Thursday 25th, April 2024
canara news

ದಾನಗಳಲ್ಲಿ ಶ್ರೇಷ್ಟ ದಾನ ರಕ್ತದಾನ, ಈ ಒಂದು ಸುಂದರ ಕಾರ್ಯದಲ್ಲಿ ತೊಡಗಿಕೊಂಡಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯಕ್ರಮಗಳು ಶ್ಲಾಘನೀಯ- ಮೊಯ್ದೀನ್ ಬಾವ

Published On : 02 Feb 2017   |  Reported By : Rons Bantwal


ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಅಲ್-ಹುನೈನ್ ಅಸೋಷಿಯೇಶನ್(ರಿ) ಕೃಷ್ಣಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ ಕೃಷ್ಣಾಪುರದ ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಶಾಸಕರಾದ ಜನಾಬ್ ಮೊಯ್ದೀನ್ ಬಾವ ರಕ್ತದ ಕೊರತೆಯಿಂದ ಒಂದು ಜೀವವನ್ನು ಬದುಕಿಸುವಂತಹ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯಕ್ರಮ ಶ್ಲಾಘನೀಯ ಇದೊಂದು ಸ್ವರ್ಗದ ದಾರಿಗೆ ಖಚಿತ ಪಡಿಸುವ ಉಚಿತ ಸೇವೆಯಾಗಿದೆ.ಮನುಷ್ಯ ಹುಟ್ಟಿದ ನಂತರ ಸಾವು ಖಚಿತ ಆದರೆ ಅದೆಷ್ಟೋ ಜೀವಗಳು ರಕ್ತದ ಕೊರತೆಯಿಂದ ಸುಂದರ ಜೀವನಕ್ಕೆ ನಾದಿಹಾಡುತ್ತಿದ್ದಾರೆ.ಇದಕ್ಕೆ ಪೂರಕವಾದ ಕಾರ್ಯಕ್ರಮ ನಡೆಸಲು ನಾವು ಸನ್ನದ್ಧರಾಗಬೇಕಿದೆ.

ಶಿಬಿರದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು, 123 ಯುನಿಟ್ ರಕ್ತವನ್ನು ಸ್ವೀಕರಿಸಲಾಯಿತು.

ಜನಾಬ್ ಮಮ್ತಾಝ್ ಅಲಿ (ಚೇರ್ ಮಾನ್ ಮಿಸ್ಬಾ ವುಮೆನ್ಸ್ ಕಾಲೇಜು ಕೃಷ್ಣಾಪುರ) ಪಿ.ಎಮ್.ಉಸ್ಮಾನ್. ಅಯಾಝ್ ಕಾರ್ಪೊರೇಟರ್, ಇಫ್ತಿಕಾರ್(ಅಧ್ಯಕ್ಷರು-ಅಲ್-ಹುನೈನ್ ಅಸ್ಸೋಷಿಯೇಶನ್), ಅಬೂಬಕರ್ ಟಿ.ಎಮ್.ಇಕ್ಬಾಲ್ ಕೆನರಾ, ಬ್ಲಡ್ ಹೆಲ್ಪ್ ಲೈನ್ ಸ್ಥಾಪಕಾಧ್ಯಕ್ಷರಾದ ನಿಸಾರ್ ದಮ್ಮಾಮ್ ಉಳ್ಳಾಲ,ಮುಸ್ತಫಾ ಅಡ್ಡೂರು ದೆಮ್ಮಲೆ, ಶೇಖ್ ಫಯಾಝ್ ಬೈಂದೂರು,ಕೆ.ಎ.ಮೊಹಮ್ಮದ್ ಅಶ್ರಫ್ ಸಖಾಫಿ, ಹಕೀಂ ಪಾಲ್ಕನ್,ಮೊಹಮ್ಮದ್ ಇಸ್ಮಾಯಿಲ್ ಕಬೀರ್ ಚೊಕ್ಕಬೆಟ್ಟು, ಉಸ್ಮಾನ್ ಪ್ಯಾರಡೈಸ್,ಬಶೀರ್ ಕೃಷ್ಣಾಪುರ,ಶಾಫಿ,ಸತ್ತಾರ್ ಹಾಗೂ ಇನ್ನಿತರರು ಶಿಬಿರದಲ್ಲಿ ಭಾಗವಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here