Friday 26th, April 2024
canara news

ಗೊಂದಲದ ಗೂಡು ಮೂಲ್ಕಿ ಸಬ್ ರಿಜಿಸ್ತ್ರಾರ್ ಕಚೇರಿ

Published On : 02 Feb 2017   |  Reported By : Roshan Kinnigoli


ಸರ್ಕಾರಕ್ಕೆ ಹೆಚ್ಚಿ ಆದಾಯ ಬರುತ್ತಿರುವ ಮೂಲ್ಕಿಯ ಸಬ್ ರಿಜಿಸ್ತ್ರಾರ್ ಕಚೇರಿ ಒಂದಲ್ಲ ಒಂದು ರೀತಿಯಲ್ಲಿ ಗೊಂದಲದ ಗೂಡಾಗಿದ್ದು ವಿದ್ಯುತ್ ಬಿಲ್ಲನ್ನು ಸರಿಯಾಗಿ ಪಾವತಿಸದ ಕಾರಣ ಕಳೆದ ಮೂರು ತಿಂಗಳಿನಿಂದ ನಿರಂತರ ವಿದ್ಯುತ ಸಂಪರ್ಕ ಕಡಿತದಿಂದ ಜನರಿಗೆ ಸಮಸ್ಯೆಯಾಗುತ್ತಿದೆ,ಶೌಚಾಲಯ,ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಕೊರಗುತ್ತಿದೆ.

ಮೂಲ್ಕಿಯ ಸಬ್ ರಿಜಿಸ್ತ್ರಾರ್ ಕಚೇರಿಯಲ್ಲಿ ಇಂದು ವಿದ್ಯುತ್ ಬಿಲ್ಲು ಬಾಕಿಯಿರಿಸಿದ ಕಾರಣ ಮೆಸ್ಕಾಂ ಇಲಾಖೆಯವರು ವಿದ್ಯುತ್ ನಿಲುಗಡೆಗೊಳಿಸಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ.ಕಚೇರಿಯಲ್ಲಿರುವ ಜನರೇಟರ್ ಕೂಡ ಹಾಳಾಗಿದ್ದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ದೂರದ ಉರುಗಳಿಂದ ನೊಂದಾವಣೆಗೆ ಬಂದ ಹೆಚ್ಚಿನ ಜನರು ಸಮಸ್ಯೆಯಿಂದ ಕಂಗಲಾಗಿದ್ದಾರೆ.ಬಳಿಕ ಸಬ್ ರಿಜಿಸ್ತ್ರಾರ್ ರವರು ವಿದ್ಯುತ್ ಬಿಲ್ಲು ಪಾವತಿ ಮಾಡಿದ ಬಳಿಕ ಮಧ್ಯಾಹ್ನದ ಅವ„ಯಲ್ಲಿ ವಿದ್ಯುತ್ ಮರು ಸಂಪರ್ಕ ಕಲ್ಪಿಸಲಾಗಿದೆ.

ಜನರೇಟರ್ ಹಾಳಾಗಿದ್ದರೂ ದುರಸ್ತಿ ಮಾಡದಿರುವುದರಿಂದ ಹಾಗೂ ವಿದ್ಯುತ್ ಬಿಲ್ಲು ಕಟ್ಟದಿರುವುದರಿಂದ ಸಮಸ್ಯೆಯಾಗಿರುವ ಬಗ್ಗೆ ಜನರು ಆಕ್ರೋಶ ಗೊಂಡಿದ್ದಾರೆ. ಮೂಲ್ಕಿ ಹೋಬಳಿಯ ಕಿಲ್ಪಾಡಿ,ಕಟೀಲು,ಮೆನ್ನಬೆಟ್ಟು,ಐಕಳ,ಹಳೆಯಂಗಡಿ,ಪಡಪಣಂಬೂರು,ಕೆಮ್ರಾಲ್,ಕಿನ್ನಿಗೋಳಿ,ಅತಿಕಾರಿಬೆಟ್ಟು,ಬಳ್ಕುಂಜೆ ಹಾಗೂ ಕಾರ್ಕಳ ತಾಲೂಕಿನ ಮುಂಡ್ಕೂರು ಮತ್ತು ಸುತ್ತ ಮುತ್ತಲಿನ ಪ್ರದೇಶ,ಉಡುಪಿ ಜಿಲ್ಲೆಯ ಹೆಜಮಾಡಿ,ಪಡುಬಿದ್ರಿ,ನಂದಿಕೂರು ಮತ್ತು ಸುತ್ತ ಮುತ್ತಲಿನ ಪ್ರದೇಶ,ಸುರತ್ಕಲ್ ಪರಿಸರದ ಚೇಳಾಯರು ಮತ್ತಿತರ ಪ್ರದೇಶಗಳ ವ್ಯಾಪ್ತಿಯನ್ನ ಒಳಗೊಂಡ ಮೂಲ್ಕಿ ಸಬ್ ರಿಜಿಸ್ತ್ರಾರ್ ಕಚೇರಿಯಲ್ಲಿ ಪ್ರತಿ ದಿನ ಹೆಚ್ಚಿ ನ ಸಂಖ್ಯೆಯಲ್ಲಿ ಜಾಗದ ರಿಜಿಸ್ತ್ರೇಷನ್ ಹಾಗು ವಿವಾಹ ಮತ್ತಿತರ ನೊಂದಣೆಗಳು ನಡೆಯುತ್ತಿರುತ್ತದೆ.

