Wednesday 18th, May 2022
canara news

ಫೆ.4: ಕಲೀನಾದಲ್ಲಿನ ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ರವಿ ರಾ.ಅಂಚನ್ ಅವರ `ಜ್ಯೋತಿಬಾ : ಬೆಳಕು-ಬೆರಗು' ಕೃತಿ ಬಿಡುಗಡೆ

Published On : 02 Feb 2017   |  Reported By : Rons Bantwal


ಮುಂಬಯಿ, ಫೆ.02: ಮಹಾನರಗದಲ್ಲಿ ಹೆಸರಾಂತ ಹಿರಿಯ ಸಾಹಿತಿ, ಲೇಖಕ, ಚಿಂತಕ, ವಾಗ್ಮಿ, ಅಂಕಣಕಾರ ರವಿ ರಾ.ಅಂಚನ್ ಇವರ ಇಪ್ಪತ್ತನೆಯ ಕೃತಿ `ಜ್ಯೋತಿಬಾ : ಬೆಳಕು-ಬೆರಗು' ಇದೇ ಬರುವ ಫೆ.4ನೇ ಶನಿವಾರ ಅಪರಾಹ್ನ 2.00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿ ಅಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬ ಯಿ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನದಲ್ಲಿ (ದೂರವಾಣಿ: 9323290500) ಲೋಕಾರ್ಪಣೆ ಗೊಳ್ಳಲಿದೆ.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ನಾಮಾಂಕಿತ ಪ್ರಕಾಶಕರಾದ ಸ್ವಪ್ನ ಪ್ರಕಾಶನವು ಪ್ರಕಾಶಿತÀ ರವಿ ಅಂಚನ್‍ರ ಬಾಳಸಂಗಾತಿ ಸ್ವರ್ಗಸ್ಥ ಶೈಲಜಾ ರವಿ ಅಂಚನ್ ಸ್ಮರಣಾರ್ಥ ಪ್ರಕಟಿತ ಕೃತಿಯನ್ನು ಕನ್ನಡದ ಸೇನಾನಿ ಎಸ್.ಕೆ ಸುಂದರ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ಣಾಟಕ ಮಲ್ಲ ದೈನಿಕದ ಸಂಪಾದಕರೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಕೃತಿ ಪರಿಚಯಿಸಲಿದ್ದಾ ರೆ.

ಈ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಸಂಪನ್ನ ಮನಸ್ಸುಗಳೂ ಉಪಸ್ಥಿತರಿರುವಂತೆ ಡಾ| ಅಕ್ಷರಿ ರ.ಅಂಚನ್ ಮತ್ತು ಐಸಿರಿ ರ.ಅಂಚನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here