Friday 4th, July 2025
canara news

ಉಪ್ಪಿನಕುದ್ರು ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

Published On : 02 Feb 2017   |  Reported By : Bernard J Costa


ಕುಂದಾಪುರ: ಉಪ್ಪಿನಕುದ್ರು ವಾಸುದೇವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರೇಮಲತಾ ಗಣೇಶ್‍ರವರಿಗೆ ರಾಜ್ಯಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಗಣರಾಜ್ಯೋತ್ಸವದಂದು ಅವರನ್ನು ಸನ್ಮಾನಿಸಿ ಗೌರವಿಸಿದರು.

 

ಅಂಗನವಾಡಿ ಕೇಂದ್ರಕ್ಕೆ ಹಿಂದಿನ ಶಾಸಕರು ಸ್ವಂತ ಕಟ್ಟಡವನ್ನು ಒದಗಿಸಿಕೊಟ್ಟಿದ್ದು, ಪರಿಸರದವರ ಸಹಕಾರದಿಂದ ಕಾರ್ಯಕರ್ತೆ ಪ್ರೇಮಲತಾ ಗಣೇಶ್ ಅಂಗನವಾಡಿಗೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದರು. 1913ರಲ್ಲಿ ದಶಮಾನೋತ್ಸವದ ಅಂಗವಾಗಿ ಏಳು ಅಂಗನವಾಡಿಗಳ ಮಕ್ಕಳ ಬ್ರಹತ್ ಬಾಲ ವಿಕಾಸ ಮೇಳವನ್ನು ಬೆಂಗಳೂರಿನ ಉದ್ಯಮಿ ಯು. ರಮೇಶ ಕಾರಂತರ ಪ್ರಾಯೋಜಕತ್ವದಲ್ಲಿ ನಡೆಸಲು ಈಕೆ ಶ್ರಮಿಸಿದ್ದಾರೆ. ಅವರ ಶೈಕ್ಷಣಿಕ ಸಾಧನೆ ಮತ್ತು ಮಕ್ಕಳ ಕಲಿಕೆಯ ಮಟ್ಟವನ್ನು ಗುರುತಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here