ಮೂಲ್ಕಿ ಸಬ್ ರಿಜಿಸ್ತ್ರಾರ್ ಕಚೇರಿಗೆ ಪ್ರತಿ ತಿಂಗಳು ಸುಮಾರು 8 ರಿಂದ 10000 ರೂ ವರೆಗೆ ವಿದ್ಯುತ್ ಬಿಲ್ಲು ಬರುತ್ತಿದ್ದು ಕಚೇರಿಯು ನವಂಬರ್ 2016 ರ ವರೆಗೆ 44,000 ರೂ ವಿದ್ಯುತ್ ಬಿಲ್ಲನ್ನು ಬಾಕಿಯಿರಿಸಿತ್ತು.ಈ ಬಗ್ಗೆ ಮೆಸ್ಕಾಂ ಇಲಾಖೆ ನೋಟಿಸ್ ನೀಡಿದ್ದು ಬಳಿಕ ನವಂಬರ್ ನಲ್ಲಿ 30000 ರೂ ಕಟ್ಟಿ 14000 ಬಾಕಿಯಿರಿಸಿಟ್ಟು.ಡಿಸೆಂಬರ್ ತಿಂಗಳಿನಲ್ಲಿ ಡಿಸೆಂಬರ್ ತಿಂಗಳಿನ ಬಿಲ್ಲು 9000 ಸೇರಿದಂತೆ ಒಟ್ಟು 23000 ಬಾಕಿಯಿದ್ದು ಬಿಲ್ಲು ಕಟ್ಟದ ಕಾರಣ ಡಿಸೆಂಬರ್ ತಿಂಗಳಿನ ಅಂತ್ಯದಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗಿತ್ತು.

ಆ ಸಂದರ್ಭದಲ್ಲಿ ಸಬ್ ರಿಜಿಸ್ತ್ರಾರ್ ರವರು ವಿದ್ಯುತ್ ಬಿಲ್ಲು ಕಟ್ಟುವುದಾಗಿ ತಿಳಿಸಿರುವುದರಿಂದ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು.ಡಿಸೆಂಬರ್ ಅಂತ್ಯದ ಬಳಿಕ ಜನವರಿ 30ರ ವರೆಗೆ ಬಾಕಿಯುಳಿದ ರೂ 23000 ಕಟ್ಟದ ಕಾರಣ ಇಂದು ಪುನ: ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸಲಾಗಿತ್ತು.ಜೊತೆಗೆ ಇಂದು ಜನರೇಟರ್ ಕೂಡ ಕ್ಯೆ ಕೊಟ್ಟಿದ್ದು ನೊಂದಾವಣೆಗೆ ಬೆಳಗ್ಗೆ ಬಂದ ಜನರು ಪರದಾಡುವಂತಾಯಿತು.ಅತ್ಯ„ಕ ಆದಾಯ ಬರುವ ಇಲ್ಲಿ ಪ್ರತಿದಿನ ಸುಮಾರು 50ಕ್ಕೂ ಮಿಕ್ಕಿ ಜನರು ಬರುತ್ತಿದ್ದು ಇಲ್ಲಿ ಶೌಚಾಲಯದ ವ್ಯವಸ್ತೆಯಿಲ್ಲ,ಮಹಿಳೆಯರು ಬೆಳಗ್ಗಿನಿಂದ ಸಂಜೆಯವರೆಗೆ ನಿಲ್ಲಬೇಕಾಗಿರುವುದರಿಂದ ಬಹಿರ್ದೇಸೆಗೆ ಪರದಾಟುವಂತಗಿದೆ,ಕುಡಿಯುವ ನೀರಿನ ವ್ಯವಸ್ತೆಯಿಲ್ಲ,ಜೊತೆಗೆ ಕುಳಿತು ಕೊಳ್ಳಲು ಸೂಕ್ತ ವ್ಯವಸ್ತೆ ಕೂಡ ಇಲ್ಲ.ಒಟ್ಟಾರೆ ಸರ್ಕಾರಕ್ಕೆ ಹೆಚ್ಚಿ ನ ಆದಾಯ ನೀಡುವ ಇಲ್ಲಿನ ಸಬ್ ರಿಜಿಸ್ತ್ರಾರ್ ಕಚೇರಿಯು ಮೂಲ ಭೂತ ಸೌಕರ್ಯಗಳಿಂದ ವಂಚಿತವಾಗಿದೆ.ಇಲ್ಲಿ ಜನರೇಟರ್ ಇದ್ದು ಅದನ್ನು ಹೊರಗಡೆ ಇಟ್ಟಿದ್ದು ಅದಕ್ಕೆ ಮಾಡಿನ ವ್ಯವಸ್ತೆಯಿಲ್ಲ.

