನೆ ಮಂಥನಗಳ ಬಳಿಕ ಡಾ| ಬಿ.ಆರ್ ಅಂಬೇಡ್ಕರ್‍ರವರ ಅಂತಿಮ ಮಾರ್ಗದರ್ಶನದ ಪ್ರಕಾರ ರಚಿಸಲ್ಪಟ್ಟ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನವಾದ ಭಾರತದ ಸಂವಿಧಾನ ನಿರ್ಧಿಷ್ಟ, ಧರ್ಮ, ಜಾತಿ, ತತ್ವ ಸಿದ್ಧಾಂತಗಳಿಗೆ ಸೀಮಿತವಾಗದೆ ಸಮಸ್ತ ಮನುಕುಲಕ್ಕೆ ಯೋಗ್ಯವಾದ ಮಾನವೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆಯೆಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಪ್ರತಿಭಾದಿಸಿದರು.

ಅವರು ಸವಣೂರಿನ ಮುಈನುಸ್ಸುನ್ನಾ ವಿದ್ಯಾ ಸಂಸ್ಥೆಯಲ್ಲಿ ಈ ಜಿಲ್ಲಾ ಸಮಿತಿ ವತಿಯಿಂದ ನಡೆದ ರಿಪಬ್ಲಿಕ್ ಮೀಟ್ ಹಾಗೂ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸವಣೂರು ಪುರಸಭೆಯ ಅಧ್ಯಕ್ಷರಾದ ಖಲಂದರ್ ಅಹ್ಮದ್ ಎಂ. ಅಕ್ಕೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಕನ್ನಡ ಭಾಷಣಗಾರ ಕೆ.ಎಂ ಮುಸ್ತಫಾ ನಈಮಿ ರಿಪಬ್ಲಿಕ್ ಸಂದೇಶ ನೀಡಿದರು.

ಈ ರಾಜ್ಯ ನಾಯಕರಾದ ಆರಿಫ್ ರಝಾ ತುಮಕೂರ್‍ರವರು ಹೊಸ ಸಮಿತಿಗೆ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ಕೊಟ್ಟರು. ಸವಣೂರು ಅಂಜುಮನ್ ಸಂಸ್ಥೆ ಅಧ್ಯಕ್ಷ ಜನಾಬ್ ಜಿಶಾನ್ ಪಠಾಣ್, ಜನಾಬ್ ಇಕ್ಬಾಲ್ ರಾಣೆಬೆನ್ನೂರು, ಅಲ್‍ಹಾಜ್ ಮುಹ್ಸಿನ್ ರಿಫಾಯಿ ಹಾವೇರಿ, ಬಾಬನ್ ಸಾಬ್ ರಾಯಚೂರು ಹುಸೈನ್ ಸಅದಿ ಹೊಸ್ಮಾರ್, ಇರ್ಫಾನ್ ರಾಜಾಬಾಯಿ ಕಾಗಿನೆಲೆ, ಯಾಸೀನ್ ಸಖಾಫಿ ಮುಂತಾದವರು ಭಾಗವಹಿಸಿದ್ಧರು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here