Friday 26th, April 2024
canara news

ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಡಾ.ಕೆ.ರವೀಂದ್ರನಾಥ ಪೂಂಜಾ ನಿಧನ

Published On : 03 Feb 2017   |  Reported By : Roshan Kinnigoli


ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಡಾ.ಕೆ. ರವೀಂದ್ರನಾಥ ಪೂಂಜಾ (74)ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನ ಹೊಂದಿದರು.

ಕೊಡೆತ್ತೂರು ಗುತ್ತಿನ ಪ್ರತಿನಿಧಿಯಾಗಿ ನ್ಯಾಯಾಲಯದ ತೀರ್ಮಾನದಂತೆ ಅನುವಂಶಿಕ ಮೊಕ್ತೇಸರರಾಗಿ ಡಾ.ಕೆ.ರವೀಂದ್ರನಾಥ ಪೂಂಜಾರವರು ಕಳೆದ ಜೂನ್ 1ರಂದು ಅಧಿಕಾರವನ್ನು ಪಡೆದಿದ್ದರು. ಚೆನ್ನೈನಲ್ಲಿ ಆವರು ತಮ್ಮ ವೈದ್ಯ ವೃತ್ತಿಯಲ್ಲಿ 50 ವರ್ಷವನ್ನು ಪೂರೈಸಿದ್ದರು, ಚೆನ್ನೈನ ಬಂಟರ ಸಂಘದ ಅಧ್ಯಕ್ಷರಾಗಿ, ಹೊರನಾಡ ಕನ್ನಡಿಗನ ನೆಲೆಯಲ್ಲಿ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದಿದ್ದರು. 2006ಲ್ಲಿ ಮದರ್ ತೆರೆಸಾ ಪ್ರಶಸ್ತಿಯಿಂದ ಪುರಸ್ಕøತರಾಗಿದ್ದ ರವೀಂದ್ರನಾಥ ಪೂಂಜಾರವರು 2008ರಲ್ಲಿ ವೈದ್ಯರ ಸಂಘಟನೆಯ ಐಎಂಎ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳನ್ನು ತಮ್ಮ ವೈದ್ಯ ವೃತ್ತಿಯಲ್ಲಿ ಪಡೆದಿದ್ದರು.

ಸರಳ ಸಜ್ಜನಿಕೆಯ ನಡವಳಿಕೆಯಿಂದ ಕಟೀಲು ದೇಗುಲದಲ್ಲಿ ಅನುವಂಶಿಕ ಮೊಕ್ತೇಸರರಾಗಿ ಗುರುತಿಸಿಕೊಂಡಿದ್ದ ಅವರು ತಮ್ಮ ಅಧಿಕಾರದ ಅತ್ಯಲ್ಪ ಅವಧಿಯಲ್ಲಿಯೂ ಸಾಕಷ್ಟು ಸುಧಾರಣೆ ತರಲು ಶ್ರಮಿಸುತ್ತಿದ್ದರು ಇತ್ತೀಚೆಗಷ್ಟೇ ದೇಗುದಲ್ಲಿ ಜನಪ್ರತಿನಿಧಿಗಳ ಸಹಿತ ಸಭೆಯೊಂದನ್ನು ನಡೆಸಿ ದೇವಳದಲ್ಲಿ ಕುಂಠಿತವಾಗಿರುವ ಯೋಜನೆಗಳಿಗೆ ಚಾಲನೆ ನೀಡಿ ಅಭಿವೃದ್ಧಿಯತ್ತ ಸಾಗಲು ಚಿಂತನೆ ನಡೆಸಿದ್ದರು ಎಂದು ದೇವಳದ ಅರ್ಚಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಡಾ.ರವೀಂದ್ರನಾಥ ಪೂಂಜಾರವರು ಮಂಗಳೂರಿನ ಕರಂಗಲ್ಪಾಡಿಯ ಖಾಸಗಿ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿ ಮತ್ತು ಒರ್ವ ಪುತ್ರ ಇದ್ದಾರೆ. ಶುಕ್ರವಾರ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಮೃತರು ದೇವಳದ ಶಾಲೆಯ ಸಂಚಾಲಕರು ಆಗಿರುವುದರಿಂದ ಅವರ ಶೋಕಾರ್ಥ ರಜೆಯನ್ನು ನೀಡಲಾಗಿತ್ತು. ದೇವಳಕ್ಕೆ ಸಂಬಂಧಿಸಿದ ಅಂಗಡಿ ಮುಂಗಟ್ಟುಗಳು ಬಂದ್ ನಡೆಸಿ ಹರತಾಳ ನಡೆಸಿತ್ತು. ದೇವಸ್ಥಾನದಲ್ಲಿನ ಪೂಜೆ ಪುರಸ್ಕರಾಗಳು ಎಂದಿನಂತೆ ನಡೆದವು.

ಅಷ್ಟಮಂಗಲ ಪ್ರಶ್ನೆ ಮುಂದೂಡಿಕೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದ ಅಷ್ಟಮಂಗಲ ಪ್ರಶ್ನೆಯನ್ನು ಗುರುವಾರ ಡಾ.ರವೀಂದ್ರನಾಥ ಪೂಂಜಾರವರ ನಿಧನದಿಂದ ಮೊಟಕುಗೊಳಿಸಲಾಗಿದೆ. ಕೇರಳದ ತ್ರಿಶೂರ್‍ನ ಕೈಮುಕ್ಕ ನಾರಾಯಣ ನಂಬೂದಿರಿ ಅವರ ನೇತೃತ್ವದಲ್ಲಿ ದೇವಳದ ಶಾಸ್ತ್ರೋಕ್ತ ಅಭಿವೃದ್ಧಿ ಹಾಗೂ ಹಾಗೂ ಎರಡು ವರ್ಷದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಸಂಕಲ್ಪಗಳ ಹಿನ್ನಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಬುಧವಾರ ರವೀಂದ್ರನಾಥ ಪೂಂಜಾರವರು ಪ್ರಶ್ನೆಯಲ್ಲಿ ಭಾಗವಹಿಸಿದ್ದರು ಗುರುವಾರ ಮುಂದುವರಿದಿತ್ತಾದರೂ ಇದೀಗ ಅವರ ನಿಧನದಿಂದ ಮುಂದಿನ ಜೂನ್‍ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವಳದ ಪ್ರಮುಖರು ತಿಳಿಸಿದ್ದಾರೆ.

ವರದಿ- ಕೆನರಾ ನ್ಯೂಸ್ ಪ್ರತಿನಿಧಿ ವರದಿ-ಕಟೀಲು

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here