ಮಳೆಗಾಲದಲ್ಲಿ ನೀರು ಬಿದ್ದು ತುಕ್ಕು ಹಿಡಿಯುವ ಪರಿಸ್ತಿತಿ ಬಂದಿದೆ. ಸಂಬಂಧ ಪÀಟ್ಟ ಇಲಾಖೆ ಕೂಡಲೇ ಎಚ್ಚೆತ್ತು ವಿದ್ಯುತ್ ಬಿಲ್ಲು ಸರಿಯಾಗಿ ಕಟ್ಟುವ ವ್ಯವಸ್ತೆ ಮಾಡಿ ಕುಡಿಯುವ ನೀರು ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವಂತೆ ಸ್ತಳೀಯರು ಒತ್ತಾಯಿಸಿದ್ದಾರೆ.ಚಿತ್ರ:30 ಸಬ್ ರಿಜಿಸ್ತ್ರಾರ್,1,2,3,4, ಬ್ಯೆಟ್ಸ್: ಗೋಪಾಲಕೃಷ್ಣ ಸಬ್ ರಿಜಿಸ್ತ್ರಾರ್ ಮೂಲ್ಕಿ ಕಚೇರಿ. ಕಚೇರಿಯಲ್ಲಿ ವಿದ್ಯುತ್ ಬಿಲ್ಲು ಕಟ್ಟಲು ಈಗ ಕೆ-12 ಮೂಲಕ ಆನ್ ವ್ಯವಸ್ತೆ ಮಾಡಿದ್ದು ಇಲಾಖೆಯಿಂದ ಅನುದಾನ ಬಂದಲ್ಲಿ ಮಾತ್ರ ವಿದ್ಯುತ್ ಬಿಲ್ಲು ಕಟ್ಟಲು ಸಾಧ್ಯವಿದ್ದು ನೇರವಾಗಿ ಪಾವತಿ ವ್ಯವಸ್ತೆಯಿಲ್ಲ.ಅನುದಾನ ಬರುವಾಗ ವಿಳಂಬವಾಗಿರುವುದರಿಂದ ವಿದ್ಯುತ್ ಬಿಲ್ಲು ಪಾವತಿಸುವಲ್ಲಿ ಸಮಸ್ಯೆಯಾಗಿತ್ತು.ಜನರೇಟರ್ ಹಾಳಾಗಿರುವುದು ಗಮನಕ್ಕೆ ಬಂದಿಲ್ಲ,ಜನರೇಟರ್ ದುರಸ್ತಿಯವರು ರವಿವಾರ ಬಂದಿದ್ದು ಅಂದು ರಜೆಯಿರುವುದರಿಂದ ದುರಸ್ತಿಯಾಗದಿದ್ದು ಇಂದು ನೊಂದಾವಣೆಗೆ ಬಂದವರಿಗೆ ವಿದ್ಯುತ್ ಕಡಿತ ಹಾಗೂ ಜನರೇಟರ್ ಹಾಳಾಗಿದ್ದರಿಂದ ಸಮಸ್ಯೆಯಾಗಿದೆ.

ಬೆಳಿಗ್ಗೆ ವಿದ್ಯುತ್ ಬಿಲ್ಲು ಪಾವತಿಸಿದ್ದು ಮಧ್ಯಾಹ್ನದ ಒಳಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ,ಸಮಸ್ಯೆ ಬಗೆಹರಿದಿದೆ,ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ. ರಾಮಕೃಷ್ಣ ಐತಾಳ್, ಸಹಾಯಕ ಕಾರ್ಯ ನಿರ್ವಾಹಕ ಅ„ಕ್ಷಕ ಮೂಲ್ಕಿ ಸಬ್ ರಿಜಿಸ್ತ್ರಾರ್ ಕಚೇರಿಯ ವಿದ್ಯುತ್ ಬಿಲ್ಲು ನವಂಬರ್ ತಿಂಗಳಿನಲ್ಲಿ 44000 ರೂ ಬಾಕಿಯಿದ್ದು ಈ ಬಗ್ಗೆ ನೋಟಿಸ್ ನೀಡಿ ಬಳಿಕ ಡಿಸೆಂಬರ್ ನಲ್ಲಿ ನಿಲುಗಡೆ ಮಾಡಿದ್ದೇವೆ.ಆ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಅ„ಕಾರಿಯವರು ವಿದ್ಯುತ್ ಬಿಲ್ಲು ಪಾವತಿಸುವುದಾಗಿ ತಿಳಿಸಿರುವುದರಿಂದ ಮರು ಸಂಪರ್ಕ ನೀಡಲಾಗಿದೆ,.ಡಿಸೆಂಬರ್ ನಿಂದ ಜನವರಿಯವರೆಗೆ ಬಾಖಿಯುಳಿದ ವಿದ್ಯುತ್ ಬಿಲ್ಲು ಕಟ್ಟದ ಕಾರಣ ನೋಟಿಸ್ ನೀಡದರೂ ಗಣನಗೆ ತೆಗೆದುಕೊಳ್ಳದಿರುವುದರಿಂದ ವಿದ್ಯುತ್ ಸ್ತಗಿತಗೊಳಿಸಲಾಗಿದೆ.ಇಂದು ಬಿಲ್ಲು ಕಟ್ಟ್ದಿದಾಗಿ ತಿಳಿಸಿದ್ದರಿಂದ ಕೂಡಲೇ ಮರು ಸಂಪರ್ಕ ನೀಡಲಾಗಿದೆ.

ಜೋಸೆಫ್ ಕ್ವಾಡ್ರಸ್ ಕಿನ್ನಿಗೋಳಿ ಇಂದು ಬೆಳಿಗ್ಗೆ ರಿಜಿಸ್ತ್ರೇಷನ್ ಗೆ ಬಂದಿದ್ದು ಇಲ್ಲಿ ವಿದ್ಯುತ್ ಸಂಪರ್ಕ ವಿಲ್ಲದಿರುವುದರಿಂದ ಹಾಗೂ ಜನರೇಟರ್ ಕೂಡ ಹಾಳಾಗಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ.ಇಲ್ಲಿ ಶೌಚಾಲಯವಿಲ್ಲ,ಕುಡಿಯುವ ನೀರಿನ ವ್ಯವಸ್ತೆಯಿಲ್ಲ.ಹೊರಗಡೆ ಕುಳಿತುಕೊಳ್ಳುವ ವ್ಯವಸ್ತೆ ಕೂಡ ಇಲ್ಲ. ದೂರದ ಊರುಗಳಿಂದ ಬರುವವರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಬಗ್ಗೆ ಅ„ಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಸಮಸ್ಯೆಗಳ ಬಗ್ಗೆ ಲೋಕಾಯುಕ್ತರಿಗೆ ತಿಳಿಸಲು ನೋಟಿಸ್ ಬೋರ್ಡಿನಲ್ಲಿ ಹಾಕಿದ್ದು ಆದರೆ ದೂರವಾಣಿ ಸಂಖ್ಯೆಯನ್ನು ನಮೂದಿಸಿಲ್ಲ.ಒಟ್ಟಾರೆ ಕೇವಲ ನೊಂದಾವಣೆಗೆ ಹಣ ಸಂಗ್ರಹಿಸುತ್ತಿದೆ ಹೊರತು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುತ್ತಿಲ್ಲ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here